ಮೋದಿ, ಅಮಿತ್ ಶಾ ಶ್ರಮಕ್ಕೆ ಸಿಕ್ಕಿದೆ ಪ್ರತಿಫಲ: ಟ್ವೀಟಿಗರ ಹರ್ಷೋದ್ಗಾರ.!

ಕರ್ನಾಟಕ ವಿಧಾನಸಭೆ ಚುನಾವಣೆ 2018 ರ ಫಲಿತಾಂಶ ಹೊರಬೀಳುತ್ತಿದೆ. ಕರ್ನಾಟಕದ ಹಲವು ಕಡೆ ಕಮಲ ಅರಳಿದೆ. ಸರಳ ಬಹುಮತದತ್ತ ಬಿಜೆಪಿ ದಾಪುಗಾಲು ಹಾಕುತ್ತಿದೆ.

ಅಧಿಕಾರ ವಿರೋಧಿ ಅಲೆ ಇಲ್ಲ ಎಂದು ಇಷ್ಟು ದಿನ ಹೇಳುತ್ತಿದ್ದವರು ಇವತ್ತು ಅಕ್ಷರಶಃ ದಿಗ್ಭ್ರಾಂತರಾಗಿದ್ದಾರೆ. ಸದ್ಯದ ಟ್ರೆಂಡ್ ಪ್ರಕಾರ, 106 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಇನ್ನೂ ಕಾಂಗ್ರೆಸ್ 75 ಹಾಗೂ ಜೆಡಿಎಸ್ 39 ಕ್ಷೇತ್ರಗಳಲ್ಲಿ ಲೀಡಿಂಗ್ ನಲ್ಲಿದೆ.

ಇಂದು ಮಧ್ಯಾಹ್ನದ ವೇಳೆಗೆ ಫಲಿತಾಂಶದ ಪೂರ್ಣ ಚಿತ್ರಣ ಸಿಗಬಹುದು. ಅಷ್ಟರಲ್ಲಾಗಲೇ, ಟ್ವಿಟ್ಟರ್ ನಲ್ಲಿ ರಾಜಕೀಯ ನಾಯಕರು ಫಲಿತಾಂಶದ ಬಗ್ಗೆ ಬಣ್ಣಿಸಲು ಆರಂಭಿಸಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತದತ್ತ ಮತ್ತೊಂದು ಹೆಜ್ಜೆ ಮುಂದಕ್ಕೆ ಇಟ್ಟಿರುವ ಬಿಜೆಪಿಗೆ ಹಲವು ನಾಯಕರು ಶುಭಾಶಯಗಳನ್ನು ತಿಳಿಸಿದ್ದರೆ, ಕೆಲವರು ಫಲಿತಾಂಶದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಂತಹ ಕೆಲವು ಆಯ್ದ ಟ್ವೀಟ್ ಗಳು ಇಲ್ಲಿವೆ, ನೋಡಿ...

ಅಮಿತ್ ಶಾ ಶ್ರಮದ ಪ್ರತಿಫಲ

''ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಅಮಿತ್ ಶಾ ಅವರ ಶ್ರಮದ ಪ್ರತಿಫಲವಾಗಿ ಬಿಜೆಪಿ 23ನೇ ರಾಜ್ಯವನ್ನು ಗೆದ್ದಿದೆ'' ಎಂದು ಬಿಜೆಪಿ ನಾಯಕ ವಿಜಯ್ ಗೋಯಲ್ ಟ್ವೀಟ್ ಮಾಡಿದ್ದಾರೆ.

Array

ಸೋಲಲು ನಾವು ಕಾರಣ, ರಾಹುಲ್ ಗಾಂಧಿ ಅಲ್ಲ

''ರಾಹುಲ್ ಗಾಂಧಿ ಅತ್ಯುತ್ತಮವಾಗಿ ಪ್ರಚಾರ ಮಾಡಿದರು. ಆದ್ರೆ, ಚುನಾವಣೆಯಲ್ಲಿ ನಾವು ಸೋತಿದ್ದೇವೆ. ನಾವು ಇಲ್ಲಿನ ನಾಯಕರಾಗಿ ಅವರ ಪ್ರಚಾರವನ್ನ ಸದ್ಬಳಕೆ ಮಾಡಿಕೊಳ್ಳಬೇಕಿತ್ತು. ಅದಾಗದ ಕಾರಣ ಎಲೆಕ್ಷನ್ ನಲ್ಲಿ ಸೋತಿದ್ದೇವೆ'' ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್-ಜೆ.ಡಿ.ಎಸ್ ಮೈತ್ರಿ ಆಗಿದ್ರೆ.?

''ಕರ್ನಾಟಕ ಚುನಾವಣೆಯಲ್ಲಿ ಗೆದ್ದವರಿಗೆ ನನ್ನ ಶುಭಾಶಯಗಳು. ಸೋತವರು ಮತ್ತೆ ಗೆಲ್ಲಲು ಹೋರಾಟ ನಡೆಸಿ. ಒಂದು ವೇಳೆ ಜೆ.ಡಿ.ಎಸ್ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದರೆ, ಫಲಿತಾಂಶ ಬೇರೆ ಆಗಿರುತ್ತಿತ್ತು'' ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಮೋದಿ ಸರ್ಕಾರಕ್ಕೆ ಜನರ ಬೆಂಬಲ ಇದೆ

''ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಜನರ ಬೆಂಬಲ ಇದೆ ಅನ್ನೋದಕ್ಕೆ ಕರ್ನಾಟಕ ಚುನಾವಣೆ ಫಲಿತಾಂಶವೇ ಉತ್ತಮ ಉದಾಹರಣೆ. ಈ ಸಮಯದಲ್ಲಿ ನಾನು ಬಿಜೆಪಿ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಶುಭಾಶಯಗಳನ್ನು ತಿಳಿಸುವೆ'' ಎಂದು ಬಿಜೆಪಿ ನಾಯಕ ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ.

ಭ್ರಷ್ಟ ಸರ್ಕಾರವನ್ನ ಜನರು ರಿಜೆಕ್ಟ್ ಮಾಡಿದ್ದಾರೆ

''ಭ್ರಷ್ಟ ಹಾಗೂ ಕೋಮುವಾದಿ ಸರ್ಕಾರವನ್ನ ಕನ್ನಡಿಗರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ'' ಎಂದು ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.

ಮ್ಯಾನ್ ಆಫ್ ಮ್ಯಾಚ್ ಇವರೇ.!

''ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶದ ಮ್ಯಾನ್ ಆಫ್ ಮ್ಯಾಚ್ ಅಮಿತ್ ಶಾ'' ಅಂತೆ.! ಹಾಗಂತ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ ಪ್ರೀತಿ ಗಾಂಧಿ ಟ್ವೀಟ್ ಮಾಡಿದ್ದಾರೆ.

ಪಕ್ಷ ಮುಖ್ಯ

''ನನ್ನ ಫಲಿತಾಂಶಕ್ಕಿಂತ ನನಗೆ ನನ್ನ ಪಕ್ಷದ ಫಲಿತಾಂಶ ಮುಖ್ಯ. ರಾಯರ ದಯೆಯಿಂದ ಗಡಿ ತಲುಪಿದೆ ನನ್ನ ಪಕ್ಷ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಸೆಲೆಬ್ರೇಷನ್ ಮಾಡಿದ ಕೇಂದ್ರ ಸಚಿವರು

ದೆಹಲಿಯ ಕೇಂದ್ರ ಕಛೇರಿಯಲ್ಲಿ ಕೇಂದ್ರ ಸಚಿವರಾದ ರವಿ ಶಂಕರ್ ಪ್ರಸಾದ್ ಹಾಗೂ ನಿರ್ಮಲಾ ಸೀತಾರಾಮ್ ಗೆಲುವಿನ ಸಂಭ್ರಮಾಚರಣೆ ಮಾಡಿದರು.

ಗಹಗಹಿಸಿ ನಕ್ಕ ಸುಬ್ರಮಣ್ಯ ಸ್ವಾಮಿ

ಇ.ವಿ.ಎಮ್ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಮಾಡುತ್ತಿರುವುದಕ್ಕೆ ಬಿಜೆಪಿ ಎಂ.ಪಿ ಸುಬ್ರಮಣ್ಯ ಸ್ವಾಮಿ ಪ್ರತಿಕ್ರಿಯೆ ಕೊಟ್ಟಿರುವುದು ಹೀಗೆ...

Array

ಇದು ಮೂರನೇ ಸೋಲು

''ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಏರಿದ್ಮೇಲೆ, ಇದು ಮೂರನೇ ಸೋಲು. ಕಾಂಗ್ರೆಸ್ ನ ಪ್ರಧಾನಿ ಅಭ್ಯರ್ಥಿ ಅಂತ ಅವರೇ ಘೋಷಿಸಿಕೊಂಡಿದ್ದಾರೆ. ಈಗ ವಿರೋಧ ಪಕ್ಷದವರೆಲ್ಲ ಒಂದಾಗಬೇಕು ಅಂದ್ರೆ ಅದೂ ಆಗಲಿ. ಯಾಕಂದ್ರೆ, ದೇಶದ ಕೊಳಕೆಲ್ಲ ಒಂದು ಕಡೆ ಇರುತ್ತದೆ'' ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ರಾಥೋರ್ ಹೇಳಿದ್ದಾರೆ.

ಸಂಘ ಪರಿವಾರ ಮಾಡಿರುವ ಸಹಾಯ ಅಪಾರ

''ಕರಾವಳಿ ಕರ್ನಾಟಕದಲ್ಲಿ ಸಂಘ ಪರಿವಾರ ನಮಗೆ ಮಾಡಿರುವ ಸಹಾಯ ಅಪಾರ'' ಎಂದಿದ್ದಾರೆ ಬಿಜೆಪಿ ಪಕ್ಷದ ರಾಮ್ ಮಾಧವ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+