ರಾಜ್ಯ ಸರ್ಕಾರದ ದೃಷ್ಟಿಯಲ್ಲೂ ಕೆಂಪು ವಲಯ ಮೂರು ಮಾತ್ರ

ಬೆಂಗಳೂರು, ಮೇ 3: ಕೊರೊನಾ ವೈರಸ್‌ ಲಾಕ್‌ಡೌನ್‌ಗೆ ಸಂಬಂಧಪಟ್ಟಂತೆ ಕೆಂಪು, ಕಿತ್ತಳೆ, ಹಸಿರು ವಲಯಗಳ ಅಧಿಕೃತ ಪಟ್ಟಿಯನ್ನು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಆದೇಶ ಪ್ರತಿ ಪ್ರಕಟ ಮಾಡಿದ್ದಾರೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಬೆಂಗಳೂರು, ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ರೆಡ್‌ ಜೋನ್‌ನಲ್ಲಿದ್ದವು. ಈಗ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲೂ ಈ ಮೂರು ಜಿಲ್ಲೆಗಳು ಮಾತ್ರ ಕೆಂಪು ವಲಯದಲ್ಲಿದೆ.

ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಜಿಲ್ಲೆಗಳಲ್ಲಿ ಬೆಳಗಾವಿ, ಕಲಬುರಗಿ, ವಿಜಯಪುರ ಟಾಪ್ 5ರ ಒಳಗೆ ಇದ್ದರೂ ರೆಡ್ ಜೋನ್ ಸೇರಿಲ್ಲ. ಈ ಹಿಂದೆ ರಾಜ್ಯ ಸರ್ಕಾರವೇ ಗುರುತಿಸಿದ್ದ ಪ್ರಕಾರ ಆರು ರೆಡ್ ಜೋನ್ ಜಿಲ್ಲೆಗಳಿದ್ದವು. ಆದರೆ, ಈಗ ಅಧಿಕೃತ ಪ್ರತಿಯಲ್ಲಿ ಮೂರು ಜಿಲ್ಲೆಗೆ ಮಾತ್ರ ಕೆಂಪು ಪಟ್ಟಿ ಹಾಕಲಾಗಿದೆ.

Karnataka Govt Announced Red Orange And Green District List

ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಕೆಂಪು, ಕಿತ್ತಳೆ, ಹಸಿರು ವಲಯದ ಪಟ್ಟಿ ಈ ಕೆಳಕಂಡಂತಿವೆ:

* ಕೆಂಪು ವಲಯ: ಬೆಂಗಳೂರು, ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರ

* ಕಿತ್ತಳೆ ವಲಯ: ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟೆ, ಮಂಡ್ಯ, ಬಳ್ಳಾರಿ, ಧಾರವಾಡ, ದಕ್ಷಿಣ ಕನ್ನಡ, ಬೀದರ್, ಚಿಕ್ಕಬಳ್ಳಾಪುರ, ಗದಗ, ಉತ್ತರ ಕನ್ನಡ ಮತ್ತು ತುಮಕೂರು

* ಹಸಿರು ವಲಯ: ದಾವಣಗೆರೆ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಕೋಲಾರ, ಕೊಪ್ಪಳ, ರಾಯಚೂರು, ಶಿವಮೊಗ್ಗ, ರಾಮನಗರ, ಯಾದಗಿರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+