ಕೈ ಪಾಳಯದಲ್ಲಿ ಭುಗಿಲೆದ್ದ ಕಿಚ್ಚು; ಯಾರಿಗೆಲ್ಲಾ ನಿಗಮ ಮಂಡಳಿಯ ಸ್ಥಾನ? ಇಲ್ಲಿದೆ ಸಂಭಾವ್ಯ ಪಟ್ಟಿ

ಬೆಂಗಳೂರು, ನವೆಂಬರ್‌ 22: ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ರಾಜ್ಯ ಕಾಂಗ್ರೆಸ್‌, ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳನ್ನ ಗೆಲ್ಲಲು ಟಾರ್ಗೆಟ್‌ ಹಾಕಿಕೊಂಡಿದ್ದು, ಕೈ ಪಾಳಯದಲ್ಲಿರುವ ಅಸಮಾಧಾನದ ಕಿಚ್ಚನ್ನ ಶಮನ ಮಾಡಲು ಕಾಂಗ್ರೆಸ್‌ ಹೈಕಮಾಂಡ್‌ ಮುಂದಾಗಿದ್ದು, ನಿಗಮ ಮಂಡಳಿಗಳ ಅಧ್ಯಕ್ಷಸ್ಥಾನ ನೇಮಕಕ್ಕೆ ಮುಂದಾಗಿದೆ.

ಮಂಗಳವಾರ ತಡರಾತ್ರಿಯವರೆಗೂ ನಿಗಮ ಮಂಡಳಿಗಳ ಅಧ್ಯಕ್ಷಸ್ಥಾನ ನೇಮಕ ವಿಚಾರವಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜತೆಗಿನ ಸಭೆ ನಡೆಸಿದ್ದು, ಸಂಭಾವ್ಯರ ಪಟ್ಟಿ ಸಿದ್ಧಪಡಿಸಿದ್ದಾರೆ. ಈ ನಡುವೆಯೇ ಸುರ್ಜೇವಾಲ ಅವರು ಅಸಮಾಧಾನಗೊಂಡ ಶಾಸಕರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ.

possible-list-of-congress-corporation-board

ಇನ್ನೂ ಸಭೆಯಲ್ಲಿ ಗೃಹ ಸಚಿವರಾದ ಜಿ. ಪರಮೇಶ್ವರ್, ಕೆ.ಜೆ.ಜಾರ್ಜ್ ಕೂಡ ಭಾಗವಹಿಸಿದ್ದು, ಸಭೆ ನಡುವೆಯೇ ಹಿರಿಯ ಶಾಸಕರಿಗೆ ಸುರ್ಜೇವಾಲ ದೂರವಾಣಿ ಕರೆ ಮಾಡಿ, ಪಟ್ಟಿ ಪ್ರಕಟಿಸಿದ ನಂತರ ತಕರಾರು ಮಾಡಬಾರದು ಎಂದು ಸೂಚನೆ ಕೊಟ್ಟಿದ್ದಾರೆ. ಅಲ್ಲದೆ, ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಎಲ್ಲಾ ಮನಸ್ತಾಪವನ್ನ ಮರೆತು ಕೊಟ್ಟ ನಿಗಮ ಮಂಡಳಿ ಜವಾಬ್ದಾರಿ ನಿಭಾಯಿಸಬೇಕೆಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಸರ್ಕಾರದ ಅಧೀನದಲ್ಲಿ 85 ನಿಗಮಗಳಿದ್ದು, ಅಲ್ಲಿಗೆ ನೇಮಕ ಮಾಡುವ ಪೂರ್ಣ ಅಧಿಕಾರ ಸರ್ಕಾರಕ್ಕಿದೆ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಿರ್ದೇಶಕರನ್ನು ನೇಮಕ ಮಾಡಲಾಗುತ್ತದೆ.

ಈ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮಾತನಾಡಿ, ಪಕ್ಷದ ಸಂಘಟನೆ, ನಿಗಮ ಮಂಡಳಿ ನೇಮಕ ಸೇರಿದಂತೆ ಶಾಸಕರು ಹಾಗೂ ಕಾರ್ಯಕರ್ತರಿಗೆ ಅಧಿಕಾರ ನೀಡುವ ಬಗ್ಗೆ ನಮ್ಮ ನಾಯಕರ ಜೊತೆ ಚರ್ಚೆ ಮಾಡಲಾಗಿದೆ ಎಂದು ಹೇಳಿದರು.

ಶಾಸಕರಿಗೆ ಜವಾಬ್ದಾರಿ ನೀಡುವ ಬಗ್ಗೆ ಮೊದಲ ಸುತ್ತಿನ ಚರ್ಚೆ ಆಗಿದ್ದು, ಈಗಿನ ಪಟ್ಟಿಯನ್ನು ಕೇಂದ್ರ ನಾಯಕರು ಪರಿಶೀಲಿಸಲಿದ್ದಾರೆ. ನಂತರ ಎರಡನೇ ಸುತ್ತಿನ ಚರ್ಚೆ ಆಗಲಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಎಷ್ಟು ಸಮಯಾವಕಾಶ ಬೇಕು ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, "ಪಂಚರಾಜ್ಯ ಚುನಾವಣೆ ನಡೆಯುತ್ತಿದ್ದು, ಮುಖ್ಯಮಂತ್ರಿಗಳು ಹಾಗೂ ನಾನು ಪ್ರಚಾರಕ್ಕೆ ಹೋಗಬೇಕಿದೆ. ಆದಷ್ಟು ಬೇಗ ಈ ಪ್ರಕ್ರಿಯೆ ಮಾಡುತ್ತೇವೆ ಎಂದರು.

ಗೃಹಸಚಿವರು ಮುನಿಸಿಕೊಂಡಿದ್ದಾರೆ ಎಂಬ ಬಗ್ಗೆ ಚರ್ಚೆ ಆಗುತ್ತಿದೆಯಲ್ಲ ಎಂದು ಕೇಳಿದಾಗ, ಗೃಹಸಚಿವರು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು. ಬೆಳಗಾವಿಯಿಂದ ಬಂದು ಚರ್ಚೆ ಮಾಡಿದ್ದಾರೆ. ಯಾರು ಯಾಕೆ ಮುನಿಸಿಕೊಳ್ಳುತ್ತಾರೆ ಎಂದು ಕೇಳಿದ ಅವರು, ಲೋಕಸಭೆ ಚುನಾವಣೆ ಸಂಬಂಧದ ವರದಿ ಕುರಿತು ಕೆಲವರು ತಮ್ಮ ವರದಿ ನೀಡಿದ್ದು, ಮತ್ತೆ ಕೆಲವರು ಇನ್ನಷ್ಟೇ ನೀಡಬೇಕಿದೆ ಎಂದು ತಿಳಿಸಿದರು.

ನಿಗಮ ಮಂಡಳಿಯ ಸಂಭಾವ್ಯ ಪಟ್ಟಿ ಇಲ್ಲಿದೆ?

ಪಿ.ಎಂ ನರೇಂದ್ರ ಸ್ವಾಮಿ

ರಮೇಶ್ ಬಾಬು ಬಂಡಿಸಿದ್ದೇಗೌಡ

ಅನಿಲ್ ಚಿಕ್ಕಮಾದು

ಟಿ.ಡಿ ರಾಜೇಗೌಡ

ಶಿವಲಿಂಗೇಗೌಡ

ಬಿ.ಕೆ ಸಂಗಮೇಶ್

ಬಸವರಾಜ ರಾಯರೆಡ್ಡಿ

ಬಂಗಾರಪೇಟೆ ನಾರಾಯಣಸ್ವಾಮಿ

ಕೆ.ವೈ ನಂಜೇಗೌಡ

ಬಿ.ಆರ್ ಪಾಟೀಲ್

ಗಣೇಶ್ ಹುಕ್ಕೇರಿ

ಮಹಾಂತೇಶ್ ಕೌಜಲಗಿ

ಯಶವಂತ್ ರಾಯ್ ಗೌಡ ಪಾಟೀಲ್

ಬಿ.ಜಿ ಗೋವಿಂದಪ್ಪ

ರಾಘವೇಂದ್ರ ಹಿಟ್ನಾಳ್

ರಘುಮೂರ್ತಿ

ಭೀಮಣ್ಣ ನಾಯ್ಕ್

ಸತೀಶ್ ಸೈಲ್

ಪ್ರಸಾದ್ ಅಬ್ಬಯ್ಯ

ಜಿ.ಟಿ ಪಾಟೀಲ್

ಡಿ.ಆರ್ ಪಾಟೀಲ್

ಬಸನಗೌಡ ತುರುವಿಹಾಳ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+