Karnataka Dam Water Level: ರಾಜ್ಯದಲ್ಲಿ ಭರ್ಜರಿ ಮಳೆ; 14 ಪ್ರಮುಖ ಜಲಾಶಯಗಳ ನೀರಿನ ಮಟ್ಟವೆಷ್ಟು? ಇಲ್ಲಿದೆ ವಿವರ
ಬೆಂಗಳೂರು, ಆಗಸ್ಟ್ 31: ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಮಳೆಯಾಗಿದೆ. ಅಬ್ಬರದ ಮಳೆಯಿಂದಾಗಿ ಕೆರೆ-ಕಟ್ಟೆಗಳು, ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿದ್ದು, ರಾಜ್ಯದ 14 ಪ್ರಮುಖ ಜಲಾಶಯಗಳು ತುಂಬಿ ಹರಿಯುತ್ತಿವೆ. ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ಒಟ್ಟಾರೆ 895.62 ಟಿ.ಎಂ.ಸಿ ಸಾಮಾರ್ಥ್ಯವಿದ್ದು, 824.26 ಟಿ.ಎಂ.ಸಿ ನೀರು ಸಂಗ್ರಹಣೆಯಾಗಿದ್ದು ಒಟ್ಟು ಸಾಮಾರ್ಥ್ಯದ ಶೇ.92ರಷ್ಟಿದೆ.
ವಿದ್ಯುತ್ ಉತ್ಪಾಧನೆ ಜಲಾಶಯಗಳಲ್ಲಿ ಶೇ.91ರಷ್ಟು, ಕಾವೇರಿ ಕಣಿವೆ 4 ಜಲಾಶಯಗಳಲ್ಲಿ ಶೇ.99ರಷ್ಟು, ಹಾಗೂ ಕೃಷ್ಣಾ ಕಣಿವೆ ವ್ಯಾಪ್ತಿ ಜಲಾಶಯಗಳಲ್ಲಿ ಶೇ.93ರಷ್ಟು ನೀರಿನ ಸಂಗ್ರಹಣೆಯಿದೆ. ಬಂಗಾಳ ಉಪಸಾಗರದಲ್ಲಿ ಭಾರೀ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಸೆಪ್ಟೆಂಬರ್ 3ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಲಾಶಯಗಳ ನೀರಿನ ಮಟ್ಟ ಇನ್ನಷ್ಟು ಹೆಚ್ಚಳವಾಗಲಿದೆ.

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಒಟ್ಟು 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 94.324 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಗೆ ಕೇವಲ 10 ಟಿಎಂಸಿ ನೀರು ಅವಶ್ಯಕತೆ ಇದೆ. ಬಂಗಾಳ ಉಪಸಾಗರದಲ್ಲಿ ಭಾರೀ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಸೆಪ್ಟೆಂಬರ್ 3ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೀದರ್, ರಾಯಚೂರು, ಯಾದಗಿರಿ, ಶಿವಮೊಗ್ಗ, ಚಿಕ್ಕಮಗಳೂರು, ಕಲಬುರಗಿ ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಮಲೆನಾಡಿನಲ್ಲಿ ಮತ್ತೆ ಮಳೆಯಾಗುವುತ್ತಿರುವುದರಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಹಾಗಾದರೆ ತುಂಗಭದ್ರಾ ಸೇರಿದಂತೆ ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ
| ಪ್ರಮುಖ ಜಲಾಶಯಗಳು | ಒಟ್ಟು ಸಾಮರ್ಥ್ಯ(ಟಿಎಂಸಿ) | ಇಂದಿನ ನೀರಿನ ಮಟ್ಟ(ಟಿಎಂಸಿ) | ಒಳಹರಿವು(ಕ್ಯೂಸೆಕ್ಸ್) |
| ಆಲಮಟ್ಟಿ ಜಲಾಶಯ | 123.08 | 117.20 | 1,66,760 |
| ತುಂಗಭದ್ರಾ ಜಲಾಶಯ | 105.79 | 94.324 | 34,431 |
| ಮಲಪ್ರಭಾ ಜಲಾಶಯ | 37.73 | 36.20 | 6,891 |
| ಕೆ ಆರ್ ಎಸ್ | 49.45 | 48.75 | 14,620 |
| ಲಿಂಗನಮಕ್ಕಿ ಜಲಾಶಯ | 151.75 | 146.08 | 19,414 |
| ಕಬಿನಿ ಜಲಾಶಯ | 19.52 | 18.96 | 6,628 |
| ಭದ್ರಾ ಜಲಾಶಯ | 71.54 | 66.88 | 12,137 |
| ಹೇಮಾವತಿ ಜಲಾಶಯ | 37.10 | 37.01 | 11,861 |
| ವರಾಹಿ ಜಲಾಶಯ | 31.10 | 23.30 | 2,677 |
| ಹಾರಂಗಿ ಜಲಾಶಯ | 8.50 | 8.32 | 2315 |
| ಸೂಫಾ | 145.33 | 129.94 | 14,287 |
| ನಾರಾಯಣಪುರ ಜಲಾಶಯ | 33.31 | 27.76 | 1,84,821 |
| ವಾಣಿವಿಲಾಸ ಸಾಗರ | 30.42 | 21.09 | 693 |
| ಘಟಪ್ರಭಾ ಜಲಾಶಯ | 51.00 | 50.34 | 22,470 |












Click it and Unblock the Notifications