ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ 4 ರಿಂದ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ನವೆಂಬರ್ 03 : ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಫಂದಕ್ಕೆ ಕರ್ನಾಟಕ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ನವೆಂಬರ್ 4ರಿಂದ ರಾಜ್ಯಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.

ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, "ನರೇಂದ್ರ ಮೋದಿ ಸರ್ಕಾರದ‌ ನೀತಿಗಳಿಂದಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಪದವೀಧರರು‌ ನಿರುದ್ಯೋಗಿಗಳಾಗುತ್ತಿದ್ದಾರೆ" ಎಂದು ಆತಂಕ ವ್ಯಕ್ತಪಡಿಸಿದರು.

ಆರ್‌ಸಿಇಪಿ ರೈತ ವಿರೋಧಿ; ಹೋರಾಟಕ್ಕೆ ಸಿದ್ದರಾಮಯ್ಯ ಕರೆಆರ್‌ಸಿಇಪಿ ರೈತ ವಿರೋಧಿ; ಹೋರಾಟಕ್ಕೆ ಸಿದ್ದರಾಮಯ್ಯ ಕರೆ

"ಮೋದಿಯವರು ಬಂದಮೇಲೆ ಬ್ಯಾಂಕ್ ಹಣ‌ ಲೂಟಿ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇವತ್ತು ಆರ್ಥಿಕ ‌ಪರಿಸ್ಥಿತಿ ಹಿಂದೆಂದಿಗಿಂತಲೂ ಹದಗೆಟ್ಟಿದೆ. ಪ್ರಧಾನಿಗಳು ಆರ್ಥಿಕ ತಜ್ಞರ ಮಾಹಿತಿ ಪಡೆಯುತ್ತಾರೋ ಇಲ್ಲವೊ ಗೊತ್ತಿಲ್ಲ. ಆದರೆ, ಆರ್ಥಿಕ ಸ್ಥಿತಿ ಮಾತ್ರ ಹದಗೆಡುತ್ತಿದೆ" ಎಂದು ಆರೋಪಿಸಿದರು.

RCEP ಗೆ ಮುಂಚಿನ GATT ಎಂಬ ಪೆಡಂಭೂತ, GATT ನ ತಮ್ಮ RCEPRCEP ಗೆ ಮುಂಚಿನ GATT ಎಂಬ ಪೆಡಂಭೂತ, GATT ನ ತಮ್ಮ RCEP

"ನೋಟು ರದ್ಧತಿ, ಜಿ.ಎಸ್.ಟಿ ಅವೈಜ್ಞಾನಿಕ ಜಾರಿ ಸೇರಿದಂತೆ ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಇಂತಹ ಸ್ಥಿತಿ‌ ನಿರ್ಮಾಣವಾಗಿದೆ. ಇದನ್ನು ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಹೋರಾಟ ಮಾಡಲಿದೆ" ಎಂದು ಹೇಳಿದರು.

ರಾಜ್ಯದಲ್ಲಿ ರೈತ ಆತ್ಮಹತ್ಯೆ ಪ್ರಮಾಣ ಕಡಿಮೆ: ಕೃಷಿ ಇಲಾಖೆ ವರದಿರಾಜ್ಯದಲ್ಲಿ ರೈತ ಆತ್ಮಹತ್ಯೆ ಪ್ರಮಾಣ ಕಡಿಮೆ: ಕೃಷಿ ಇಲಾಖೆ ವರದಿ

ಉದ್ಯೋಗ ಕುಸಿತ

ಉದ್ಯೋಗ ಕುಸಿತ

"ನರೇಂದ್ರ ಮೋದಿ ಅವರ 6 ವರ್ಷದ ಆಡಳಿತದಲ್ಲಿ 90 ಲಕ್ಷ ಉದ್ಯೋಗಗಳು ನಷ್ಟವಾಗಿವೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಮಟ್ಟದ ಉದ್ಯೋಗ ಕುಸಿತವಾಗಿದೆ. ಆರ್ಥಿಕತೆ ಸಂಪೂರ್ಣ ಕುಸಿದಿದ್ದು, ದೇಶವೇ ನಿರುದ್ಯೋಗ ಕೂಪವಾಗಿದೆ. ಶವ ಪೆಟ್ಟಿಗೆಯಲ್ಲಿರುವ ಮೋದಿ ಸರ್ಕಾರ, ದೇಶವನ್ನೇ ತುರ್ತು ನಿಗಾಘಟಕಕ್ಕೆ ತಳ್ಳಿದೆ" ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.

ಮೋದಿ ಸರ್ಕಾರದ ವಿರುದ್ಧ ಹೋರಾಟ

ಮೋದಿ ಸರ್ಕಾರದ ವಿರುದ್ಧ ಹೋರಾಟ

"ನರೇಂದ್ರ ಮೋದಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ. ನವೆಂಬರ್ 4ರಿಂದ ಹೋರಾಟ ಆರಂಭವಾಗಲಿದ್ದು, ನವೆಂಬರ್ 11ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ" ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಕಾಂಗ್ರೆಸ್ ಪ್ರತಿಭಟನೆ

ನವೆಂಬರ್ 4ರಿಂದ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಮುಂಡಗೋಡ, ಶಿವಮೊಗ್ಗ, ಹಾಸನ, ಬೆಂಗಳೂರು, ವಿಜಯಪುರ, ರಾಯಚೂರು, ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಯಲಿದೆ.

ಭರವಸೆಗಳನ್ನು ಕೊಟ್ಟರು

ಭರವಸೆಗಳನ್ನು ಕೊಟ್ಟರು

"ನರೇಂದ್ರ ಮೋದಿ ಹಲವು ಭರವಸೆಗಳನ್ನು ಕೊಟ್ಟರು. ಆದರೆ, ಯಾವುದೂ ಈಡೇರಲಿಲ್ಲ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಐಸಿಯುನಲ್ಲಿದೆ. ಉದ್ಯೋಗ ಸೃಷ್ಟಿ ಕೋಮಾ ತಲುಪಿದೆ. ಇರುವ ಉದ್ಯೋಗಗಳೇ ನಷ್ಟವಾಗುತ್ತಿದೆ. ಉದ್ಯಮಗಳು ಮುಚ್ಚುತ್ತಿವೆ" ಎಂದು ದಿನೇಶ್ ಗುಂಡೂರಾವ್ ಹೇಳಿದರು.

English summary
Karnataka Congress opposed the Regional Comprehensive Economic Partnership (RCEP). Party organize statewide protest from November 4 to 14, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X