ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ, ಸತ್ಯಮೇವ ಜಯತೆ: ಕನ್ನಡಿಗರಿಗೆ ಧನ್ಯವಾದ ತಿಳಿಸಿದ ಕಾಂಗ್ರೆಸ್
ಬೆಂಗಳೂರು, ಮೇ 11: ತೀವ್ರ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶದ ಮತ ಎಣಿಕೆ ಬಹುತೇಕ ಮುಕ್ತಾಯ ಹಂತಕ್ಕೆ ಬರುತ್ತಿದ್ದು, ಈಗಾಗಲೇ ಕಾಂಗ್ರೆಸ್ ಪಕ್ಷದ 63 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇನ್ನೂ 69 ಕ್ಷೇತ್ರಗಳಲ್ಲಿದ್ದು ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ.
ಸದ್ಯ ಗೆಲುವಿನ ಸಂತಸದಲ್ಲಿರುವ ಕಾಂಗ್ರೆಸ್ ಕರುನಾಡಿನ ಜನತೆಗೆ ಧನ್ಯವಾದ ತಿಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಸತ್ಯಮೇವ ಜಯತೆ, 40% ಭ್ರಷ್ಟಾಚಾರದ ವಿರುದ್ಧ ಕನ್ನಡಿಗರ 100% ತಿರಸ್ಕಾರ. ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ, ಅಭಿಮಾನ, ಪ್ರೀತಿ ತೋರಿಸಿ ಮತ ಚಲಾಯಿಸಿದ ಕನ್ನಡಿಗರೆಲ್ಲರಿಗೂ ಅನಂತಾನಂತ ಧನ್ಯವಾದಗಳನ್ನು ಕಾಂಗ್ರೆಸ್ ಪಕ್ಷ ತಿಳಿಸಿದೆ.

ಕರ್ನಾಟಕದ ಮಹಾಜನತೆ ನಮಗೆ ನೀಡಿದ ಈ ಸಂಭ್ರಮಕ್ಕೆ ನಾವು ಋಣಿಯಾಗಿದ್ದೇವೆ. ಉತ್ತಮ ಜನಪರ ಆಡಳಿತದ ಮೂಲಕ ಕನ್ನಡಿಗರ ಋಣ ತೀರಿಸುತ್ತೇವೆ. ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ. ರಾಜ್ಯದ ಜನತೆಗೆ ಸುಭೀಕ್ಷೆಯ ದಿನಗಳನ್ನು ನಾವು ತರುವುದು ಗ್ಯಾರಂಟಿ ಎಂದು ಕಾಂಗ್ರೆಸ್ ತಿಳಿಸಿದೆ. ಅಲ್ಲದೇ ಕಾಂಗ್ರೆಸ್ ಘೋಷಿಸಿದ ಎಲ್ಲಾ 5 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕ ಆಡಳಿತ ನೀಡುತ್ತೇವೆ. ಕರ್ನಾಟಕದ ನಾಡು, ನುಡಿ ಅಸ್ಮಿತೆಗಳಿಗಳನ್ನು ಉಳಿಸಲು ಬದ್ಧವಾಗಿದ್ದೇವೆ. ಕ್ಷೇತ್ರಗಳ ಅಭಿವೃದ್ಧಿಗೆ, ರಾಜ್ಯದ ಪ್ರಗತಿಗೆ ಕಂಕಣ ಬದ್ಧವಾಗಿದ್ದೇವೆ. ಇದು ನಮ್ಮ ಎಲ್ಲಾ ಅಭ್ಯರ್ಥಿಗಳು ರಾಜ್ಯಕ್ಕೆ ನೀಡುತ್ತಿರುವ ವಾಗ್ಧಾನ. ಕಾಂಗ್ರೆಸ್ ಮಾಡುತ್ತಿರುವ ಪ್ರಮಾಣ ಎಂದು ಟ್ವೀಟ್‌ನಲ್ಲಿ ತಿಳಿಸಿದೆ.












Click it and Unblock the Notifications