‘ಕರ್ನಾಟಕದ ಬಿಜೆಪಿ ಪಾಲಿಗೆ ದೆಹಲಿಯ ಹೈಕಮಾಂಡೇ ಬಹುದೊಡ್ಡ ವಿಲನ್!’
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದು, ಹೊಸ ಸರ್ಕಾರವು ಅಧಿಕಾರಕ್ಕೆ ಬಂದು 5 ತಿಂಗಳೇ ಕಳೆದಿದೆ. ಆದರೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾತ್ರ ಇನ್ನೂ ಅಂತಿಮ ಹಂತ ತಲುಪಿಲ್ಲ. ಇದೇ ವಿಚಾರ ಇಟ್ಟುಕೊಂಡು ಬಿಜೆಪಿ ವಿರುದ್ಧ ಕಾಂಗ್ರೆಸ್ ಪದೇ ಪದೆ ಗಂಭೀರ ಆರೋಪ ಮಾಡುತ್ತಿದ್ದು, ಈಗ ಮತ್ತೊಂದು ಬಾಂಬ್ ಸಿಡಿಸಿದೆ. ಹಾಗಾದರೆ BJP ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದಿರುವ ಬಗ್ಗೆ ಕಾಂಗ್ರೆಸ್ ಹೇಳಿದ್ದೇನು?
ಬಿಜೆಪಿ ಹೈಕಮಾಂಡ್ ಹೇಳಿದ್ದೇ ಅಂತಿಮ, ರಾಜ್ಯದ ಬಿಜೆಪಿ ನಾಯಕರಿಗೆ ಸ್ವಾತಂತ್ರ್ಯ ಇಲ್ಲ ಎಂಬ ಆರೋಪ ಪದೇ ಪದೆ ಕೇಳಿಬರುತ್ತಿದೆ. ಅದರಲ್ಲೂ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಹೀನಾಯ ಸೋಲಿನ ಬಳಿಕ ರಾಜ್ಯ ಬಿಜೆಪಿ ಒಳಗೆ ಬೆಂಕಿ ಹತ್ತಿದೆ. ಹೀಗೆ ಒಳಗೆ ಕಚ್ಚಾಟ ಕೂಡ ಶುರುವಾಗಿರುವ ಬೆನ್ನಲ್ಲೇ, ಹೈಕಮಾಂಡ್ ವಿರುದ್ಧವೇ ಕಮಲ ಪಾಳಯದ ಒಬ್ಬೊಬ್ಬರೇ ನಾಯಕರು ತಿರುಗಿ ಬೀಳುತ್ತಿದ್ದಾರೆ. ಕಾಂಗ್ರೆಸ್ ಕೂಡ ಇದನ್ನೇ ತನ್ನ ದೊಡ್ಡ ಅಸ್ತ್ರ ಮಾಡಿಕೊಳ್ಳುತ್ತಿದೆ.

'ಹೈಕಮಾಂಡೇ ಬಹುದೊಡ್ಡ ವಿಲನ್!'
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಕರ್ನಾಟಕದ ಬಿಜೆಪಿ ಪಾಲಿಗೆ ದೆಹಲಿಯ ಹೈಕಮಾಂಡೇ ಬಹುದೊಡ್ಡ ವಿಲನ್! ಕರ್ನಾಟಕದ ಬಿಜೆಪಿ ನಾಯಕರ ಬಗ್ಗೆ ಇಷ್ಟೊಂದು ತಿರಸ್ಕಾರ ಇರುವುದೇಕೆ? ರಾಜ್ಯದ ನಾಯಕರನ್ನು ವರಿಷ್ಠರು ಶತ್ರುಗಳಂತೆ ಕಾಣುತ್ತಿದ್ದಾರೆಯೇ? ಬಿಜೆಪಿ ಮುಳುಗಿ ಹೋದ ಹಡಗಿನ ಅವಶೇಷದಂತಾಗಿದೆ ಎಂದು ಬಿಜೆಪಿಯ ಮಾಜಿ ಮುಖ್ಯಮಂತ್ರಿಯೇ ಹೇಳುತ್ತಿದ್ದಾರೆ' ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ಅಲ್ಲದೆ ಟ್ವೀಟ್‌ನಲ್ಲಿ ಆರೋಪ ಮುಂದುವರಿಸಿರುವ ಕಾಂಗ್ರೆಸ್, 'ಬಿಜೆಪಿಯ ದೆಹಲಿ ನಾಯಕರು ಕರ್ನಾಟಕವನ್ನು ದ್ವೇಷಿಸುತ್ತಾರೆ ಎಂಬುದು ಹಳೆಯ ಸತ್ಯ, ಕರ್ನಾಟಕದಲ್ಲಿನ ಸ್ವತಃ ಅವರದೇ ಪಕ್ಷದ ನಾಯಕರನ್ನೂ ದ್ವೇಷಿಸುತ್ತಾರೆ ಎಂಬುದು ಹೊಸ ಸತ್ಯ! ರಾಜ್ಯದ ಯಾವೊಬ್ಬ ನಾಯಕರನ್ನೂ ವರಿಷ್ಠರು ತಮ್ಮ ಮನೆಯ ಗೇಟಿನ ಒಳಗೂ ಸೇರಿಸುತ್ತಿಲ್ಲವೇ @BJP4Karnataka?' ಎಂದು ಕರ್ನಾಟಕ ಬಿಜೆಪಿ ನಾಯಕರನ್ನು ಕರ್ನಾಟಕ ಕಾಂಗ್ರೆಸ್ ಕೆಣಕಿದೆ.
ಕರ್ನಾಟಕದ ಬಿಜೆಪಿ ಪಾಲಿಗೆ ದೆಹಲಿಯ ಹೈಕಮಾಂಡೇ ಬಹುದೊಡ್ಡ ವಿಲನ್!
— Karnataka Congress (@INCKarnataka) October 12, 2023
ಕರ್ನಾಟಕದ ಬಿಜೆಪಿ ನಾಯಕರ ಬಗ್ಗೆ ಇಷ್ಟೊಂದು ತಿರಸ್ಕಾರ ಇರುವುದೇಕೆ? ರಾಜ್ಯದ ನಾಯಕರನ್ನು ವರಿಷ್ಠರು ಶತ್ರುಗಳಂತೆ ಕಾಣುತ್ತಿದ್ದಾರೆಯೇ?
ಬಿಜೆಪಿ ಮುಳುಗಿ ಹೋದ ಹಡಗಿನ ಅವಶೇಷದಂತಾಗಿದೆ ಎಂದು ಬಿಜೆಪಿಯ ಮಾಜಿ ಮುಖ್ಯಮಂತ್ರಿಯೇ ಹೇಳುತ್ತಿದ್ದಾರೆ.
ಬಿಜೆಪಿಯ ದೆಹಲಿ ನಾಯಕರು… pic.twitter.com/6OQnKJegJm
'25 ಸಂಸದರು ಎಲ್ಲಿ ಅಡಗಿ ಕುಳಿತಿದ್ದಾರೆ?'
ಇದೇ ರೀತಿ ರಾಜ್ಯ ಬಿಜೆಪಿ ಸಂಸದರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು, 'ರಾಜ್ಯದಲ್ಲಿ ಬರ ಎದುರಾಗಿದೆ, ಬರದ ಪರಿಣಾಮ ವಿದ್ಯುತ್ ಕೊರತೆ ಉಂಟಾಗಿದೆ, ಈ ಸಮಯದಲ್ಲಿ ಕೇಂದ್ರ ಸರ್ಕಾರ ಕನ್ನಡಿಗರ ಪರ ನಿಲ್ಲುವಂತೆ ಒತ್ತಾಯಿಸಬೇಕಾದ ಬಿಜೆಪಿಯ 25 ಸಂಸದರು ಎಲ್ಲಿ ಅಡಗಿ ಕುಳಿತಿದ್ದಾರೆ? ಬಿಜೆಪಿ ಸಂಸದರ ಕೆಲಸವೇನು? ಕನ್ನಡಿಗರ ಮತ ಪಡೆದು ಕನ್ನಡಿಗರ ಸಂಕಷ್ಟ ನಿವಾರಣೆಗೆ ಕೆಲಸ ಮಾಡದಿದ್ದಮೇಲೆ ಇವರು ಸಂಸದರ ಸ್ಥಾನಕ್ಕೆ ಅನರ್ಹರು.' ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಆರೋಪ ಮಾಡಿತ್ತು.
ರಾಜ್ಯದಲ್ಲಿ ಬರ ಎದುರಾಗಿದೆ, ಬರದ ಪರಿಣಾಮ ವಿದ್ಯುತ್ ಕೊರತೆ ಉಂಟಾಗಿದೆ, ಈ ಸಮಯದಲ್ಲಿ ಕೇಂದ್ರ ಸರ್ಕಾರ ಕನ್ನಡಿಗರ ಪರ ನಿಲ್ಲುವಂತೆ ಒತ್ತಾಯಿಸಬೇಕಾದ ಬಿಜೆಪಿಯ 25 ಸಂಸದರು ಎಲ್ಲಿ ಅಡಗಿ ಕುಳಿತಿದ್ದಾರೆ?
— Karnataka Congress (@INCKarnataka) October 12, 2023
ಬಿಜೆಪಿ ಸಂಸದರ ಕೆಲಸವೇನು? ಕನ್ನಡಿಗರ ಮತ ಪಡೆದು ಕನ್ನಡಿಗರ ಸಂಕಷ್ಟ ನಿವಾರಣೆಗೆ ಕೆಲಸ ಮಾಡದಿದ್ದಮೇಲೆ ಇವರು ಸಂಸದರ ಸ್ಥಾನಕ್ಕೆ…












Click it and Unblock the Notifications