ಗೃಹಲಕ್ಷ್ಮೀ ಹಣ 4,000 ರೂಪಾಯಿಗೆ ಏರಿಕೆ ಮಾಡಲು... Gruha Lakshmi

ಗೃಹಲಕ್ಷ್ಮೀ ಹಣದಲ್ಲಿ ಬೋರ್‌ವೆಲ್ ತೋಡಿಸಿದ್ದು, ಗೃಹಲಕ್ಷ್ಮೀ ಹಣ ಬಳಸಿ ಶಾಲಾ ಮಕ್ಕಳಿಗೆ ಸಹಾಯ ಮಾಡಿದ್ದು, ಹೀಗೆ ಗೃಹಲಕ್ಷ್ಮೀ ಹಣ ಬಳಸಿ ಸಾಕಷ್ಟು ಉತ್ತಮ ಕೆಲಸ ಮಾಡಿರುವ ಉದಾಹರಣೆಗಳು ಕರ್ನಾಟಕದಲ್ಲಿ ಕಾಣಬಹುದು. ಕರ್ನಾಟಕದ ಈ ಯೋಜನೆ ಜಾಗತಿಕವಾಗಿ ಕೂಡ ಸದ್ದು ಮಾಡುತ್ತಿದ್ದು, ಗೃಹಲಕ್ಷ್ಮೀ ಯೋಜನೆಯಿಂದ ಕರ್ನಾಟಕ ದಿವಾಳಿ ಆಗಲಿದೆ ಅಂತಾ ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ. ಈ ಸಮಯದಲ್ಲೇ, ಗೃಹಲಕ್ಷ್ಮೀ ಹಣ 4,000 ರೂಪಾಯಿಗೆ ಏರಿಕೆ ಮಾಡಲು...

2023ರ ವಿಧಾನಸಭೆ ಚುನಾವಣೆ ಗೆದ್ದು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣ ಆಗಿದ್ದೇ 'ಗೃಹಲಕ್ಷ್ಮೀ ಯೋಜನೆ' ಎನ್ನಬಹುದು. ಯಾಕಂದ್ರೆ ಪ್ರತಿ ಕುಟುಂಬದಲ್ಲಿ ಮಹಿಳೆಗೆ ಪ್ರತಿ ತಿಂಗಳು 2000 ರೂಪಾಯಿ ಹಣವನ್ನು ನೀಡುವ ಮಾತು ಕೊಟ್ಟಿದ್ದ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆ ಗೆದ್ದು ಬೀಗಿತ್ತು. ಹೀಗಿದ್ದಾಗಲೇ, ಸರಿಯಾದ ಸಮಯಕ್ಕೆ ಹಣ ಬರುತ್ತಿಲ್ಲ ಎಂದು 'ಗೃಹಲಕ್ಷ್ಮೀ ಯೋಜನೆ' ಬಗ್ಗೆ ಕರ್ನಾಟಕದ ಮಹಿಳೆಯರು ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಹೀಗಿದ್ದಾಗಲೇ, ಗೃಹಲಕ್ಷ್ಮೀ ಹಣ 4,000 ರೂಪಾಯಿಗೆ ಏರಿಕೆಯನ್ನ ಮಾಡಲು...

Karnataka CM Siddaramaiah Budget And Gruha Lakshmi Scheme Amount Changes Possibilities

ಗೃಹಲಕ್ಷ್ಮೀ ಹಣ 4,000 ರೂಪಾಯಿಗೆ...

ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ 'ಗೃಹಲಕ್ಷ್ಮೀ ಯೋಜನೆ' ಸೇರಿದಂತೆ ಒಟ್ಟು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಹೀಗೆ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜನರಿಗೆ ತಲುಪಿಸಲು ಕೈಯಲ್ಲಿ ಹಣವೇ ಇಲ್ಲದೆ ಪರದಾಟವು ಕೂಡ ಎದುರಾಗಿದೆ. ಹೀಗಿದ್ದಾಗಲೇ ಸಿದ್ದರಾಮಯ್ಯ ಅವರ ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಇಂತಹ ಸಮಯದಲ್ಲೇ, ಗೃಹಲಕ್ಷ್ಮೀ ಹಣ 4,000 ರೂಪಾಯಿಗೆ ಏರಿಕೆಯನ್ನ ಮಾಡಲು...

4,000 ರೂಪಾಯಿಗೆ ಏರಿಕೆ...

ಹೌದು, ರಾಜ್ಯದಲ್ಲಿ ಎಲ್ಲಾ ಬೆಲೆಯೂ ಏರಿಕೆ ಆಗಿರುವ ಕಾರಣಕ್ಕೆ ಇದೀಗ ಗೃಹಲಕ್ಷ್ಮೀ ಹಣ 4,000 ರೂಪಾಯಿಗೆ ಏರಿಕೆಯನ್ನ ಮಾಡಲು ಜನರು ಅಂದ್ರೆ ಕರ್ನಾಟಕದ ಪ್ರಜೆಗಳು ಒತ್ತಾಯ ಮಾಡುತ್ತಿದ್ದಾರೆ. ಅದರಲ್ಲೂ ಅರ್ಹರಲ್ಲದ ಜನರನ್ನು ಗೃಹಲಕ್ಷ್ಮೀ ಯೋಜನೆಯಿಂದ ಹೊರ ಹಾಕಿದ ನಂತರ, ಅದೇ ಹಣದಲ್ಲಿ ಈಗಿರುವ ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಹಣ 4,000 ರೂಪಾಯಿಗೆ ಏರಿಕೆ ಮಾಡಬೇಕು. ಸಿಎಂ ಸಿದ್ದರಾಮಯ್ಯ ಅವರು ಈ ಯೋಜನೆಯ ಹಣ ಏರಿಕೆ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಹೊರಡಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಒಟ್ನಲ್ಲಿ ಈಗಾಗಲೇ ಬಡವರ ಮನೆಗಳಲ್ಲಿ ಸಾಕಷ್ಟು ಸಹಾಯವನ್ನ ಮಾಡಿರುವ 'ಗೃಹಲಕ್ಷ್ಮೀ' ಹಣ ಇನ್ನಷ್ಟು ಬೆಳಕು ತರುವ ನಿರೀಕ್ಷೆ ಇದೆ. ಸಿದ್ದರಾಮಯ್ಯ ಅವರ ಸರ್ಕಾರ 2000 ರೂಪಾಯಿ ಹಣವನ್ನು ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಮೂಲಕ ಹಂಚುತ್ತಿದೆ. ಆದರೆ ಈಗ ಆ ಹಣವನ್ನ 4,000 ರೂಪಾಯಿಗೆ ಏರಿಕೆ ಮಾಡುವ ನಿರೀಕ್ಷೆ ಮೂಡಿದ್ದು ಸಾಕಷ್ಟು ಕುತೂಹಲ ಕೂಡ ಕೆರಳಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಮಂಡಿಸುವ ಕರ್ನಾಟಕ ಬಜೆಟ್ ಮೇಲೆ ಎಲ್ಲರ ನಿರೀಕ್ಷೆ ಇದೆ.

ಕರ್ನಾಟಕ ಬಜೆಟ್ ವೇಳೆ ಗೃಹಲಕ್ಷ್ಮೀ ಹಣ...

ಕಾಂಗ್ರೆಸ್ ಸರ್ಕಾರಕ್ಕೆ ಬಲವಾಗಿ ನಿಂತಿರುವುದೇ ಗ್ಯಾರಂಟಿ ಯೋಜನೆಗಳು. ಇದೇ ಕಾರಣಕ್ಕೆ, ಗೃಹಲಕ್ಷ್ಮೀ ಯೋಜನೆಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುವ ನಿರೀಕ್ಷೆಗಳು ಇವೆ. ಇಂತಹ ಪರಿಸ್ಥಿತಿಯಲ್ಲಿ ಗೃಹಲಕ್ಷ್ಮೀ ಹಣ 3,000 ರೂಪಾಯಿಗೆ ಏರಿಕೆ ಮಾಡಲು ಈ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಚಿಂತನೆ ನಡೆಸಿದೆಯಂತೆ. 2025-26ನೇ ಸಾಲಿನ ಕರ್ನಾಟಕ ಬಜೆಟ್ ಸಮಯದಲ್ಲಿ ಗೃಹಲಕ್ಷ್ಮೀ ಹಣವನ್ನ 3,000 ರೂಪಾಯಿಗೆ ಏರಿಕೆ ಮಾಡುವ ಆದೇಶ ಹೊರಬೀಳುತ್ತಾ? ಅನ್ನೋ ಕುತೂಹಲ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+