Get Updates
Get notified of breaking news, exclusive insights, and must-see stories!

Karnataka Election: ಮಾರ್ಚ್‌ 29ರಿಂದ ಈವರೆಗೆ ₹126 ಕೋಟಿ ಮೌಲ್ಯದ ವಸ್ತು, ನಗದು, ಮದ್ಯ ಜಪ್ತಿ, ವಿವರ

ಬೆಂಗಳೂರು, ಏಪ್ರಿಲ್ 12: ಕರ್ನಾಟಕದಲ್ಲಿ ಇನ್ನೊಂದು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಸಂಬಂಧ ಮಾರ್ಚ್‌ 29ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿ ಯಾಗಿದೆ. ಅಲ್ಲಿಂದ ಈವರೆಗೆ ಮತದಾರರನ್ನು ಓಲೈಕೆಗಾಗಿ ರಾಜ್ಯದಲ್ಲಿ ಸಾಗಣೆ ಮಾಡುತ್ತಿದ್ದ ಭಾರೀ ಪ್ರಮಾಣದ ಅಕ್ರಮ ನಗದು, ಬಂಗಾರ, ಮದ್ಯ, ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಚುನಾವಣೆ ದಿನಾಂಕ ಘೋಷಣೆ ಆದಾಗಿನಿಂದಲೇ (ಮಾರ್ಚ್ 29) ಸರ್ಕಾರದ ಇತರ ಇಲಾಖೆಗಳ ಅಧಿಕಾರಿಗಳು ಸಹಕಾರದಲ್ಲಿ ರಾಜ್ಯ ಚುನಾವಣೆ ಆಯೋಗ ಅಗತ್ಯ ತಪಾಸಣೆ ನಡೆಸುತ್ತಿದೆ. ರಾಜ್ಯಾದ್ಯಂತ ಹದ್ದಿನ ಕಣ್ಣಿಟ್ಟಿದ್ದು, ಆ ಮೂಲಕ ಪಾರದರ್ಶಕ ಚುನಾವಣೆಗೆ ಮುಂದಾಗಿದೆ.

Karnataka Election 2023: Goods, cash, liquor worth ₹126 crore seized from March 29 till April 12th

ಕಳೆದ 24 ಗಂಟೆಗಳಲ್ಲಿ ಚುನಾವಣಾಧಿಕಾರಿಗಳು 17.36 ಕೋಟಿ ರೂಪಾಯಿ ದಾಖಲೆ ಇಲ್ಲದ ನಗದು ಹಾಗೂ ಉಡಗೊರೆ ನೀಡಲು ಸಾಗಿಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಾರ್ಚ್ 29 ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಚುನಾವಣೆ ಆಯೋಗದ ಅಧಿಕಾರಿಗಳು ಒಟ್ಟು 126.14 ಕೋಟಿ ರೂ.ನಗದು ಹಣ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ರಾಜ್ಯದೆಲ್ಲೆಡೆ ಚುನಾವಣಾ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದರೂ, ಚುನಾವಣಾ ಅಕ್ರಮಗಳು ಮುಂದುವರಿದಿವೆ. ಬೆಂಗಳೂರುವೊಂದರಲ್ಲೇ ಸುಮಾರು 100 ಚೆಕ್‌ಪೋಸ್ಟ್ ನಿರ್ಮಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 126.14 ಕೋಟಿ ರೂ.ನಗದು ಹಣ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದುದರಲ್ಲಿ ಬೆಂಗಳೂರಿನದ್ದೇ ಸಿಂಹಪಾಲು ಇದೆ.

ಬೆಂಗಳೂರು: ₹53.83 ಕೋಟಿ ಮೌಲ್ಯದ ನಗದು-ವಸ್ತು ವಶ

ರಾಜ್ಯ ರಾಜಧಾನಿ ಬೆಂಗಳೂರುವೊಂದರಲ್ಲೇ ಮಾರ್ಚ್ 29 ರಿಂದ ಈವರೆಗೆ ಬೆಂಗಳೂರಿನಲ್ಲಿ 53.83 ಕೋಟಿ ರೂ. ಹಣ, ಮದ್ಯ, ಉಚಿತವಾಗಿ ನೀಡಲು ಸಾಗಿಸುತ್ತಿದ್ದ ಉಡುಗೊರೆಗಳನ್ನು ಜಪ್ತಿ ಮಾಡಲಾಗಿದೆ. ಇದು ರಾಜ್ಯದ ಅರ್ಧದಷ್ಟು ಅಕ್ರಮ ವಸ್ತು, ನಗದು ಬೆಂಗಳೂರಿನಲ್ಲಿ ಜಪ್ತಿ ಆಗಿದೆ.

Karnataka Election 2023: Goods, cash, liquor worth ₹126 crore seized from March 29 till April 12th

ಚುನಾವಣಾ ನೀತಿ ಸಂಹಿತೆ ಅನುಷ್ಠಾನದ ಬಳಿಕ ಇದುವರೆಗೆ ನಗರದಲ್ಲಿ ಬರೋಬ್ಬರಿ 1100ಕ್ಕೂ ಎಫ್‌ಐಆರ್‌ಗಳನ್ನು ಪೊಲೀಸರು ದಾಖಲಿಸಿದ್ದಾರೆ. ಒಟ್ಟು 8.26 ಕೋಟಿ ರೂಪಾಯಿ ನಗದು, 22.16 ಕೋಟಿ ರೂಪಾಯಿಯ ಮೌಲ್ಯದ ಅಕ್ರಮ ಮದ್ಯ, 9 ಕೋಟಿ ರೂಪಾಯಿ ಹೆಚ್ಚು ಮೌಲ್ಯದ ಮಾದಕ ವಸ್ತು (ಡ್ರಗ್ಸ್), 4.73 ಲಕ್ಷ ರೂಪಾಯಿ ಬೆಲೆಬಾಳು ಗೃಹಪಯೋಗಿ ವಸ್ತುಗಳು ಜಪ್ತಿಯಾಗಿವೆ. ಜೊತೆಗೆ 4.87 ಕೋಟಿ ರೂಪಾಯಿಯ ಉಡುಗೊರೆಗಳು ಹಾಗೂ 4.27 ಕೋಟಿ ರೂ. ಮೌಲ್ಯದ ವಾಹನಗಳು ಸೀಜ್ ಆಗಿವೆ.

ಮಲೆನಾಡು ಜಿಲ್ಲೆಯಲ್ಲೂ ಅಧಿಕ ಜಪ್ತಿ

ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಶಿವಮೊಗ್ಗ ನಗರದಲ್ಲೂ ಹೆಚ್ಚು ಚೆಕ್‌ಪೋಸ್ಟ್ ಸ್ಥಾಪಿಸಲಾಗಿದ್ದು, ಹೆಚ್ಚು ಸ್ಕ್ವಾಡ್ ತಂಡದ ಸಿಬ್ಬಿಂದಿ ನಿಯೋಜನೆ ಆಗಿದೆ. 2.4 ಕೋಟಿ ರೂ. ಮೌಲ್ಯದ 9.56 ಕೆ.ಜೆ. ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲೇ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕ್ಷೇತ್ರದಲ್ಲಿ 2.10 ಕೋಟಿ ರೂಪಾಯಿ, ಕೊಪ್ಪಳದಲ್ಲಿ 1.66 ಕೋಟಿ ರೂಪಾಯಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದಲ್ಲಿ 1.42 ಕೋಟಿ ರೂಪಾಯಿ ನಗದು ಹಣ ಚುನಾವಣಾ ಅಧಿಕಾರಿಗಳ ಪಾಲಾಗಿದೆ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿರುವ ಬಯಲಾಗಿದೆ. ದಿನಕ್ಕೆ ಸರಾಸರಿ ವಶಪಡಿಸಿಕೊಳ್ಳುತ್ತಿದ್ದ ಪ್ರಮಾಣವು ಸುಮಾರು 10 ಕೋಟಿ ರೂಪಾಯಿಯಷ್ಟು ಹೆಚ್ಚಳವಾಗಿದೆ. ಮಂಗಳವಾರ ಏಪ್ರಿಲ್ 11 ರಂದು 9.77 ಕೋಟಿ ರೂ. ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 2.47 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ, 2.10 ಕೋಟಿ ರೂ. ಮೌಲ್ಯದ ಮದ್ಯ ಮತ್ತು ಉಡುಗೊರೆ ಹಾಗೂ 1.63 ಕೋಟಿ ರೂಪಾಯಿ ನಗದು ಒಳಗೊಡಿದೆ.

ಸಿವಿಜಿಲ್ ಆಪ್ ಮೂಲಕ ಚುನಾಣೆ ಆಯೋಗಕ್ಕೆ 2,190 ದೂರುಗಳು ಸಲ್ಲಿಕೆಯಾಗಿವೆ. ಎನ್‌ಜಿಆರ್‌ಎಸ್ ಪೋರ್ಟಲ್ ಮೂಲಕ 3605 ದೂರುಗಳು ಆಯೋಗಕ್ಕೆ ಬಂದಿವೆ ಎಂದು ತಿಳಿದು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+