Karnataka Dam Water Level Today: ಕೆಆರ್‌ಎಸ್, ಹೇಮಾವತಿ ವಿವಿಧ ಅಣೆಕಟ್ಟುಗಳು ಭರ್ತಿ, ಒಳಹರಿವು ಹೆಚ್ಚಳ
ಬೆಂಗಳೂರು, ಸೆಪ್ಟಂಬರ್ 07: ಕರ್ನಾಟಕ ರಾಜ್ಯಾದ್ಯಂತ ಅಬ್ಬರಿಸಿದ್ದ ಭಾರೀ ಮಳೆ ಇದೀಗ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಮಲೆನಾಡಿನ ಜಿಲ್ಲೆಗಳು ಹಾಗೂ ಕರಾವಳಿ ಜಿಲ್ಲೆಗಳಿಗೆ ಸಿಮೀತವಾಗಿದೆ. ಈ ಭಾಗದಲ್ಲೆಲ್ಲೆ ಅತ್ಯಧಿಕ ಮಳೆ ಬರುತ್ತಿದೆ. ಸದ್ಯ ವಾಡಿಕೆಗಿಂತ ಹೆಚ್ಚು ಬಂದ ಮಳೆಯಿಂದಾಗಿ ರಾಜ್ಯದ ಜಲಾಶಯಗಳು ಮೈದುಂಬಿಕೊಂಡಿವೆ. ಕೆಆರ್‌ಎಸ್ ಡ್ಯಾಂ ಭರ್ತಿಯಾಗಿದೆ. ಹಾಗಾದರೆ ರಾಜ್ಯದಲ್ಲಿ ಶನಿವಾರ (ಸೆ.7) ಯಾವೆಲ್ಲ ಅಣೆಕಟ್ಟುಗಳಲ್ಲಿ ಎಷ್ಟು ನೀರಿದೆ, ಒಳಹರಿವು ಎಷ್ಟು? ಇಲ್ಲಿದೆ ಪಟ್ಟಿ.
ಕಾವೇರಿ ಹಾಗೂ ಕೃಷ್ಣ ರಾಜ ಸಾಗರ ಜಲಾನಯನ ಪ್ರದೇಶಗಳಲ್ಲಿ ಕಳೆದ ತಿಂಗಳಿನಿಂದ ಬಂದ ಮಳೆಯಿಂದ ಜಲಾಶಯ ಭರ್ತಿಯಾಗಿದೆ. ಒಟ್ಟು 124.80 ಅಡಿ ಅಣೆಕಟ್ಟು ಎತ್ತರದಲ್ಲಿ 124.46 ಅಡಿಯಷ್ಟು ಭರ್ತಿಯಾಗಿ ವಾರಗಳೇ ಕಳೆದಿವೆ. ಇದೀಗ ಒಳಹರಿವು ಮತ್ತೆ ಹೆಚ್ಚಾಗಿದೆ. ಕೆಆರ್‌ಎಸ್ ಮಾತ್ರವಲ್ಲದೇ, ಹೇಮಾವತಿ, ಕಬಿನಿ, ತುಂಗಭದ್ರಾ ಸೇರಿ ವಿವಿಧ ಡ್ಯಾಂಗಳಲ್ಲಿ ಒಳಹರಿವು ಏರಿಕೆ ಆಗಿದೆ.

ರಾಜ್ಯದ ಅಣೆಕಟ್ಟುಗಳ ನೀರಿನ ಮಟ್ಟ
ಕೆಆರ್‌ಎಸ್ ಜಲಾಶಯ
ಒಟ್ಟು ನೀರಿನ ಸಾಮರ್ಥ್ಯ: 49.452 ಟಿಎಂಸಿ
ಇಂದಿನ ಸಂಗ್ರಹ: 48.977 ಟಿಎಂಸಿ
ಒಳಹರಿವು : 15,151 ಕ್ಯೂಸೆಕ್ಸ್
ಹೊರ ಹರಿವು: 12,954 ಕ್ಯೂಸೆಕ್ಸ್
ಹೇಮಾವತಿ ಅಣೆಕೆಟ್ಟು ವಿವರ
ಒಟ್ಟು ನೀರಿನ ಸಾಮರ್ಥ್ಯ: 37.10 ಟಿಎಂಸಿ
ಇಂದಿನ ಸಂಗ್ರಹ: 37.055 ಟಿಎಂಸಿ
ಒಳಹರಿವು : 15,151 ಕ್ಯೂಸೆಕ್ಸ್
ಹೊರ ಹರಿವು: 12,954 ಕ್ಯೂಸೆಕ್ಸ್
ಕಬಿನಿ ಜಲಾಶಯದ ವಿವರ
ಒಟ್ಟು ನೀರಿನ ಸಾಮರ್ಥ್ಯ :19.52 ಟಿಎಂಸಿ
ಇಂದಿನ ಸಂಗ್ರಹ:19.15 ಟಿಎಂಸಿ
ಒಳಹರಿವು : 4351 ಕ್ಯೂಸೆಕ್
ಹೊರ ಹರಿವು:3850 ಕ್ಯೂಸೆಕ್
ಹಾರಂಗಿ ಜಲಾಶಯ
ಒಟ್ಟು ನೀರಿನ ಸಾಮರ್ಥ್ಯ : 8.50 ಟಿಎಂಸಿ
ಇಂದಿನ ಸಂಗ್ರಹ: 8.31 ಟಿಎಂಸಿ
ಒಳಹರಿವು : 2572 ಕ್ಯೂಸೆಕ್
ಹೊರ ಹರಿವು: 2500 ಕ್ಯೂಸೆಕ್
ತುಂಗಭದ್ರಾ ಜಲಾಶಯ
ಒಟ್ಟು ನೀರಿನ ಸಾಮರ್ಥ್ಯ: 105 ಟಿಎಂಸಿ
ಇಂದಿನ ಸಂಗ್ರಹ: 72 ಟಿಎಂಸಿ
ಒಳಹರಿವು : 32347 ಕ್ಯೂಸೆಕ್
ಹೊರ ಹರಿವು: 32347 ಕ್ಯೂಸೆಕ್












Click it and Unblock the Notifications