ಇಂದು ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ: ಟಿಕೆಟ್ ಯಾರಿಗುಂಟು ಯಾರಿಗಿಲ್ಲ.! ಡಿ.ಕೆ ಶಿವಕುಮಾರ್‌ ಕೊಟ್ಟ ಸುಳಿವೇನು?

ಬೆಂಗಳೂರು,ಏಪ್ರಿಲ್6: ಕರ್ನಾಟಕ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಅಧಿಕಾರದ ಗದ್ದುಗೆ ಏರಲು ಸಜ್ಜಾಗಿರುವ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸಿವೆ. ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನಿರಾಯಾಸವಾಗಿ ಬಿಡುಗಡೆ ಮಾಡಿ ಗೆದ್ದಿದ್ದ ಕಾಂಗ್ರೆಸ್‌ಗೆ ಉಳಿದಿರುವ 100 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ.

ಈಗಾಗಲೇ ರಾಜ್ಯ ಕಾಂಗ್ರೆಸ್‌ ನಾಯಕರು ಸಭೆ ನಡೆಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನ ಹೈಕಮಾಂಡ್‌ ಗೆ ಕಳುಹಿಸಿದ್ದು, ದೆಹಲಿಯಲ್ಲಿ ಕಳೆದ ಎರಡು ದಿನಗಳಿಂದ ಸಭೆ ನಡೆಸಿದ್ದು, ಅಂತಿಮವಾಗಿ 100 ಜನರ ಪೈಕಿ 43 ರಿಂದ 45 ಅಭ್ಯರ್ಥಿಗಳನ್ನ ಫೈನಲ್‌ ಆಗಿದೆ. ಇಂದು(ಗುರುವಾರ) ಬೆಳಗ್ಗೆ 11 ಗಂಟೆಯೊಳಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗುವುದು ಬಹುತೇಕ ಖಚಿತ ಎಂದು ಕಾಂಗ್ರೆಸ್‌ ಮೂಲಗಳಿಂದ ತಿಳಿದು ಬಂದಿದೆ.

Karnataka Election 2023 : Congress To Release The Second List Of 43 Candidates Today

ಇನ್ನೂ ಈ ಕುರಿತು ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ ಸಭೆ ಬಳಿಕ ಕೆಪಿಸಿಸಿ ಡಿ.ಕೆ.ಶಿವಕುಮಾರ್ ಮಾತನಾಡಿ, ಸೂರ್ಯ ಉದಯವಾಗುವ ತನಕ ಕಾಯಿರಿ ಎಂದು ಹೇಳಿದ್ದಾರೆ. ಅಂದ್ರೆ ಇಂದು ಬೆಳಗ್ಗೆ ಕಾಂಗ್ರೆಸ್​​​​ ಟಿಕೆಟ್ ಬಿಡುಗಡೆಯಾಗುವ ಸೂಚನೆಯನ್ನು ಡಿಕೆಶಿ ಕೊಟ್ಟಿದ್ದಾರೆ. ಇನ್ನೂ ಈ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಇಂದು ಬೆಳಗ್ಗೆ 11 ಗಂಟೆಯೊಳಗೆ ಟಿಕೆಟ್ ರಿಲೀಸ್ ಆಗಲಿದೆ ಎಂದಿದ್ದಾರೆ.

ಇನ್ನೂ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವುದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಎರಡನೇ ಪಟ್ಟಿಯಲ್ಲಿ ಎರಡನೇ ಕ್ಷೇತ್ರ ಇರುತ್ತಾ? ಎನ್ನುವುದು ಕುತೂಹಲ ಮೂಡಿಸಿದೆ. ಈಗಾಗಲೇ 124 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ಅವರಿಗೆ ವರುಣಾ ದಿಂದ ಟಿಕೆಟ್‌ ನೀಡಿದ್ದು, ಕೋಲಾರ ಕ್ಷೇತ್ರದಿಂದಲೂ ಟಿಕೆಟ್‌ ನೀಡಲಿದ್ದಾರೆ ಎಂದು ಹೇಳಲಾಗಿದೆ.

100 ಅಭ್ಯರ್ಥಿಗಳ ಫೈಕಿ ಬಾಕಿ ಉಳಿದಿರುವುದರಲ್ಲಿ ಶೇ.50ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಎರಡಕ್ಕಿಂತ ಹೆಚ್ಚು ಹೆಸರುಗಳು ಚುನಾವಣಾ ಸಮಿತಿ ಸಭೆ ಮುಂದೆ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಮಂಗಳವಾರವೇ ಪಕ್ಷದ ವರಿಷ್ಠ ರಾಹುಲ್‌ ಗಾಂಧಿ ಅವರು ಗರಂ ಆಗಿದ್ದರು. ಒಂದು ಅಥವಾ ಎರಡು ಹೆಸರುಗಳಿರುವ ಪಟ್ಟಿಯನ್ನಷ್ಟೇ ಚುನಾವಣಾ ಸಮಿತಿ ಮುಂದೆ ತನ್ನಿ ಎಂದು ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಖಡಕ್‌ ಸೂಚನೆ ನೀಡಿದ್ದರು. ಅದರಂತೆ ಮತ್ತೊಮ್ಮೆ ಸಭೆ ಸೇರಿದ ಸ್ಕ್ರೀನಿಂಗ್‌ ಕಮಿಟಿಯು ಎರಡಕ್ಕಿಂತ ಹೆಚ್ಚು ಹೆಸರುಗಳಿರುವ ಕ್ಷೇತ್ರಗಳಲ್ಲಿ ಸಂಭಾವ್ಯರ ಸಂಖ್ಯೆಯನ್ನು ಎರಡಕ್ಕಿಳಿಸುವ ಕಾರ್ಯವನ್ನು ಬುಧವಾರ ಮಧ್ಯಾಹ್ನದ ವೇಳೆಗೆ ಪೂರ್ಣಗೊಳಿಸಿದೆ.

Karnataka Election 2023 : Congress To Release The Second List Of 43 Candidates Today

ಇನ್ನೂ ಎರಡನೇ ಪಟ್ಟಿ ಗುರುವಾರ ಬಿಡುಗಡೆಯಾದರೂ ಅನಂತರದ ಪಟ್ಟಿಯೇನಿದ್ದರೂ ಬಿಜೆಪಿಯ ಪಟ್ಟಿ ಪ್ರಕಟವಾದ ನಂತರವೇ ಬಿಡುಗಡೆ ಮಾಡಲು ಹೈಕಮಾಂಡ್ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಯಾಕಂದ್ರೆ, ಕೆಲ ಬಿಜೆಪಿ ನಾಯಕರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿದ್ದು, ಅವರಿಗಾಗಿ ಟಿಕೆಟ್​ ಕಾಯ್ದಿರಿಸಿದೆ ಎಂದು ತಿಳಿದು‌ ಬಂದಿದೆ.

ಕಾಂಗ್ರೆಸ್‌ ಎರಡನೇ ಪಟ್ಟಿ ಸಂಭಾವ್ಯ ಅಭ್ಯರ್ಥಿಗಳು

ನಿಪ್ಪಾಣಿ: ಕಾಕಾ ಸಾಹೇಬ್ ಪಾಟೀಲ್

ಅಥಣಿ: ಗಜಾನನ ಮಂಗಸೂಳಿ

ಅರಭಾವಿ: ಅರವಿಂದ ದಳವಾಯಿ

ಗೋಕಾಕ್: ಅಶೋಕ್ ಪೂಜಾರಿ

ಬೆಳಗಾವಿ ಉತ್ತರ: ಫಿರೋಜ್ ಸೇಠ

ಕಿತ್ತೂರು: ಡಿ.ಬಿ. ಇಮಾನ್ದಾ‌

ಸವದತ್ತಿ : ಉದಯ್ ಕುಮಾರ್

ಮುದೋಳ್: ಆರ್ ಬಿ ತಿಮ್ಮಾಪುರ

ಬೀಳಗಿ: ಜಿ.ಟಿ ಪಾಟೀಲ್

ದೇವರಹಿಪ್ಪರಗಿ: ಎಸ್.ಆರ್. ಪಾಟೀಲ್

ಸಿಂದಗಿ: ಅಶೋಕ್ ಮನಗೂಳಿ

ಗುರುಮಠಕಲ್: ಬಾಬುರಾವ್ ಚಿಂಚನಸೂರ್

ಕಲ್ಬುರ್ಗಿ ಗ್ರಾಮೀಣ: ವಿಜಯ್ ಕುಮಾರ್

ಔರಾದ್: ಭೀಮರಾವ್ ಸಿಂಧೆ

ಮಾನ್ವಿ: ಹಂಪಯ್ಯ ನಾಯಕ್

ಸಿಂಧನೂರು: ಹಂಪನಗೌಡ ಬಾದರ್ಲಿ

ಗಂಗಾವತಿ: ಇಕ್ಬಾಲ್ ಅನ್ಸಾರಿ

ನರಗುಂದ :ಬಿ.ಆರ್ ಯಾವಗಲ್

ಶಿರಹಟ್ಟಿ: ರಾಮಕೃಷ್ಣ ದೊಡ್ಡಮನಿ ‌

ನವಲಗುಂದ: ಕೋನರೆಡ್ಡಿ

ಕಲಘಟಗಿ: ಸಂತೋಷ ಲಾಡ್

ಶಿರಸಿ: ಭೀಮಣ್ಣ ನಾಯ್

ಹರಿಹರ :ರಾಮಪ್ಪ

ಕಾರ್ಕಳ: ಉದಯ್ ಕುಮಾರ್ ಶೆಟ್ಟಿ

ಮೂಡಗೆರೆ :ನಯನಾ ಮೋಟಮ್ಮ

ಗುಬ್ಬಿ : ಶ್ರೀನಿವಾಸ್

ಯಲಹಂಕ: ಕೇಶವ್ ರಾಜಣ್ಣ

ಮಹಾಲಕ್ಷ್ಮೀ ಲೇಔಟ್ : ಕೇಶವಮೂರ್ತಿ

ಸಿವಿ ರಾಮನ್ ನಗರ : ಸಂಪತ್ ರಾಜ್

ಪದ್ಮನಾಭ ನಗರ: ಪಿಜಿಆರ್ ಸಿಂದ್ಯಾ

ಬೊಮ್ಮನಹಳ್ಳಿ : ಉಮಾಪತಿಗೌಡ

ಅರಸೀಕೆರೆ :ಶಿವಲಿಂಗೇಗೌಡ

ಮೊಳಕಾಲ್ಕೂರು :ಎನ್.ವೈ ಗೋಪಾಲಕೃಷ್ಣ

ತರೀಕೆರೆ : ಶ್ರೀನಿವಾಸ್

ಯಶವಂತಪುರ: ತಿಮ್ಮರಾಯಪ್ಪ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+