Amit shah interview: ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕ ಸಿಎಂ ಯಾರಾಗ್ತಾರೆ? ಸಂದರ್ಶನದಲ್ಲಿ ಅಮಿತ್‌ ಶಾ ಹೇಳಿದ್ದೇನು?

ಬೆಂಗಳೂರು,ಮೇ 1: ಕರ್ನಾಟಕ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಆಡಳಿತರೂಢ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಹಲವು ತಂತ್ರಗಳನ್ನ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಕರ್ನಾಟಕದಲ್ಲಿ ರೋಡ್ ಶೋ, ಸಮಾವೇಶ ನಡೆಸಿದ್ದಾರೆ.

ಕನ್ನಡ, ಹಿಂದಿ ಹೇರಿಕೆ, ಮುಂದಿನ ಸಿಎಂ, ರಾಜ್ಯದಲ್ಲಿ ಕೇಂದ್ರದ ಅಭಿವೃದ್ಧಿ ಕೆಲಸ ಸೇರಿದಂತೆ ಕಾಂಗ್ರೆಸ್‌ ಗ್ಯಾಂರಟಿ ಯೋಜನೆ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ವಿಶೇಷ ಸಂದರ್ಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಹಲವು ವಿಚಾರಗಳ ಬಗ್ಗ ಮಾತನಾಡಿದ್ದು, ಕೆಲ ವಿಚಾರಗಳು ಈ ಕೆಳಗಿನಂತಿವೆ.

Amit shah

ಈ ಬಾರಿ ನಿಮಗೆ ಲಿಂಗಾಯತರ ಬಗ್ಗೆ ಟೆನ್ನನ್ ಇದೆಯಾ? ಎಂಬ ಪ್ರಶ್ನೆಗೆ ಅಮಿತ್‌ ಶಾ ಉತ್ತರಿಸಿ, ಸ್ವಲ್ಪವೂ ಟೆನ್ನನ್ ಇಲ್ಲ, ಕಾಂಗ್ರೆಸ್ ಏನು ಮಾಡಿದೆ ಅಂತ ಲಿಂಗಾಯತರು ಅವರಿಗೆ ವೋಟ್ ಹಾಕ್ತಾರೆ? ಕಾಂಗ್ರೆಸ್ 70 ವರ್ಷಗಳಲ್ಲಿ ಇಬ್ಬರು ಲಿಂಗಾಯತ ಮುಖ್ಯ ಮಂತ್ರಿಗಳನ್ನು ನೀಡಿದೆ. ಇಬ್ಬರನ್ನೂ ಅವಮಾನಿಸಿ ತೆಗೆದುಹಾಕಿದೆ. ಒಬ್ಬರನ್ನು ಇಂದಿರಾ ಗಾಂಧಿ ತೆಗೆದುಹಾಕಿದರು. ವೀರೇಂದ್ರ ಪಾಟೀಲ್‌ ಅವರನ್ನು ರಾಜೀವ್ ಗಾಂಧಿ ಏರ್ಪೋರ್ಟ್‌ ನಲ್ಲೇ ತೆಗೆದುಹಾಕಿ ದರು.ನಮ್ಮ ಮುಖ್ಯಮಂತ್ರಿ ಲಿಂಗಾಯತರು. ಯಡಿಯೂರಪ್ಪ ಅವರಂತಹ ಮಹಾನ್ ನಾಯಕರು ನಮ್ಮೊಂದಿಗೆ ಇದ್ದಾರೆ. ಲಿಂಗಾಯತ ಟೆನ್ಸಸ್ ಎಂಬ ಪ್ರಶ್ನೆಯೇ ಉದ್ಭವಿಸೋದಿಲ್ಲ ಎಂದು ಹೇಳಿದ್ದಾರೆ.

ಪೂರ್ಣ ಬಹುಮತದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ್ರೆ ಮುಖ್ಯಮಂತ್ರಿ ಮುಂದುವರೆಯುತ್ತಾರಾ? ಅಥವಾ ಬದಲಾವಣೆ ಆಗ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಚುನಾವಣೆಗಾಗಿ ಸಾಕಷ್ಟು ತಯಾರಿ ನಡೆಯುತ್ತಿದೆ. ಮುಖ್ಯಮಂತ್ರಿ ನಮ್ಮವರೇ ಇದ್ದಾರೆ. ಈ ಮಾತನ್ನ ನಾನು ಸ್ಪಷ್ಟಪಡಿಸ್ತೀನಿ, ಈಗಿನ ಮುಖ್ಯಮಂತ್ರಿ ನೇತೃತ್ವದಲ್ಲೇ ಚುನಾವಣೆ ನಡೀತಿದೆ.. ಚುನಾವಣೆ ಬಳಿಕ ಯಾವ ಪರಿಸ್ಥಿತಿ ಬರುತ್ತೋ? ಮೆಜಾರಿಟಿ ಇದ್ದಾಗ ಪಾರ್ಟಿ ನಿರ್ಣಯ ಮಾಡುತ್ತೆ ಎಂದು ಹೇಳಿದರು.

ಯಡಿಯೂರಪ್ಪ ಅವರನ್ನು ತೆಗೆದಿದ್ದು ತಪ್ಪು ನಿರ್ಧಾರ ಎಂದು ನಿಮಗೆ ಅನ್ನಿಸುತ್ತಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿ, ಸ್ವಲ್ಪವೂ ಇಲ್ಲ. ಯಡಿಯೂರಪ್ಪ ಅವರೇ ಸ್ವತಃ ನನಗೆ ಪಾರ್ಟಿಯಲ್ಲಿ 75 ವರ್ಷದ ನಿಯಮವಿದೆ. ಪಾರ್ಟಿ ಯಾವಾಗ ಹೇಳುತ್ತೋ ಆಗ ನಾನು ಹುದ್ದೆ ಬಿಡುತ್ತೇನೆ ಎಂದು ಹೇಳಿದರು. ಆಗ ನಾವೇನೂ ನಿರ್ಧಾರ ಮಾಡಿರಲಿಲ್ಲ.ಹೀಗಾಗಿ ಅದು ಸ್ವಲ್ಪ ಮುಂದೆ ಹೋಗಿತ್ತುಎಂದು ಹೇಳಿದರು.

Amit shah

ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ರೀತಿಯ ಲಿಂಗಾಯತ ನಾಯಕರೇ ಪಕ್ಷ ಬಿಟ್ಟು ಹೋಗಿದ್ದಾರಲ್ಲ? ಎಂಬ ಪ್ರಶ್ನೆಯ ಕುರಿತು ಮಾತನಾಡಿ, ಇಬ್ಬರೂ ಕೂಡ 30 ಸಾವಿರ ಅಂತರದಲ್ಲಿ ಸೋಲ್ತಾರೆ. ಕೌಂಟಿಂಗ್ ಅಮೇಲೆ ನನಗೆ ಕಾಲ್ ಮಾಡಿ ನನಗೆ ಹುಬ್ಬಳ್ಳಿಯ ಸಂಘಟನೆ 1990ರಿಂದಲೂ ಗೊತ್ತು. ಹುಬ್ಬಳ್ಳಿಯಲ್ಲಿ ವ್ಯಕ್ತಿಗೆ ವೋಟ್ ಕೊಡೋದಿಲ್ಲ, ಪಾರ್ಟಿಗೆ ವೋಟ್ ಕೊಡ್ತಾರೆ. ಶೆಟ್ಟ‌ರ್‌ ಅವರನ್ನು ಜನರು ಶಾಸಕ, ಉಪಮುಖ್ಯಮಂತ್ರಿ, ಮುಖ್ಯ ಮಂತ್ರಿ, ವಿಪಕ್ಷ ನಾಯಕ ಹೀಗೆ ಎಲ್ಲವನ್ನೂ ಮಾಡಿದರು. ಆದರೆ ಒಂದು ಸಲ ಟಿಕೆಟ್ ಕೊಡಲ್ಲ ಅಂದಿದ್ದಕ್ಕೆ ಅವರು ಸಿದ್ಧಾಂತವನ್ನೇ ಮರೆತು ಕಾಂಗ್ರೆಸ್‌ಗೆ ಹೋದರು. ಬಿಜೆಪಿ ಕಾರ್ಯಕರ್ತ ಯಾವತ್ತಾದರೂ ಕಾಂಗ್ರೆಸ್ ಜೊತೆ ಹೋಗುವುದು ಸಾಧ್ಯವೇ? ಎಂದು ಹೇಳಿದರು.

ತುಂಬಾ ಸರ್ವೇ ಮಾಡಿಸುತ್ತೀರಿ ನೀವು.. ನಿಮಗೆ ಎಷ್ಟು ಸ್ಥಾನ ಬರಬಹುದು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸರ್ವೇಗಿಂತ ಕಾರ್ಯಕರ್ತರ ಮೇಲೆ ಹೆಚ್ಚು ವಿಶ್ವಾಸವಿದೆ, ನಾನು ಕಾರ್ಯಕರ್ತರ ಮೇಲೆ ಹೆಚ್ಚು ವಿಶ್ವಾಸವನ್ನ ಇಡುತ್ತೇನೆ. ತುಂಬಾ ಚಾನೆಲ್‌ಗಳಲ್ಲಿ ಬಿಜೆಪಿ ಹಿಂದಿದ್ದಾರೆ ಅಂದರು. ಚುನಾವಣೆ ಘೋಷಣೆ ಆದ್ಮೇಲೆ ಸ್ವಲ್ಪ ಮುಂದಿದ್ದಾರೆ ಅಂದ್ರು. ಚುನಾವಣೆ ದಿನ ಸಮ ಮಾಡಿ ತೋರಿಸ್ತಾರೆ.. ಎಕ್ಸಿಟ್ ಪೋಲ್‌ನಲ್ಲಿ ಗೆಲ್ತಾರೆ ಅಂತಾರೆ. ಕೊನೆಗೆ ನಾವು ಗೆಲ್ತೇವೆ. ನನಗೆ ಅನಿಸುತ್ತೆ ಮೆಜಾರಿಟಿಗಿಂತ ಕನಿಷ್ಠ 15ಕ್ಕೂ ಹೆಚ್ಚು ಸ್ಥಾನ ಗೆಲ್ತೀವಿ ಎಂದು ಅಮಿತ್‌ ಶಾ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+