ರಾಜ್ಯದ ಅಲ್ಲಲ್ಲಿ ಮಳೆ, ಬೆಂಗಳೂರಿಗೂ ತಂಪು
ಬೆಂಗಳೂರು, ಸೆಪ್ಟೆಂಬರ್. 25: ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಶುಕ್ರವಾರ ಕರವಾಳಿ ಮತ್ತು ಉತ್ತರ ಒಳನಾಡಿನ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಮಂಡ್ಯದ ಮಾವಳ್ಳಿಯಲ್ಲಿ 9 ಸೆಂ ಮೀ, ಮೈಸೂರಲ್ಲಿ 8 ಸೆಂ ಮೀ, ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ 7 ಸೆಂ ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. [ಭಾರೀ ಮಳೆ ಹೊಡೆತಕ್ಕೆ ಸಿಕ್ಕ ಕರ್ನಾಟಕದ ಚಿತ್ರಗಳು]

ಉಳಿದಂತೆ ಉಡುಪಿ, ಬೇಗೂರು,ಸಾಗರ, ಶಿರಾ, ಸೇಡಂ, ಬಾಳೆಹೊನ್ನೂರು, ಟಿ ನರಸೀಪುರ, ಪೊನ್ನಪೇಟ್, ನಾಗಮಂಗಲ, ಮಾಗಡಿ, ಯಲಹಂಕ, ಕೋಟಾ, ಕೆಜಿಎಫ್, ಶೃಂಗೇರಿ, ಮಧುಗಿರಿ, ಶಿರಸಿ, ಶ್ರೀರಂಗಪಟ್ಟಣ ಭಾಗದಲ್ಲೂ ಸಾಧಾರಣ ಮಳೆಯಾಗುತ್ತಿದೆ.
ಬೆಂಗಳೂರಲ್ಲಿ ಮಳೆ ಬರಲಿದೆ
ವಾರದಿಂದ ಮಾಯವಾಗಿದ್ದ ಗುರುವಾರ ರಾತ್ರಿ ಏಕಾಏಕಿ ಸುರಿದ ಮಳೆ ಬೆಂಗಳೂರಿಗೆ ತಂಪೆರಚಿತು. ಬೆಂಗಳೂರಲ್ಲಿ ಕನಿಷ್ಠ 20 ರಿಂದ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗುತ್ತಿದೆ. ಶನಿವಾರ ಸಹ ಸಾಧಾರಣ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications