Caste Survey Report: ತಾಂತ್ರಿಕ ಅಂಶಗಳ ಅಗತ್ಯತೆ: ಎರಡು ಸಂಪುಟ ಸಭೆ ಬಳಿಕ ನಿರ್ಧಾರ: ಸಿದ್ದರಾಮಯ್ಯ
ಬೆಂಗಳೂರು, ಏಪ್ರಿಲ್ 18: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ, ಪರ ಮತ್ತು ವಿರೋಧಕ್ಕೆ ಕಾರಣವಾಗಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ ವರದಿ-Karnataka Caste Census Survey) ಸಂಬಂಧಸಿದಂತೆ ನೆನ್ನೆ ಏಪ್ರಿಲ್ 17ರಂದು ನಡೆದ ಮಹತ್ವದ ಸಂಚಿವ ಸಂಪುಟ ಸಭೆ ಜರುಗಿತು. ಆದರೆ ಸಭೆಯಲ್ಲಿ ಅಂತಿಮ ನೀರ್ಣಯಕ್ಕೆ ಬರಲಾಗಿಲ್ಲ. ಯಾವೊಬ್ಬ ಸಚಿವರಿಂದಲೂ ಗಣತಿ ವರಿದಗೆ ವಿರೋಧಿಸಿಲ್ಲ. ತಾಂತ್ರಿಕ ಅಂಶಗಳ ಚರ್ಚೆ ಆಗಬೇಕಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಮಲೇಮಾಹದೇಶ್ವರದಲ್ಲಿ ಸಚಿವ ಸಂಪುಟ ಸಭೆ ನಡೆಸುವುದಾಗಿತಿಳಿಸಿದ್ದಾರೆ. ಮೇ 2ರಂದು ಮಹತ್ವದ ನಿರ್ಧಾರ ಪ್ರಕಟವಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಂಫುಟ ಸಭೆಯಲ್ಲಿ ಜಾತಿ ಗಣತಿ ವರದಿಯ ಚರ್ಚೆ ಅಪೂರ್ಣವಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015 ರ ದತ್ತಾಂಶಗಳ ಅಧ್ಯಯನ ವರದಿಯನ್ನು ರಾಜ್ಯ ಸಚಿವ ಸಂಪುಟ ಸುದೀರ್ಘವಾಗಿ ಚರ್ಚೆ ಮಾಡಲಾಗಿದೆ. ಇನ್ನಷ್ಟು ಮಾಹಿತಿ, ತಾಂತ್ರಿಕ ವಿವರಗಳು ಚರ್ಚೆಗೆ ಅಗತ್ಯ ಎನಿಸಿದೆ. ಅವುಗಳನ್ನು ಒದಗಿಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂದಿನ ಚರ್ಚೆ ಅಪೂರ್ಣವಾಗಿದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಏ. 24 & ಮೇ 2ರಂದು ಮಹತ್ವದ ಸಭೆ, ನಿರ್ಧಾರ ಪ್ರಕಟ?
ಜಾತಿ ಗಣತಿ ಬಗ್ಗೆ ಅತ್ಯಂತ ಸೌಹಾರ್ದಯುತವಾಗಿ ನಡೆದ ಚರ್ಚೆಯಲ್ಲಿ ಜನಸಂಖ್ಯೆ ಹಿಂದುಳಿದಿರುವಿಕೆ, ಅಧ್ಯಯನ ಮಾಡುವ ಸಂದರ್ಭದಲ್ಲಿ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಸಂದರ್ಭದಲ್ಲಿ ಕೈಗೊಂಡ ಮಾನದಂಡಗಳ ವಿವರಗಳನ್ನು ಸ್ವಲ್ಪ ಮಟ್ಟಿಗೆ ಚರ್ಚಿಸಲಾಗಿದೆ. ಹೀಗಿದ್ದರೂ ಚರ್ಚೆ ಅಪೂರ್ಣ ಎನಿಸಿದೆ.
ಈ ಕಾರಣಕ್ಕೆ ಮುಂದಿನ ಸಚಿವ ಸಂಪುಟ ಸಭೆ ಏಪ್ರಿಲ್ 24 ರಂದು ಚಾಮರಾಜನಗರ ಜಿಲ್ಲೆಯ ಮಲೆಮಾದೇಶ್ವರ ಬೆಟ್ಟದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಆಯಾ ಭಾಗದ ವಿಷಯಗಳು ಹೆಚ್ಚಾಗಿ ಚರ್ಚೆಗೆ ಬರುತ್ತದೆ. ನಂತರ ಮೇ 2 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಇಂದಿನ ಸಚಿವ ಸಂಪುಟ ನಿರ್ಧರಿಸಿದೆ ಎಂದು ಸಿದ್ದರಾಮಯ್ಯನವರು ವಿವರಿಸಿದರು.
ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಉತ್ಪನ್ನದ ಮೂಲ ಹಾಗೂ ಕೈಗೊಂಡ ಮಾನದಂಡಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಕೆಲವು ಹಿರಿಯ ಸಚಿವರು ಮಾರ್ಗದರ್ಶನ ಮಾಡಿದ್ದಾರೆ. ಮುಂದಿನ ಸಚಿವ ಸಂಪುಟದಲ್ಲಿ ಅಧಿಕಾರಿಗಳು ಅಗತ್ಯ ಮಾಹಿತಿಯನ್ನು ಒದಗಿಸಲಿದ್ದಾರೆ ಎಂದರು.
94.17% ಜನರ ಒಳಪಡಿಸಿ ಸಮೀಕ್ಷೆ
ಜಾತಿ ಸಂಖ್ಯಾಬಲದ ಬಗ್ಗೆ ತಪ್ಪು ಗ್ರಹಿಕೆಗಳು ಹೊರಬೀಳುತ್ತಿವೆ. ಅವುಗಳು ಸರಿಯಾದ ವಿವರಗಳಲ್ಲ. 94.17% ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ವರದಿ ಮಂಡನೆಯಾಗಿ ಚರ್ಚೆ ನಡೆಸಲಾಗಿದೆ ಎಂದು ವರದಿಗೆ ಆಕ್ಷೇಪಿಸುತ್ತಿರುವ ವಿವಿಧ ಜಾತಿ ಸಮುದಾಯ ಹಾಗೂ ವಿಪಕ್ಷಗಳ ವಿರೋಧಕ್ಕೆ ಅವರು ತಿರುಗೇಟು ನೀಡಿದರು. ಈ ಮೂಲಕ ಜಾತಿ ಗಣತಿ ವರದಿಯಲ್ಲಿ ಸರ್ಕಾರದ ನಡೆ ಸರಿಯಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಸದ್ಯ ವರದಿ ಅಧ್ಯಯನ ಮಾಡಿಕೊಂಡು ಬಂದ ಸಚಿವರ ಪೈಕಿ ಯಾರು ಸಹ ಸಂಪುಟ ಸಭೆಯಲ್ಲಿ ವಿರೋಧಿಸಿಲ್ಲ. ಬದಲಾಗಿ ತಾಂತ್ರಿಕ ಅಂಶಗಳನ್ನು ಇಟ್ಟುಕೊಂಡು ಕೊನೆಯದಾಗಿ ಎರಡು ಭಾರಿ ಚರ್ಚಿಸಲು, ವಿರೋಧಿಸುವವರಿಗೆ ಉತ್ತರ ನೀಡಲು ಸಂಪುಟ ತೀರ್ಮಾನಿಸಿದಂತಿದೆ. ಈ ಬಗ್ಗೆ ಮೆ 2ರಂದು ಯಾವ ನಿರ್ಧಾರ ಪ್ರಕಟಗೊಳ್ಳುತ್ತದೆ ಎಂದು ಕಾಯಬೇಕಿದೆ.












Click it and Unblock the Notifications