ಕಾಂಗ್ರೆಸ್ ಸಂಪುಟ ರಚನೆಗೆ ದಶಸೂತ್ರಗಳನ್ನ ಸಿದ್ದಪಡಿಸಿದ ಕೈ ಪಡೆ! ಹತ್ತು ಸೂತ್ರಗಳು ಇಲ್ಲಿವೆ.

ಬೆಂಗಳೂರು, ಮೇ 16: ಐತಿಹಾಸಿಕ ಗೆಲುವು ಸಾಧಿಸಿರುವ ಕಾಂಗ್ರೆಸ್‌ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌ ಕಸರತ್ತು ಮುಂದುವರೆದಿದ್ದು, ಸಮರ್ಥ ಆಯ್ಕೆಯ ಮುಖ್ಯಮಂತ್ರಿ, ಉತ್ತಮ ಸಂಪುಟ ರಚನೆಗೂ ಹೈಕಮಾಂಡ್‌ ಎಚ್ಚರಿಕೆಯನ್ನ ವಹಿಸಿದೆ.

ಈಗಾಗಲೇ ರಾಜ್ಯದಲ್ಲಿ ಮೂರು ವರ್ಷಗಳ ಆಡಳಿತ ನಡೆಸಿದ ಬಿಜೆಪಿ ಹೀನಾಯವಾಗಿ ಸೋಲು ಕಂಡಿದ್ದು, ಕಾಂಗ್ರೆಸ್‌ ನ ಐತಿಹಾಸಿಕ ಗೆಲುವಿಗೆ ಕಾರಣವಾಗಿರುವ ಸುನಿಲ್‌ ಕನುಗೋಳ್‌, ರಾಜ್ಯದ ಜನರ ಮನಃಸ್ಥಿತಿ ಅರಿತು, ಸ್ಪಂದನೆಯ ಭರವಸೆ ಮೂಲಕ ರಾಜ್ಯಾದ್ಯಂತ ಕಾಂಗ್ರೆಸ್‌ ಪರವಾದ ಅಲೆ ಎಬ್ಬಿಸಿ ಪಕ್ಷಕ್ಕೆ ಅಭೂತಪೂರ್ವ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಕಾಂಗ್ರೆಸ್‌ ಚುನಾವಣಾ ತಂತ್ರಗಾರಿಕೆಯಲ್ಲಿಯೂ ನಿರ್ಣಯಕ ಪ್ರಾತ್ರ ವಹಿಸಿದ್ದಾರೆ.

Karnataka Elections 2023: Congress Make A 10 Points Plan For New Cabinet Formation

ಅಲ್ಲದೇ ಬಿಜೆಪಿ ಸರ್ಕಾರದ ವೈಪಲ್ಯಗಳನ್ನ ಕಾಂಗ್ರೆಸ್‌ ನಾಯಕರು ಯಾವ ರೀತಿಯಲ್ಲಿ ಜನರಿಗೆ ತಲುಪಿಸಬೇಕು ಹಾಗೂ ರಾಜ್ಯದ ಮಹಿಳೆಯವರು, ಮಾಧ್ಯಮ ವರ್ಗದ ಜನರು ಹಾಗೂ ಯುವ ಸಮುದಾಯವನ್ನ ಪರಿಗಣಿಸಿ ರಾಜ್ಯದಲ್ಲಿ ತಂದು ಗ್ಯಾರಂಟಿ ಘೋಷಣೆಯ ಸೂತ್ರದಾರಿಯೂ ಸುನಿಲ್‌ ಕನುಗೋಳ್‌ ಅವರೇ ಆಗಿದ್ದಾರೆ

ಈಗಾಗಲೇ ಹೈಕಮಾಂಡ್‌ ಸಮರ್ಥ ಸಂಪುಟ ರಚನೆಗೆ ಸೂಚನೆ ನೀಡಿದ್ದು, ಅದರಂತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ, ಎಐಸಿಸಿ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್‌ ಹಾಗೂ ಚುನಾವಣಾ ಕಾರ್ಯತಂತ್ರದ ಉಸ್ತುವಾರಿ ಸುನಿಲ್‌ ಕನುಗೋಳ್‌ ಅವರು ಹೊಸ ಸಚಿವ ಸಂಪುಟ ರಚನೆ ಸಂಬಂಧ ದಶಸೂತ್ರ ನೀಡಿದ್ದಾರೆ. ಈಗಾಗಲೇ ಮುಂಬರುವ ಸವಾಲುಗಳು ಹಾಗೂ 2024 ರ ಲೋಕಸಭಾ ಚುನಾವಣೆ ಹಿನ್ನಲೆ ಪಕ್ಷ ಸಂಘಟನೆ ಸೇರಿದಂತೆ ಹತ್ತು ಹಲವು ವಿಷಯಗಳನ್ನ ಗಮನದಲ್ಲಿಟ್ಟುಕೊಂಡು ಈ ದಶಸೂತ್ರ ನೀಡಿದ್ದಾರೆ.

ಇನ್ನೂ ಸಚಿವ ಸಂಪುಟಕ್ಕೆ ಆಯ್ಕೆಯಾಗುವ ಸಚಿವರ ಆಯ್ಕೆಯಲ್ಲಿ ಕೆಲವು ಮಾನದಂಡಗಳನ್ನೇ ಅನುಸರಿಸುವಂತೆ ಸೂಚಿಸಲಾಗಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಸೇರಿದಂತೆ ಹಲವು ನಾಯಕರು ಸಭೆ ನಡೆಸಿದ್ದು ಈ ಈ ಸೂತ್ರ ಸಿದ್ಧ ಪಡಿಸಲಾಗಿದೆ ಎಂದು ತಿಳಿದು ಬಂದಿದೆ.

Karnataka Elections 2023: Congress Make A 10 Points Plan For New Cabinet Formation

ಕಾಂಗ್ರೆಸ್ ಸರ್ಕಾರ ರಚನೆಗೆ ದಶಸೂತ್ರಗಳು ಇಲ್ಲಿವೆ!

1. 2013 ರ ಸಚಿವ ಸಂಪುಟದಲ್ಲಿ ಕಾರ್ಯದಕ್ಷತೆ ಇಲ್ಲದವರಿಗೆ ಈ ಬಾರಿ ಸಂಪುಟದಲ್ಲಿ ಅವಕಾಶ ಇರುವುದಿಲ್ಲ

2. ನೂತನ ಸಂಪುಟದದಲ್ಲಿ ಯುವ ಮುಖಗಳಿಗೆ ಮಣೆ

3.ಲೋಕಸಭೆ ಚುನಾವಣೆ ಮುಂದಿಟ್ಟುಕೊಂಡು ಸಂಪುಟ ರಚನೆ

4. ಪ್ರಣಾಳಿಕೆ ಸಮರ್ಥವಾಗಿ ಜಾರಿಗೊಳಿಸೋರಿಗೆ ಜವಾಬ್ದಾರಿ

5. ಬಿಜೆಪಿ ಸರ್ಕಾರದ ಸಚಿವರ ಬಳಿ ಕಾರ್ಯನಿರ್ವಹಿಸಿದ್ದ ಸಿಬ್ಬಂದಿ, ಆಪ್ತ ಕಾರ್ಯದರ್ಶಿಗಳನ್ನ ನೇಮಿಸಿಕೊಳ್ಳುವಾಗ ಎಚ್ಚರಿಕೆ ಹೆಜ್ಜೆ

6. ಸಂಪುಟಕ್ಕೆ ಯಾರನ್ನೇ ಸೇರಿಸಿಕೊಳ್ಳಲು ಹೈಕಮಾಂಡ್‌ ಮಾನದಂಡ ಅನುಸರಿಸಬೇಕು

7.ಶಾಸಕಿಯರಿಗೆ ಉತ್ತಮ ಖಾತೆ ನೀಡಲು ಪ್ಲ್ಯಾನ್‌

8. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ ಹಿಂಬಾಲಕ ಶಾಸಕರು ಪಕ್ಷ ಸಂಘಟನೆಗೆ ಆದ್ಯತೆ ನೀಡುವವರಿಗೆ ಸಂಪುಟದಲ್ಲಿ ಮಣೆ

9. ಪರಿಷತ್‌ ಸದಸ್ಯರುಗಳಿಗೆ ಸಂಪುಟದಲ್ಲಿ ಅವಕಾಶಕ್ಕೆ ತಿರ್ಮಾನ

10. ಆಡಳಿತ ಯಂತ್ರಕ್ಕೆ ಸರ್ಜರಿ. ಸಮರ್ಥ ಅಧಿಕಾರಿಗಳಿಗೆ ಹೊಣೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+