ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ 3ನೇ ಅಲೆ ನಿಯಂತ್ರಣಕ್ಕೆ 13 ತಜ್ಞರ ಸಮಿತಿ ರಚನೆ

|
Google Oneindia Kannada News

ಬೆಂಗಳೂರು, ಮೇ 26: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಗೆ ನಲುಗಿ ಹೋಗಿರುವ ಕರ್ನಾಟಕದಲ್ಲಿ 3ನೇ ಅಲೆಯನ್ನು ನಿಭಾಯಿಸುವುದಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ರಾಜ್ಯದಲ್ಲಿ ಕೊವಿಡ್-19 ಮೂರನೇ ಅಲೆಯನ್ನು ನಿಯಂತ್ರಿಸುವ ಮತ್ತು ನಿಭಾಯಿಸುವುದಕ್ಕಾಗಿ ಅಗತ್ಯ ಮಾರ್ಗಸೂಚಿಗಳನ್ನು ರಚಿಸುವುದು. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ. 13 ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ ಒಬ್ಬರೇ ಒಬ್ಬ ಮಹಿಳಾ ಸದಸ್ಯರು ಇಲ್ಲದಿರುವುದು ಕಂಡು ಬಂದಿದೆ.

 Karnataka Constitutes A 13-member Panel Headed By Dr Devi Shetty To Prepare For The Third Wave Of COVID-19

 ಸಾವಿನ ಹಿಂದಿನ ಸತ್ಯ: ಕೊರೊನಾವೈರಸ್ 2ನೇ ಅಲೆ ಅಪಾಯಕಾರಿಯೇ? ಸಾವಿನ ಹಿಂದಿನ ಸತ್ಯ: ಕೊರೊನಾವೈರಸ್ 2ನೇ ಅಲೆ ಅಪಾಯಕಾರಿಯೇ?

ನಾರಾಯಣ ಹೃದಯಾಲಯದ ಚೇರ್ ಮೆನ್ ಡಾ.ದೇವಿ ಶೆಟ್ಟಿ ನೇತೃತ್ವದಲ್ಲಿ 13 ತಜ್ಞ ವೈದ್ಯರನ್ನು ಒಳಗೊಂಡಿರುವ ವಿಶೇಷ ಸಮಿತಿಯನ್ನು ರಚಿಸಲಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕುರಿತು ಆದೇಶವನ್ನು ಹೊರಡಿಸಿದೆ. 13 ತಜ್ಞವೈದ್ಯರ ತಂಡದಲ್ಲಿ ಇರುವವರು ಯಾರು ಎನ್ನುವ ಪಟ್ಟಿ ಇಲ್ಲಿದೆ ಓದಿ.

ಕರ್ನಾಟಕದಲ್ಲಿ 13 ತಜ್ಞವೈದ್ಯರ ಸಲಹಾ ಸಮಿತಿ:

1. ಡಾ. ದೇವಿ ಶೆಟ್ಟಿ ಪ್ರಸಾದ್, ನಾರಾಯಣ ಹೃದಯಾಲಯ ಬೆಂಗಳೂರು,

2. ಡಾ. ಸತೀಶ್ ಗಿರಿಮಾಜೆ, ನಿರ್ದೇಶಕರು, ನಿಮ್ಹಾನ್ಸ್ ಬೆಂಗಳೂರು,

3. ಡಾ. ಬಸವರಾಜ್ ಜಿ ವಿ, ವೈದ್ಯಕೀಯ ವರಿಷ್ಠಾಧಿಕಾರಿ, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಬೆಂಗಳೂರು,

4. ಡಾ. ಆಶಿಶ್ ಸಥಾಪಥಿ, ಪ್ರಾದೇಶಿಕ ಮುಖಂಡರು, WHO, ಬೆಂಗಳೂರು

5. ಡಾ. ಅಜಯ್ ಕುಮಾರ್, ಕ್ಯಾನ್ಸರ್ ತಜ್ಞರು, ಹೆಚ್ ಸಿಜಿ, ಬೆಂಗಳೂರು,

6. ಡಾ. ಅರವಿಂದ್ ಶೆಣೈ, ಶಿಶುವೈದ್ಯ, ಬೆಂಗಳೂರು,

7. ಡಾ. ರಘುನಾಥ್ ಯು, ಸಾಗರ್ ಆಸ್ಪತ್ರೆ, ಬೆಂಗಳೂರು,

8. ಡಾ. ಜಗದೀಶ್ ಚಿನ್ನಪ್ಪ, ಕ್ಲಷ್ಟರ್ ಹೆಡ್ ಆಫ್ ಮಣಿಪಾಲ್ ಆಸ್ಪತ್ರೆ, ಬೆಂಗಳೂರು,

9. ಡಾ. ಶ್ರೀಕಾಂತ್ ಜೆ ಟಿ, ಮಕ್ಕಳ ತಜ್ಞರು, ಬೆಂಗಳೂರು

10. ಡಾ. ಯೋಗಾನಂದ್ ರೆಡ್ಡಿ, ಮಕ್ಕಳ ತಜ್ಞರು, ಐಎಂಎ ಅಧ್ಯಕ್ಷರು, ಬಳ್ಳಾರಿ,

11. ಡಾ. ವಿನೋದ್ ರಾಟಗೇರಿ, ಕಿಮ್ಸ್ ಮಕ್ಕಳ ತಜ್ಞ ಪ್ರಾಧ್ಯಾಪಕರು, ಹುಬ್ಬಳ್ಳಿ,

12. ಡಾ. ಪ್ರೇಮ್ ಕೆ ಮೋನಿ, ಸಾಂಕ್ರಾಮಿಕ ರೋಗಶಾಸ್ತ್ರ ಪ್ರಾಧ್ಯಾಪಕರು, ಬೆಂಗಳೂರು,

Recommended Video

ನಾಯಿ ಮರಿಯನ್ನು ಒಂದೇ ಏಟಿಗೆ ನುಂಗಿದ ಮೊಸಳೆ | Oneindia Kannada

13. ಡಾ. ಪಿ ಜಿ ಗಿರೀಶ್, ನಿರ್ದೇಶಕರು, ವೈದ್ಯಕೀಯ ಶಿಕ್ಷಣದ

English summary
Karnataka Constitutes A 13-member Panel Headed By Dr Devi Shetty To Prepare For The Third Wave Of COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X