Get Updates
Get notified of breaking news, exclusive insights, and must-see stories!

ಮಂಡ್ಯದಲ್ಲಿ ಕಮಲ ಅರಳಿಸ್ತೇವೆ ಎಂದು ಬಿಜೆಪಿ ಸೇರ್ಪಡೆಯಾದ ಎಲ್​.ಆರ್. ಶಿವರಾಮೇಗೌಡ

ಬೆಂಗಳೂರು, ಏಪ್ರಿಲ್5: ರಾಜ್ಯ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಇತ್ತ ಹಲವು ರಾಜಕೀಯ ಪಕ್ಷಗಳು ಭರ್ಜರಿ ಸಿದ್ದತೆ ನಡೆಸಿದ್ದು, ಈ ಬಾರೀ ಮತ್ತೆ ಅಧಿಕಾರಕ್ಕೆ ಬರಲು ಸಿದ್ದತೆ ನಡೆಸಿರುವ ರಾಜ್ಯ ಬಿಜೆಪಿ ಹಳೇ ಮೈಸೂರು ಭಾಗದ ಮೇಲೆ ಕಣ್ಣೀಟ್ಟಿದೆ.

ಮಂಡ್ಯ ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಘೋಷಣೆ ಬೆನ್ನಲ್ಲೇ ಮಾಜಿ ಸಂಸದ ಎಲ್​ಆರ್ ಶಿವರಾಮೇಗೌಡ ಅವರು ಬಿಜೆಪಿ ಪಕ್ಷಕ್ಕೆ ಬೆಂಬಲ ಘೋಷಿಸಿದ್ರೂ. ಇದೀಗ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

Karnataka Elections 2023: Expelled Mandya JDS Leader LR Shivarame Gowda joins BJP Today

ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಮಾತನಾಡಿ,ನರೇಂದ್ರ ಮೋದಿಯವರ ಆಡಳಿತ, ಯಡಿಯೂರಪ್ಪ, ಬೊಮ್ಮಾಯಿಯವರ ನೇತೃತ್ವವನ್ನು ಒಪ್ಪಿ ಶಿವರಾಮೇಗೌಡರು ಮತ್ತು ಇತರರು ಪಕ್ಷ ಸೇರಿದ್ದಾರೆ. ಇದರಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ, ಹಳೆ ಮೈಸೂರು, ಕಿತ್ತೂರು ಕರ್ನಾಟಕ ಭಾಗದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಪಕ್ಷ ಸೇರ್ಪಡೆಯಾಗಿದ್ದಾರೆ. ಭಾರತವನ್ನು ಜಗದ್ವಂದ್ಯ ಮಾಡುವ ರಾಜಕಾರಣ ನಮ್ಮದು. ಬೇರೆ ಪಕ್ಷಗಳು ಪರಿವಾರವಾದ, ಕುಟುಂಬವಾದದಲ್ಲಿ ನಂಬಿಕೆ ಇಟ್ಟಿವೆ. ಬಿಜೆಪಿ ಬಲ ರಾಜ್ಯದಾದ್ಯಂತ ವೃದ್ಧಿಸಿದೆ. ಮುಂದಿನ ಸರಕಾರ ನಮ್ಮದೇ. ಆ ಬಹುಮತದ ಸರಕಾರಕ್ಕೆ ಸ್ವಾಗತ ಕೋರೋಣ ಎಂದು ತಿಳಿಸಿದರು.

ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಹಾಗೂ ಕಾಂಗ್ರೆಸ್‌ನ ಲೋಕೇಶ್ ನಾಯ್ಕ್ ಸೇರಿದಂತೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನ ಹಲವು ನಾಯಕರು ಬಿಜೆಪಿ ಸೇರ್ಪಡೆಯಾಗಿದ್ದು, ಈ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧನಾ ಕಾರ್ಯದರ್ಶಿ ಸಿಟಿ ರವಿ ಹಾಗೂ ಸಚಿವ ಸುಧಾಕರ್ ಸೇರಿ‌ ಹಲವು ನಾಯಕರು ಉಪಸ್ಥಿತರಿದ್ದರು.

ಬಿಜೆಪಿ ಸೇರ್ಪಡೆಯಾದ ಬಳಿಕ ಶಿವರಾಮೇಗೌಡ ಮಾತನಾಡಿ, ಇನ್ನು 10 ದಿನಗಳಲ್ಲಿ ಹಲವು ಮಂದಿ ಬಿಜೆಪಿ ಸೇರಲಿದ್ದಾರೆ. ಕರ್ನಾಟಕದ ಜನರು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವನ್ನು ಬಯಸುತ್ತಾರೆ, ಕರ್ನಾಟಕದಲ್ಲಿ ಬಿಜೆಪಿ ಬಹುಮತದ ಸರ್ಕಾರ ರಚಿಸಲಿದೆ ಎಂದು ಹೇಳಿದ್ದಾರೆ.

Karnataka Elections 2023: Expelled Mandya JDS Leader LR Shivarame Gowda joins BJP Today

ಇನ್ನೂ ಬಿಜೆಪಿ ಶಿಸ್ತಿನ ಪಕ್ಷ ನಾನು ಬೇರೆ ಪಕ್ಷಗಳ ಬಗ್ಗೆ ನಾನು ಮಾತಾಡಲ್ಲ, ನಾನು ಇದುವರೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಪ್ರಬಲ ಹೋರಾಟ ಮಾಡಿ ಬೆಳೆದವನು. ಇವೆರಡೂ ಪಕ್ಷಗಳಲ್ಲಿ ಮಂಡ್ಯ ಭಾಗದಲ್ಲಿ ಉಸಿರುಗಟ್ಡುವ ವಾತಾವರಣ ಇದೆ, ಮೋದಿಯವರು ಎಲ್ಲೆಡೆ ಅಭಿವೃದ್ಧಿ ಮಾಡ್ತಿದಾರೆ. ಮಂಡ್ಯದ ನೆಲದಲ್ಲಿ ಮೋದಿ ಬಂದು ಬೃಹತ್ ಸಮಾವೇಶದಲ್ಲಿ ಪಕ್ಷ ಕಟ್ಟುವ ಕರೆ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಲು ನಾನು ಸಿದ್ಧ ಎಂದು ತಿಳಿಸಿದರು.

ಕಾಂಗ್ರೆಸ್-ಜೆಡಿಎಸ್ ನವ್ರು ದೊಂಬರಾಟ ಆಡುತ್ತಿದಾರೆ. ಮಂಡ್ಯದಲ್ಲಿ ಕಮಲ ಅರಳಿಸ್ತೇವೆ, ಇದುವರೆಗೆ ಮೂರನೇ ಶಕ್ತಿಯಾಗಿದ್ದ ಬಿಜೆಪಿ ಈ ಬಾರಿ ಪ್ರಥಮ ಶಕ್ತಿ ಆಗಿ ಹೊರಹೊಮ್ಮುತ್ತದೆ.ಬಿಜೆಪಿಯ ಕಟ್ಟುಪಾಡುಗಳು ನನಗೆ ಗೊತ್ತಿದೆ, ಅದನ್ನೆಲ್ಲ ಒಪ್ಪಿಯೇ ಪಕ್ಷಕ್ಕೆ ಬಂದಿದ್ದೇನೆ ಎಂದು ಹೇಳಿದರು.

ಈ ವೇಳೆ ಸಚಿವ ಶ್ರೀರಾಮುಲು ಮಾತನಾಡಿ, ಲೋಕೇಶ್ ನಾಯ್ಕ್ ಅವರು ನಮ್ಮ ಪಕ್ಷಕ್ಕೆ ಸೇರಿದಾರೆ. 2018 ರಲ್ಲಿ ಕಾಂಗ್ರೆಸ್ ನಿಂದ ಕೂಡ್ಲಿಗಿಯಲ್ಲಿ ಸ್ಪರ್ಧಿಸಿದರು, ಲೋಕೇಶ್ ನಾಯ್ಕ್ ಪಕ್ಷಕ್ಕೆ ಬಂದಿರೋದು ದೊಡ್ಡ ಶಕ್ತಿ ನಮಗೆ. ಲೋಕೇಶ್ ನಾಯಕ್ ಅವರು ಯುತ್ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದರು, ಹಿಂದೆ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು ಲೋಕೇಶ್ ನಾಯಕ್ ಸೇರ್ಪಡೆ ಆಗಿರುವುದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಪಕ್ಷಕ್ಕೆ ಆನೆ ಬಲ ಬಂದಿದೆ ಎಂದು ಹೇಳಿದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಡಾ. ಸುಧಾಕರ್, ಗೋಪಾಲಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ಜಿಲ್ಲಾಧ್ಯಕ್ಷರಾದ ಉಮೇಶ್, ಸಂಜಯ್ ಪಾಟೀಲ್ ಮತ್ತಿತರರು ಇದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+