ಏನಿಲ್ಲ.. ಏನಿಲ್ಲ... ಅಂತ ಕವನವನ್ನೇ ರಚಿಸಿದ ಕಾಂಗ್ರೆಸ್

ಬೆಂಗಳೂರು, ಫೆಬ್ರವರಿ 17: ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಪಟ್ಟೆ ಸೌಂಡ್‌ ಮಾಡ್ತಿರಾ ರೀಲ್ಸ್‌ ಅಂದ್ರೆ ಏನಿಲ್ಲ.. ಏನಿಲ್ಲ ಕರಿಮಣಿ ಮಾಲೀಕ ನೀನಲ್ಲ. ಎಲ್ಲರೂ ಸಹ ಏನಿಲ್ಲ.. ಏನಿಲ್ಲ ಎನ್ನುವ ಸಾಂಗ್‌ ರೀಲ್ಸ್‌ ಮಾಡುತ್ತಿರುವುದನ್ನ ಕಾಣ ಬಹುದು.

ಹೌದು, ಕರಿಮಣಿ ಮಾಲೀಕ ನೀನಲ್ಲ ಎಂಬ ರೀಲ್ಸ್ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತಿದೆ ಅಂದ್ರೆ ಪುಟಾಣಿ ಮಕ್ಕಳಿಂದ ಹಿಡಿದು ವಯಸ್ಸಾದವರಗೂ ಸಹ ಎಲ್ಲಾ ವಯೋಮಿತಿ ಅವರು ಲಿಪ್ ಸಿಂಕ್ ಮಾಡುತ್ತಿದ್ದಾರೆ. ಇದೀಗ ರಾಜಕೀಯಕ್ಕೂ ಕರಿಮಣಿ ಮಾಲೀಕ ರೀಲ್ಸ್ ಎಂಟ್ರಿ ಕೊಟ್ಟಿದ್ದು, ಶುಕ್ರವಾರ ಮುಖ್ಯಮಂತ್ರಿ ಬಜೆಟ್‌ ಮಂಡನೆ ಕುರಿತು ಸಹ ಏನಿಲ್ಲ ಏನಿಲ್ಲ ಈ ಬಜೆಟ್‌ನಲ್ಲಿ ಏನಿಲ್ಲ ಎಂದು ಬಿಜೆಪಿ ನಾಯಕರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

karnataka congress‌ shared enilla enilla poem

ಪ್ಲಕಾರ್ಡ್ ಹಿಡಿದ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಬಜೆಟ್​ನಲ್ಲಿ ಏನಿಲ್ಲ.. ಏನಿಲ್ಲ ಎಂದು ಹೇಳುತ್ತಾ ಕಾಂಗ್ರೆಸ್ ಸರ್ಕಾರದ ವಾಗ್ದಾಳಿ ನಡೆಸಿದ್ದರು. ಇದೀಗ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರ ವಿರುದ್ಧ ಕರ್ನಾಟಕ ಕಾಂಗ್ರೆಸ್‌ ತಿರುಗೇಟು ನೀಡುವ ಮೂಲಕ ಕರ್ನಾಟಕದ ಯಜಮಾನರು ನೀವಲ್ಲ ಎಂದು ಹೇಳಿದೆ.

ಇದೀಗ ಕಾಂಗ್ರೆಸ್ ತನ್ನ ಎಕ್ಸ್​ ಖಾತೆಯಲ್ಲಿ ಏನಿಲ್ಲ ಏನಿಲ್ಲ ಎಂದು ಪದ್ಯ ಬರೆದು ಪೋಸ್ಟ್ ಮಾಡುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದೆ. ಕರ್ನಾಟಕದ ಯಜಮಾನರು ನೀವಲ್ಲ ಎಂದು ಕಾಂಗ್ರೆಸ್‌ ಕವನವನ್ನೇ ರಚಿಸಿದೆ. ಈ ಕವನದಲ್ಲಿ ಬಿಜೆಪಿಯವರ ಮೆದುಳಲ್ಲಿ ಏನೂ ಇಲ್ಲ,ಪ್ರಜಾಪ್ರಭುತ್ವದ ಮೇಲೆ ಗೌರವವಿಲ್ಲ ಹಾಗೂ ಕನ್ನಡಿಗರ ಮೇಲೆ ಕಾಳಜಿ ಇಲ್ಲ ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ.

ಕವನವನ್ನೇ ರಚಿಸಿದ ಕಾಂಗ್ರೆಸ್

ಏನಿಲ್ಲ ಏನಿಲ್ಲ...

ಬಿಜೆಪಿಯವರ ಮೆದುಳಲ್ಲಿ ಏನೂ ಇಲ್ಲ,
ಪ್ರಜಾಪ್ರಭುತ್ವದ ಮೇಲೆ ಗೌರವವಿಲ್ಲ,
ಅರ್ಥ ವ್ಯವಸ್ಥೆಯ ಬಗ್ಗೆ ತಿಳಿದೇ ಇಲ್ಲ,
ಕನ್ನಡಿಗರ ಮೇಲೆ ಕಾಳಜಿ ಇಲ್ಲ,
ಶಾಂತಿ ಸಹಬಾಳ್ವೆ ಸಹಿಸೋದಿಲ್ಲ,

ಏನಿಲ್ಲ ಏನಿಲ್ಲ...

ಬಿಜೆಪಿಗರ ಬುರುಡೆಯಲ್ಲಿ ಏನೂ ಇಲ್ಲ,
ಅವರು ಹೇಳುವುದೆಲ್ಲ ನಿಜವಲ್ಲ,
ನಂಬಿಕೆಗೆ ಅರ್ಹರು ಅವರಲ್ಲ,
ಜನಪರ ಚಿಂತನೆ ಇಲ್ಲವೇ ಇಲ್ಲ,
ಜನರ ಕಷ್ಟವು ಅವರಿಗೆ ಬೇಕಿಲ್ಲ,

ಏನಿಲ್ಲ ಏನಿಲ್ಲ...
ಬಿಜೆಪಿ ಹೃದಯದಲಿ ಏನೂ ಇಲ್ಲ,
ಕರುಣೆ, ಪ್ರೀತಿಯು ತಿಳಿದಿಲ್ಲ.
ಮಾನವೀಯತೆಯಂತೂ ಇಲ್ಲವೇ ಇಲ್ಲ,

ಏನಿಲ್ಲ, ಏನಿಲ್ಲ...
ಕರ್ನಾಟಕದ ಯಜಮಾನರು ನೀವಲ್ಲ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+