Congress Manifesto: ದೇವಾಲಯ, ಪ್ರವಾಸೋದ್ಯಮ, ಯುವಜನ, ಉದ್ಯೋಗ, ಸಮಾಜ ಕಲ್ಯಾಣಕ್ಕೆ ಭರವಸೆಗಳೇನು?

ಬೆಂಗಳೂರು, ಮೇ 2: ಕರುನಾಡ ಕುರುಕ್ಷೇತ್ರ 2023ರ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮನಗೆಲ್ಲಲು ರಾಜಕೀಯ ಪಕ್ಷಗಳಿಂದ ಇನ್ನಿಲ್ಲದ ಕಸರತ್ತು ಶುರುವಾಗಿದ್ದು, ಅಧಿಕಾರ ಪಡೆಯಲು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿವೆ.

ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಲು ಎದುರು ನೋಡುತ್ತಿರುವ ಕಾಂಗ್ರೆಸ್‌ ಪಕ್ಷ ಇಂದು (ಮೇ 1, ಮಂಗಳವಾರ) ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈಗಾಗಲೇ ಪ್ರಣಾಳಿಕೆಗೂ ಮುನ್ನ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ.

 Karnataka Congress Manifesto 2023: Congress Promises To Temple, Tourism, Youth, Social Welfare Sector

ಇದೀಗ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿ ದೇವಾಲಯ, ಪ್ರವಾಸೋದ್ಯಮ, ಯುವಜನ, ಉದ್ಯೋಗ, ಸಮಾಜ ಕಲ್ಯಾಣಕ್ಕೆ ಏನೆಲ್ಲಾ ಭರವಸೆಗಳನ್ನು ನೀಡಲಾಗಿದೆ ಎಂಬುದನ್ನು ಗಮನಿಸಿ.

ದೇವಾಲಯ ಮತ್ತು ಯಾತ್ರಾ ಕೇಂದ್ರಗಳು

* ಕರ್ನಾಟಕದಲ್ಲಿ 180 ಲಕ್ಷಕ್ಕೂ ಅಧಿಕ ದೇವಸ್ಥಾನಗಳಿದ್ದು, ಆ ಪೈಕಿ 35,500 ದೇವಸ್ಥಾನಗಳಷ್ಟೇ ಮುಜರಾಯಿ ಇಲಾಖೆಗೆ ಒಳಪಟ್ಟಿವೆ. ಈ ದೇವಸ್ಥಾನಗಳಲ್ಲಿ ಶೇ.30ರಷ್ಟು ಅರ್ಚಕರು ದಲಿತರಾಗಿದ್ದು, ಶೇ.40ರಷ್ಟು ಮಂದಿ ಲಿಂಗಾಯತ ಮತ್ತು ಒಬಿಸಿಗಳು. ಈ ದೇವಸ್ಥಾನಗಳು ಮುಜರಾಯಿ ಇಲಾಖೆಯಿಂದ ನಿರ್ಲಕ್ಷಿಸಲ್ಪಟ್ಟದ್ದು, ಅವುಗಳಿಗೆ ವಿಶೇಷ ಪೂಜಾ ನಿಧಿ ಸ್ಥಾಪನೆ.

* ಕಾಂಗ್ರೆಸ್ ಸರಕಾರ ಸ್ಥಾಪಿಸಿದ್ದ ಆರಾಧನಾ ಕಾರ್ಯಕ್ರಮದ ಮರು ಅನುಷ್ಠಾನ.

* ಧಾರ್ಮಿಕ ನಿಧಿ - ರಾಜ್ಯದೆಲ್ಲೆಡೆ ಸಣ್ಣ ದೇವಸ್ಥಾನಗಳು ಮತ್ತು ಮಠಗಳ ನವೀಕರಣ ಮತ್ತು ಜೀರ್ಣೋದ್ಧಾರಕ್ಕೆ 1 ಸಾವಿರ ಕೋಟಿ ರೂ. ಮೀಸಲು.

* ಮುಜರಾಯಿ ದೇವಸ್ಥಾನಗಳಿಗೆ ಮಾಸಿಕ ಅನುದಾನ ಹೆಚ್ಚಳ.

* ಅರ್ಚಕ ಗೌರವ ನಿಧಿ - ದೇವಸ್ಥಾನಗಳು ಮತ್ತು ಇತರ ಧಾರ್ಮಿಕ ಕೇಂದ್ರಗಳ 60 ವರ್ಷ ಮೀರಿದ ಎಲ್ಲಾ ಆರ್ಚಕರಿಗೆ ಮಾಸಿಕ 5 ಸಾವಿರ ರೂ. ಗೌರವಧನ.

* ಗ್ರಾಮೀಣ ಪ್ರದೇಶಗಳ ಸಣ್ಣ ದೇವಸ್ಥಾನಗಳಲ್ಲಿ ಪೂಜಾದ್ರವ್ಯಗಳ ಖರ್ಚು, ಗೌರವಧನ ಸಮರ್ಪಣೆ ಮೊದಲಾದ ವೆಚ್ಚಗಳನ್ನು ಸರಿದೂಗಿಸುವ ಸಲುವಾಗಿ ಅರ್ಚಕರಿಗೆ ಈಗ ನೀಡುತ್ತಿರುವ ಸಂಭಾವನೆ 5 ಸಾವಿರ ರೂ.ಗೆ.

* ಮುಜರಾಯಿ ಇಲಾಖೆಯ ಅಡಿಯಲ್ಲೇ ಈ ಯೋಜನೆ ಸೇರ್ಪಡೆ, ವಿವಿಧ ನಂಬಿಕೆಗಳನ್ನು ಹೊಂದಿರುವ ಸ್ಥಳೀಯ ಜನರೇ ನಿರ್ವಹಿಸುತ್ತಿರುವ ಎಲ್ಲಾ ಗ್ರಾಮದೇವತೆಗಳನ್ನೂ ಮುಜರಾಯ ಇಲಾಖೆಯ ಸುಪರ್ದಿಗೆ ತರಲು ಪಕ್ಷ ಬದ್ಧ.

* ಗ್ರಾಮ ಮಟ್ಟದಲ್ಲಿ ನಡೆಯುವ ಎಲ್ಲಾ ಗ್ರಾಮ ದೇವತೆ ಮತ್ತು ತೇರು ಹಬ್ಬಗಳಿಗೆ 20 ಸಾವಿರ ರೂ. ದೇಣಿಗೆ.

ಪ್ರವಾಸೋದ್ಯಮ ಕ್ಷೇತ್ರ- ಬನ್ನಿ, ನೋಡಬನ್ನಿ

* ರಾಜ್ಯದಲ್ಲಿ ಸಮಗ್ರ ತಂತ್ರಜ್ಞಾನ ಆಧಾರಿತ ಪ್ರವಾಸೋದ್ಯಮ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ನಿಧಿ ಸ್ಥಾಪನೆ.

* ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಯುವಕರಿಗೆ 50 ಟ್ಯಾಕ್ಸಿಗಳಿಗೆ ಪರವಾನಗಿ ಮತ್ತು ಶೇ.5ರ ಬಡ್ಡಿದರದಲ್ಲಿ ಸಹಾಯಧನ.

* ಹೋಮ್‌ ಸ್ಟೇ ಮಾಲೀಕರಿಗೆ ಶೇ.5ರ ಬಡ್ಡಿದರದಲ್ಲಿ 10 ಲಕ್ಷ ರೂ.ವರೆಗೆ ಸಾಲ ಮತ್ತು ಸಂಬಂಧಿತ ಕಾನೂನು ನಿಯಮಾವಳಗಳ ಮರುಪರಿಶೀಲನೆ.

ಹೋಟೆಲ್ ಮತ್ತು ಆತಿಥ್ಯ ಉದ್ಯಮ

* 20ಕ್ಕಿಂತ ಅಧಿಕ ನೌಕರರು ಇರುವ ಹೋಟೆಲ್‌ಗಳಿಗೆ ಉದ್ಯಮದ ಸ್ಥಾನಮಾನ

* ಸ್ವಯಂ ಉದ್ಯೋಗದಲ್ಲಿ ತೊಡಗುವ ಸಣ್ಣ ಹೋಟೆಲ್/ ಬೇಕರಿ/ ಸ್ವೀಟ್ ಸ್ಟಾಲ್‌ಗಳಿಗೆ ಶೇ.6 ಬಡ್ಡಿದರದಲ್ಲಿ 10 ಲಕ್ಷ ರೂ. ವರೆಗೆ ಸಾಲ.

ಯುವ ಶಕ್ತಿ - ಕ್ರೀಡೆ - ತರಬೇತಿ - ಉದ್ಯೋಗ

* ಯುವ ನಿಧಿ - ಕಾಲೇಜು ಪದವಿ ಮುಗಿಸಿ 180 ದಿನಗಳಾದರೂ ಉದ್ಯೋಗ ಲಭಿಸದ 18ರಿಂದ 25 ವರ್ಷದೊಳಗಿನ ಯುವಕರ ಮಾಹಿತಿ ಸಂಗ್ರಹ ಮತ್ತು ಪದವೀಧರರಿಗೆ ಮಾಸಿಕ 3 ಸಾವಿರ ರೂ, ಡಿಪ್ಲೋಮಾ ಮಾಡಿದವರಿಗೆ 1,500 ರೂ. ನಿರುದ್ಯೋಗ ಭತ್ಯೆ ಪಾವತಿ.

* ಪ್ರತಿ ಪಂಚಾಯತ್‌ನಲ್ಲಿ ಭಾರತ್ ಜೋಡೊ ಯುವಶಕ್ತಿ, ಉದ್ಯೋಗ ಮಾಹಿತಿ ಕೇಂದ್ರಗಳ ಸ್ಥಾಪನೆ

* ತಳ ಹಂತದ ವೈಜ್ಞಾನಿಕ ಸಂಶೋಧನೆಗಳಗಾಗಿ ಭಾರತರತ್ನ ಸಿ.ಎನ್.ಆರ್. ರಾವ್ ಹೆಸರಿನಲ್ಲಿ ಕರ್ನಾಟಕ ಯುವ ಸಂಶೋಧನಾ ನಿಧಿಯ ಸ್ಥಾಪನೆ ಮೂಲಧನ 500 ಕೋಟಿ ರೂ.

* ಯುವಕರ ಸಮಗ್ರ ಅಭಿವೃದ್ಧಿಗಾಗಿ ಯುವ ಆಯೋಗ ರಚನೆ.

* ಕ್ರೀಡೆಗಾಗಿ ವಾರ್ಷಿಕ 2,000 ಕೋಟಿ ರೂ. ಅನುದಾನ.

* ಮೈಸೂರಿನಲ್ಲಿ ಪ್ರತ್ಯೇಕ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ - ವಿಶ್ವ ದರ್ಜೆಯ ಕ್ರೀಡಾ ಹಬ್ ಆಗಿ ಮಾರ್ಪಡಿಸಲು ಕ್ರಮ ಹಾಗೂ ಸಾಂಪ್ರದಾಯಿಕ ಕ್ರೀಡೆಗಳಿಗಾಗಿಯೇ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಸಂಕೀರ್ಣ ಸ್ಥಾಪನೆ.

* ಪ್ರತಿಭಾನ್ವಿತ ಕ್ರೀಡಾಪಟುಗಳಗೆ ತರಬೇತಿ ನೀಡುವುದಕ್ಕೆ ಆದ್ಯತೆ - ಪ್ರತಿ ವರ್ಷ 1,000 ವಿದ್ಯಾರ್ಥಿಗಳಿಗೆ ನೆರವು.

ಸಮಾಜ ಕಲ್ಯಾಣ - ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ- ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರು

* ಎಸ್‌ಸಿ ಸಮುದಾಯಕ್ಕೆ ಶೇ.15ರಿಂದ 17ಕ್ಕೆ, ಎಸ್‌ಟಿ ಸಮುದಾಯಕ್ಕೆ ಶೇ.3 ರಿಂದ 7ಕ್ಕೆ, ಅಲ್ಪಸಂಖ್ಯಾತರಿಗೆ ಶೇ. 4ರ ಮೀಸಲಾತಿ ಮರುಸ್ಥಾಪನೆ, ಲಿಂಗಾಯತ, ಒಕ್ಕಲಿಗ ಮತ್ತಿತರ ಸಮುದಾಯಗಳ ಆಶೋತ್ತರಗಳನ್ನು ಈಡೆರಿಸಲು ಮೀಸಲಾತಿಯನ್ನು ಶೇ.50ರಿಂದ 75 ರವರೆಗೆ ಹೆಚ್ಚಿಸಲು ಸೂಕ್ತ ಕ್ರಮ.

* ವಿಧಾನಮಂಡಲದ ಮೊದಲ ಅಧಿವೇಶನದಲ್ಲಿ ಅಂಗೀಕಾರಕ್ಕಾಗಿ ನ್ಯಾಯಮೂರ್ತಿ ಸದಾಶಿವ ಆಯೋಗದ ನರದಿ ಮಂಡನೆ ಹಾಗೂ ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಯಲ್ಲಿರುವ ಉಪ ಪಂಗಡಗಳಗೆ ನ್ಯಾಯ ಕೊಡಸಲು ಕಾಂಗ್ರೆಸ್ ಪಕ್ಷ ಬದ್ಧ.

* ಕಾಂಗ್ರೆಸ್ ಪಕ್ಷ ಸಿದ್ಧಪಡಿಸಿದ್ದ ಹಿಂದುಳಿದ ವರ್ಗಗಳ ಜನಗಣತಿ ವರದಿಯನ್ನು ಅನುಷ್ಠಾನಕ್ಕೆ ತರುವುದು.

* 5 ವರ್ಷಗಳಲ್ಲಿ ಎಲ್ಲಾ ಎಸ್‌ಸಿ/ಎಸ್‌ಟಿ ಕುಟುಂಬಗಳಿಗೆ ಮನೆ ನೀಡಲಿದ್ದು, ಸರಕಾರದಿಂದಲೇ ಮನೆಗಳ ನಿರ್ಮಾಣ.

* ಐರಾವತ ಯೋಜನೆ - ಎಸ್‌ಸಿ/ಎಸ್‌ಟಿ ಕುಟುಂಬದ 25 ಸಾವಿರ ಯುವಕರಿಗೆ ಸ್ವಉದ್ಯೋಗಕ್ಕಾಗಿ ಟ್ಯಾಕ್ಸಿ ಸರಕು ಸಾಗಣೆ ವಾಹನ, ತ್ರಿಚಕ್ರ ವಾಹನ, ಲಘು ವಾಹನಗಳ ಖರೀದಿಗೆ ಪ್ರತಿ ವರ್ಷ ಶೇ. 3ರ ಬಡ್ಡಿದರದಲ್ಲಿ ಸಾಲ.

* ಡಾ. ಬಿ.ಆರ್. ಅಂಬೇಡ್ಕರ್ ಉದ್ಯಮಶೀಲತಾ ನಿಧಿ ಸ್ಥಾಪನೆ - ಎಸ್‌ಸಿ ಸಮುದಾಯದ ಉದ್ಯಮಶೀಲರಿಗಾಗಿ ಉದ್ಯಮ ಅಭಿವೃದ್ಧಿ ಮತ್ತು ಇನ್‌ಕ್ಯುಲೇಷನ್ ಕಾರ್ಯಕ್ರಮಗಳಗಾಗಿ 1 ಸಾವಿರ ಕೋಟಿ ರೂ. ಮೀಸಲು.

* ಕೇಂದ್ರ ಸರಕಾರ ಎಸ್‌ಸಿ/ಎಸ್ಟಿ ವಿದ್ಯಾರ್ಥಿಳಿಗೆ ಮೆಟ್ರಿಕ್‌ ಪೂರ್ವ ಸ್ಟಾಲರ್‌ಶಿಪ್‌ ರದ್ದುಪಡಿಸಿದೆ. ಹೀಗಾಗಿ, ಸ್ಟಾಲರ್‌ಶಿಪ್ ನೀಡಲು ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣದೇವರಾಜ ಒಡೆಯರ್ ಸ್ಕಾಲರ್ ಯೋಜನೆ ಆರಂಭ.

* ಸಾವಿತ್ರಿ ಬಾಯಿ ಪುಲೆ ಶಿಕ್ಷಣ ಯೋಜನೆ 1ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾಸಿಕ 150 ರೂ. ಪ್ರೋತ್ಸಾಹಧನ, 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾಸಿಕ 300 ರೂ. ಪ್ರೋತ್ಸಾಹಧನ. ವಿದ್ಯಾರ್ಥಿಯ ತಾಯಿಯ ಬ್ಯಾಂಕ್‌ಗೆ ಖಾತೆಗೆ ನೇರ ಸಂದಾಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+