Karnataka Dams Water Level: ಜೂನ್ 17ರಂದು ರಾಜ್ಯದ ಜಲಾಶಯಗಳ ಒಳ ಹರಿವು, ನೀರು ಸಂಗ್ರಹದ ಪಟ್ಟಿ
ಬೆಂಗಳೂರು, ಜೂನ್ 17: ಕರ್ನಾಟಕದಲ್ಲಿ ಅತ್ಯಧಿಕ ಮಳೆ ತಕ್ಕಮಟ್ಟಿಗೆ ಇಳಿಕೆ ಆಗಿದ್ದು, ಈವರೆಗೆ ಬಂದ ಸಾಧಾರಣದಿಂದ ಭಾರಿ ಮಳೆಯ ಕಾರಣದಿಂದಾಗಿಯೇ ರಾಜ್ಯದ ಜಲಾಶಯಗಳಲ್ಲಿ ನೀರಿನ ಒಳ ಮತ್ತು ಹೊರ ಹರಿವಿನ ಪ್ರಮಾಣದಲ್ಲಿ ಏರಿಕೆ ಆಗಿದೆ. ಕಬಿನಿ, ಹಾರಂಗಿ, ತುಂಗಭದ್ರಾ ಸೇರಿದಂತೆ ಅನೇಕ ಜಲಾಶಯಗಳ ಒಳಹರಿವು ಏರಿಕೆ ಆಗಿದೆ. ಮುಂದಿನ ದಿನಗಳಲ್ಲಿ ಈ ಹರಿವು ಇನ್ನಷ್ಟು ಏರಿಕೆ ಆಗುವ ಸಂಭವ ಇದೆ.
ಸೋಮವಾರ ಬೆಂಗಳೂರಿನ ಒಂದೆರಡು ಕಡೆಗಳಲ್ಲಿ ಬಿಸಿಲ ಮಧ್ಯೆಯು ಹಗುರ ಮಳೆ ದಾಖಲಾಗಿದೆ. ಇದೇ ರೀತಿ ಮಂಡ್ಯ, ಮೈಸೂರು, ಶ್ರೀರಂಗಪಟ್ಟಣ, ಹಾಸನ ಸೇರಿದಂತೆ ಮಲೆನಾಡಿನ ಭಾಗದಲ್ಲಿ ಅತ್ಯುತ್ತಮ ಮಳೆ ದಾಖಲಾಗಿದೆ. ಕೆಲವೆಡೆ ಮಳೆ ಮುಂದುವರಿದ ಪರಿಣಾಮ ರಾಜ್ಯದ ಜಲಾಶಯಗಳಲ್ಲಿ ಒಳಹರಿವು ಏರಿಕೆ ಆಗಿದೆ. ಸುತ್ತಮುತ್ತಲಿನ ಪ್ರದೇಶಗಳ ಜನರಲ್ಲಿ ನೆರೆ ಭೀತಿ ಆವರಿಸಿದೆ ಎನ್ನಬಹುದು.

KRS ಜಲಾಶಯದ ವಿವರ
ಒಟ್ಟು ಸಾಮರ್ಥ್ಯ - 49.451 ಟಿಎಂಸಿ
ಇಂದಿನ ಸಂಗ್ರಹ- 11 ಟಿಎಂಸಿ
ಒಳ ಹರಿವು - 2120 ಕ್ಯೂಸೆಕ್
ಹೊರ ಹರಿವು- 461 ಕ್ಯೂಸೆಕ್
* ಹೇಮಾವತಿ ಜಲಾಶಯ
ಒಟ್ಟು ಸಾಮರ್ಥ್ಯ- 37. 10 ಟಿಎಂಸಿ
ಇಂದಿನ ನೀರಿನ ಮಟ್ಟ - 10.46 ಟಿಎಂಸಿ
ಒಳಹರಿವು - 950 ಕ್ಯೂಸೆಕ್
ಹೊರಹರಿವು - 205 ಕ್ಯೂಸೆಕ್
* ತುಂಗಭದ್ರಾ ಜಲಾಶಯ
ಒಟ್ಟು ಸಾಮರ್ಥ್ಯ - 105.79 ಟಿಎಂಸಿ
ಇಂದಿನ ಸಂಗ್ರಹ - 5.2 ಟಿಎಂಸಿ
ಹೊರಹರಿವು - 300 ಕ್ಯೂಸೆಕ್
ಒಳಹರಿವು - 1470 ಕ್ಯೂಸೆಕ್

* ಹಾರಂಗಿ ಜಲಾಶಯ
ಒಟ್ಟು ನೀರಿನ ಸಾಮರ್ಥ್ಯ- 8.50 ಟಿಎಂಸಿ
ಇಂದಿನ ಸಂಗ್ರಹ - 3.20 ಟಿಎಂಸಿ
ಒಳಹರಿವು -400 ಕ್ಯೂಸೆಕ್
ಹೊರಹರಿವು - 180 ಕ್ಯೂಸೆಕ್
* ಲಿಂಗನಮಕ್ಕಿ ಜಲಾಶಯ
ಒಟ್ಟು ಸಾಮರ್ಥ್ಯ- 151.75 ಟಿಎಂಸಿ
ಇಂದಿನ ಸಂಗ್ರಹ - 12.70 ಟಿಎಂಸಿ
ಒಳಹರಿವು - 314 ಕ್ಯೂಸೆಕ್
ಹೊರಹರಿವು - 1400 ಕ್ಯೂಸೆಕ್
* ಮಲಪ್ರಭಾ ಜಲಾಶಯ
ಒಟ್ಟು ನೀರಿನ ಸಾಮರ್ಥ್ಯ - 37.73 ಟಿಎಂಸಿ
ಇಂದಿನ ಸಂಗ್ರಹ - 6.54 ಟಿಎಂಸಿ
ಒಳಹರಿವು - 0 ಕ್ಯೂಸೆಕ್
ಹೊರಹರಿವು - 194 ಕ್ಯೂಸೆಕ್
* ಕಬಿನಿ ಜಲಾಶಯ
ಡ್ಯಾಮ್‌ನ ಒಟ್ಟು ಸಾಮಥ್ಯ - 19.52 ಟಿಎಂಸಿ
ಇಂದಿನ ಸಂಗ್ರಹ - 8.0 ಟಿಎಂಸಿ
ಹೊರಹರಿವು - 350 ಕ್ಯೂಸೆಕ್
ಒಳಹರಿವು - 1530 ಕ್ಯೂಸೆಕ್
ಒಂದಷ್ಟು ಜಲಾಶಯಗಳು ಭರ್ತಿಯಾಗಿದ್ದು, ಮಳೆ ಇನ್ನಷ್ಟು ಹೆಚ್ಚಾಗಿ ಅಧಿಕ ಪ್ರಮಾಣದಲ್ಲಿ ನೀರು ಹೊರ ಬಿಟ್ಟರೆ ಗತಿ ಏನು? ಎಂದು ಜಲಾನಯನ ಪ್ರದೇಶಗಳ ಜನರು ಆತಂಕಪಡುತ್ತಿದ್ದಾರೆ.
ಕರ್ನಾಟಕ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮೂರು ದಿನ ಭಾರಿ ಮಳೆ ಆಗಲಿದೆ. ಇಂದು ಇಲ್ಲಿನ ಮೂರು ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ಕೊಡಲಾಗಿದೆ. ಇದೇ ರೀತಿ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣೆ ಮಳೆ ಮುಂದುವರಿಯಲಿದೆ. ಕಾವೇರಿ, ಕಬಿನಿ ಜಲಾಯನಯ ಪ್ರದೇಶಗಳಲ್ಲಿ ಮಳೆ ಮುಂದುವರಿಯಲಿದೆ.












Click it and Unblock the Notifications