ಚುನಾವಣೆ ಎಫೆಕ್ಟ್: ಖಾಸಗಿ ಬಸ್ ದರದಲ್ಲಿ ಭಾರೀ ಏರಿಕೆ; ಪ್ರಯಾಣಿಕರಿಂದ ಹಿಡಿಶಾಪ

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಎರಡೇ ದಿನಗಳು ಬಾಕಿ ಉಳಿದಿದ್ದು, ಮೇ 10ರಂದು ರಾಜ್ಯದ 224 ಕ್ಷೇತ್ರಗಳಿಗೆ ಏಕಕಾಲದಲ್ಲಿ ಮತದಾನ ನಡೆಯಲಿದೆ. ಶಾಂತಿಯುತವಾಗಿ ಚುನಾವಣೆ ಪ್ರಕ್ರಿಯೆ ಮುಗಿಸಲು ಈಗಾಗಲೇ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

ಇನ್ನು ವಿಧಾನಸಭೆ ಚುನಾವಣೆ ಮತದಾನಕ್ಕಾಗಿ ಜನರು ಬೆಂಗಳೂರಿನಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಮತ್ತು ತವರು ಕ್ಷೇತ್ರಗಳಿಗೆ ತೆರಳುತ್ತಿದ್ದಾರೆ. ಇದೇ ವೇಳೆ ಖಾಸಗಿ ಬಸ್‌ಗಳ ಟಿಕೆಟ್ ದರ ಹೆಚ್ಚಳವಾಗಿದೆ. ಇತರ ಜಿಲ್ಲೆಗಳಿಂದ ರಾಜಧಾನಿ ಬೆಂಗಳೂರಿಗೆ ಉದ್ಯೋಗ ನಿಮಿತ್ತ ಬಂದವರ ಸಂಖ್ಯೆ ದೊಡ್ಡದಾಗಿದೆ.

Karnataka Election Effect: Private Bus Ticket Fares Hike From Bengaluru To Other Districts

ಚುನಾವಣೆ ಹಿನ್ನೆಲೆ ಮೇ 10ರಂದು ತಮ್ಮ ಅಮೂಲ್ಯ ಮತ ಚಲಾಯಿಸಲು ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್​ ಮಾಲೀಕರು, ಟಿಕೆಟ್ ದರವನ್ನು ಹೆಚ್ಚಳ ಮಾಡಿದ್ದಾರೆ. ಇದು ಪ್ರಯಾಣಿಕರ ಆಕ್ರೋಶದ ಕಟ್ಟೆಯೊಡೆಯಲು ಕಾರಣವಾಗಿದೆ. ಯಾವ ಜಿಲ್ಲೆಗೆ ಎಷ್ಟು ದರ ಹೆಚ್ಚಳ ಮಾಡಲಾಗಿದೆ ಎನ್ನುವುದರ ಮಾಹಿತಿ ಇಲ್ಲಿದೆ.

ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಬಸ್​ ದರ ಈ ಮೊದಲು 700 ರೂ.ನಿಂದ 800 ರೂ. ಇತ್ತು. ಇದೀಗ 1600ರಿಂದ 1800 ರೂ.ಗೆ ಏರಿದೆ. ಅದೇ ರೀತಿ ಬೆಂಗಳೂರಿನಿಂದ ಮಂಗಳೂರಿಗೆ 950 ರೂ. ಇದ್ದ ಟಿಕೆಟ್ ದರ ಇದೀಗ 2000 ರೂ.ನಿಂದ 2200ರೂ. ಆಗಿದೆ.

ಇನ್ನು ಬೆಂಗಳೂರಿನಿಂದ ಶಿವಮೊಗ್ಗಕ್ಕೆ 800 ರೂ.ನಿಂದ 900 ರೂ. ಇದ್ದ ದರ ಇದೀಗ 2000 ರೂ.ನಿಂದ 2200 ರೂ. ಆಗಿದೆ. ಉಡುಪಿಗೆ 900 ರೂ.ನಿಂದ 2200 ರೂ.ಗೆ ಏರಿಕೆಯಾಗಿದೆ.

Karnataka Election Effect: Private Bus Ticket Fares Hike From Bengaluru To Other Districts

ಬೆಳಗಾವಿಗೆ 1100 ರೂ.ನಿಂದ 2800 ರೂ.ಗೆ ಏರಿಕೆಯಾಗಿದ್ದರೆ, ಹಾಸನಕ್ಕೆ 650ರಿಂದ 2200 ರೂ.ಗೆ ಏರಿಕೆಯಾಗಿದೆ. ಚಿಕ್ಕಮಗಳೂರಿಗೆ 700 ರೂ. ಇದ್ದ ಟಿಕೆಟ್ ದರ 1500 ರೂ.ಗೆ ಏರಿಕೆಯಾಗಿದೆ.

ಕಲಬುರಗಿಗೆ 1400 ರೂ. ಇದ್ದ ಟಿಕೆಟ್ ದರ 2500 ರೂ.ಗೆ ಏರಿಕೆ ಕಂಡಿದೆ. ಬಾಗಲಕೋಟೆ 1400ರಿಂದ 2300 ರೂ., ಯಾದಗಿರಿ 1400 ರೂ.ನಿಂದ 1999 ರೂ., ಅಥಣಿಗೆ 1400 ರೂ.ನಿಂದ 2200 ರೂ.ಗೆ ಏರಿಕೆಯಾಗಿದೆ. ಕೊಡಗಿಗೆ 700 ರೂ.ನಿಂದ 1400 ರೂ., ಬಳ್ಳಾರಿಗೆ 900ರಿಂದ 2500 ರೂ.ಗೆ ಏರಿಸಲಾಗಿದೆ.

ಟಿಕೆಟ್ ದರ ಹೆಚ್ಚಳಕ್ಕೆ ಪ್ರಯಾಣಿಕರಿಂದ ಹಿಡಿಶಾಪ

ಖಾಸಗಿ ಬಸ್​ಗಳ ಟಿಕೆಟ್ ದರ ಹೆಚ್ಚಳವಾಗಿರುವ ಹಿನ್ನೆಲೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೊನ್ನೆಯಷ್ಟೇ 900 ಕೊಟ್ಟು ಬಂದಿದ್ದೆವು. ಇದೀಗ 1500ರಿಂದ 2000 ರೂ.ಗೆ ಟಿಕೆಟ್ ದರ ಏರಿಕೆ ಮಾಡಿದ್ದಾರೆ. ನಾವು ಊರಿಗೆ ಹೇಗೆ ಹೋಗುವುದು? ಮತ ಹಾಕುವುದು ಹೇಗೆ?, ಕೆಎಸ್‌ಆರ್‌ಟಿಸಿ ಬಸ್ ಬೇರೆ ಇಲ್ಲ ಎನ್ನುತ್ತಿದ್ದಾರೆ.

ಈ ಟಿಕೆಟ್ ದರ ನೋಡಿ ಬುಕ್ ಮಾಡಬೇಕಾ? ಬೇಡವಾ? ಅಂತಾ ಚಿಂತೆ ಮಾಡುತ್ತಿದ್ದೇವೆ. ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳದ ವಿರುದ್ಧ ಆರ್​ಟಿಒ ಅಧಿಕಾರಿಗಳು ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಬೆಂಗಳೂರಿನಿಂದ ದೂರದೂರಿಗೆ ಪ್ರಯಾಣಿಸುವ ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+