ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ, ಇಲ್ಲಿದೆ ಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಜೂನ್ 22 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದಾರೆ. ಭಾನುವಾರ ಸಂಪುಟ ಪುನಾರಚನೆ ಮಾಡಿ 13 ಸಚಿವರನ್ನು ಸಂಪುಟಕ್ಕೆ ಅವರು ಸೇರಿಸಿಕೊಂಡಿದ್ದರು.

ಮಂಗಳವಾರ ರಾತ್ರಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದ ಸಿದ್ದರಾಮಯ್ಯ ಅವರು, ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದರು. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮಂಡ್ಯ ಮತ್ತು ರಾಮನಗರ ಸೇರಿ ಎರಡು ಜಿಲ್ಲೆಗಳ ಉಸ್ತುವಾರಿಯನ್ನು ವಹಿಸಲಾಗಿದೆ. [ಯಾವ ಸಚಿವರಿಗೆ ಯಾವ ಖಾತೆ?]

district in-charge minister

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ [ಮೊದಲ ಬಾರಿ ಸಚಿವರಾದ 7 ಶಾಸಕರ ಪರಿಚಯ]

* ಬೆಂಗಳೂರು ನಗರ - ಕೆ.ಜೆ.ಜಾರ್ಜ್
* ಬೆಂಗಳೂರು ಗ್ರಾಮಾಂತರ - ಕೃಷ್ಣಬೈರೇಗೌಡ
* ರಾಮನಗರ, ಮಂಡ್ಯ - ಡಿ.ಕೆ.ಶಿವಕುಮಾರ್
* ಮೈಸೂರು - ಎಚ್.ಸಿ.ಮಹದೇವಪ್ಪ
* ಚಾಮರಾಜನಗರ - ಎಚ್.ಎಸ್.ಮಹದೇವ ಪ್ರಸಾದ್
* ಚಿಕ್ಕಬಳ್ಳಾಪುರ - ರಾಮಲಿಂಗಾ ರೆಡ್ಡಿ
* ಕೋಲಾರ - ರಮೇಶ್ ಕುಮಾರ್
* ತುಮಕೂರು - ಟಿ.ಬಿ.ಜಯಚಂದ್ರ
* ಶಿವಮೊಗ್ಗ - ಕಾಗೋಡು ತಿಮ್ಮಪ್ಪ
* ಉತ್ತರ ಕನ್ನಡ - ಆರ್.ವಿ.ದೇಶಪಾಂಡೆ
* ದಕ್ಷಿಣ ಕನ್ನಡ - ರಮಾನಾಥ ರೈ
* ಉಡುಪಿ - ಪ್ರಮೋದ್ ಮಧ್ವರಾಜ್
* ಕೊಡಗು - ಎಂ.ಆರ್.ಸೀತಾರಾಮ್
* ಚಿಕ್ಕಮಗಳೂರು - ಡಾ.ಜಿ.ಪರಮೇಶ್ವರ
* ಹಾಸನ - ಎ.ಮಂಜು
* ದಾವಣಗೆರೆ - ಎಸ್.ಎಸ್.ಮಲ್ಲಿಕಾರ್ಜುನ
* ಚಿತ್ರದುರ್ಗ - ಎಚ್.ಆಂಜನೇಯ
* ಹಾವೇರಿ - ರುದ್ರಪ್ಪ ಲಮಾಣಿ
* ಗದಗ -ಎಚ್.ಕೆ.ಪಾಟೀಲ್
* ಧಾರವಾಡ - ವಿನಯ ಕುಲಕರ್ಣಿ
* ಬೀದರ್ - ಈಶ್ವರ ಖಂಡ್ರೆ
* ಬಳ್ಳಾರಿ - ಸಂತೋಷ್ ಲಾಡ್
* ಬೆಳಗಾವಿ - ರಮೇಶ್ ಜಾರಕಿಹೊಳಿ
* ರಾಯಚೂರು - ತನ್ವೀರ್ ಸೇಠ್
* ವಿಜಯಪುರ - ಎಂ.ಬಿ.ಪಾಟೀಲ್
* ಬಾಗಲಕೋಟೆ - ಎಚ್.ವೈ.ಮೇಟಿ
* ಕೊಪ್ಪಳ - ಬಸವರಾಜರಾಯ ರೆಡ್ಡಿ
* ಕಲಬುರಗಿ - ಡಾ.ಶರಣಪ್ರಕಾಶ್ ಪಾಟೀಲ್
* ಯಾದಗಿರಿ - ಪ್ರಿಯಾಂಕ ಖರ್ಗೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Siddaramaiah, who had inducted 13 ministers to his cabinet recently, appointed district in-charge ministers. Here are the list.
Please Wait while comments are loading...