ಜಾತಿ ಜನಗಣತಿ ವರದಿ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್?
ಬೆಂಗಳೂರು: ಕರ್ನಾಟಕದ ಜಾತಿ ಗಣತಿ ವಿಚಾರ ಮತ್ತೆ ಮುನ್ನೆಲೆಗೆ ಬರುತ್ತಿದೆ. ಈ ಹಿಂದೆ 2013-2018ರ ತನಕ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಜಾತಿ ಗಣತಿ ಸದ್ದು ಮಾಡಿತ್ತು. ಹೀಗೆ ಕುತೂಹಲ ಕೆರಳಿಸಿದ್ದ ಜಾತಿ ಗಣತಿ ವರದಿಯು ಅಂತಿಮ ಘಟ್ಟ ತಲುಪಿದ್ದು, ವರದಿ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ಕೊಟ್ರಾ? ಅನ್ನೋ ಡೌಟ್ ಶುರುವಾಗಿದೆ.
8 ವರ್ಷದ ಹಿಂದೆ ಅಂದ್ರೆ 2015ರಲ್ಲಿ ಜಾತಿ ಜನಗಣತಿ ವರದಿ ಸೋರಿಕೆ ವಿಚಾರವು ಚರ್ಚೆಗೆ ಗ್ರಾಸವಾಗಿತ್ತು. ಈ ವರದಿ ಇಟ್ಟುಕೊಂಡೇ ವಿಪಕ್ಷಗಳು ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದವು. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಾತಿ ಜನಗಣತಿ ಶುರು ಆಗಿತ್ತು. ಇದನ್ನು 2015ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಸಲಾಗಿತ್ತು. ಅಲ್ಲದೆ 162 ಕೋಟಿ ರೂಪಾಯಿ ವೆಚ್ಚ ಜಾತಿ ಗಣತಿಗೆ ಖರ್ಚಾಗಿತ್ತು. ಇಷ್ಟೆಲ್ಲಾ ಖರ್ಚು ಮಾಡಿ ಸಿದ್ಧಗೊಳಿಸಿದ್ದ ವರದಿ ಮಾತ್ರ 8 ವರ್ಷವಾದರೂ ಹೊರಬಿದ್ದಿಲ್ಲ.

ಸಿದ್ದರಾಮಯ್ಯ ಜಾತಿ ಗಣತಿ ಸ್ವೀಕರಿಸುತ್ತಾರಾ?
ಇದೀಗ ಮೂಡಿರುವ ಪ್ರಶ್ನೆಯೇ ಅದು. ಏಕೆಂದರೆ ತಾವೇ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ನಡೆಸಿದ್ದ ಜಾತಿ ಗಣತಿಯನ್ನ ಈಗ ಸಿದ್ದರಾಮಯ್ಯ ಅವರೇ ರಿವೀಲ್ ಮಾಡ್ತಾರಾ? ಅನ್ನೋ ವಿಚಾರ. 162 ಕೋಟಿ ವೆಚ್ಚ ಮಾಡಿ ನಡೆಸಿದ್ದ ಜಾತಿ ಗಣತಿ ಸೋರಿಕೆಯಾಗಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗ ಈವರೆಗೂ ಸರ್ಕಾರಕ್ಕೆ ಸಲ್ಲಿಸಿಲ್ಲ. ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಎಸ್ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ವರದಿ ಸ್ವೀಕರಿಸದ ಕಾರಣ ಅದು ಆಯೋಗದ ಬಳಿಯೇ ಉಳಿದುಕೊಂಡಿದೆ.
ಕೋರ್ಟ್‌ನಲ್ಲಿ ಜಾತಿ ಗಣತಿ ವಿರುದ್ಧ ಕೇಸ್!
ಇಷ್ಟೆಲ್ಲಾ ಒಂದ್ಕಡೆ ಆದ್ರೆ, ಇನ್ನೊಂದ್ಕಡೆ ಜಾತಿ ಗಣತಿ ವಿರುದ್ಧ ಕೋರ್ಟ್‌ನಲ್ಲಿ ಅರ್ಜಿಗಳು ಕೂಡ ಸಲ್ಲಿಕೆಯಾಗಿದ್ದವು. ಜಾತಿ ಗಣತಿ ನಡೆಸಬಾರದು, ಈಗ ನಡೆಸಿದ್ದು ಅಸಿಂಧು ಎಂದು ಕೆಲವರು ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದಾರೆ. ಹೀಗಾಗಿ ಜಾತಿ ಗಣತಿ ವಿಚಾರ ಕುತೂಹಲ ಕೆರಳಿಸುತ್ತಿದೆ. 135 ಸ್ಥಾನ ಗೆದ್ದು ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರ್ಕಾರ, ಈ ಹಿಂದೆ ತಾನೇ ನಡೆಸಿದ್ದ ಜಾತಿ ಗಣತಿ ರಿವೀಲ್ ಮಾಡುತ್ತಾ? ಅನ್ನೋ ಡೌಟ್ ಕೂಡ ಕಾಡುತ್ತಿದೆ. ಅದಕ್ಕೆಲ್ಲಾ ಉತ್ತರ ಇನ್ನು ಕೆಲವೇ ದಿನದಲ್ಲಿ ಸಿಗುವ ಸಾಧ್ಯತೆ ದಟ್ಟವಾಗಿದೆ.
ಸಂಪುಟ ಸಭೆಯಲ್ಲಿ ಅನುಮೋದನೆ?
ಇನ್ನು ರಾಜ್ಯದಲ್ಲಿ ನಡೆದಿರುವ ಜಾತಿ ಗಣತಿ ವರದಿಯನ್ನ ಆಯೋಗವು ಸರ್ಕಾರಕ್ಕೆ ಸಲ್ಲಿಸಲು ನಿರ್ದೇಶನ ನೀಡಬೇಕೆಂದು ಕೆಲ ಅರ್ಜಿಗಳು ಸಲ್ಲಿಕೆಯಾಗಿವೆ. ಆ ಅರ್ಜಿಗಳೂ ವಿಚಾರಣೆಯ ಹಂತದಲ್ಲಿವೆ. ಇಷ್ಟೆಲ್ಲದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾತಿ ಜನಗಣತಿ ವರದಿ ಸ್ವೀಕರಿಸಲು ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಈ ವರದಿ ಸ್ವೀಕರಿಸಿ ಸಂಪುಟ ಸಭೆಯಲ್ಲಿ ವರದಿಗೆ ಅನುಮೋದನೆ ಕೂಡ ಕೊಡಲು ಸಿದ್ಧತೆ ನಡೆದಿದೆಯಂತೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ನಡೆ ತೀವ್ರ ಕುತೂಹಲ ಕೆರಳಿಸಿದೆ.

ಒಟ್ನಲ್ಲಿ 8 ವರ್ಷಗಳ ಬಳಿಕ ಮತ್ತೆ ಕರ್ನಾಟಕದಲ್ಲಿ ಜಾತಿ ಜನಗಣತಿ ಸದ್ದು ಮಾಡುತ್ತಿದೆ. ಈ ಮೂಲಕ ಕೊನೆಗೂ ರಾಜ್ಯದಲ್ಲಿ 160 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿ ಸಿದ್ಧಪಡಿಸಿದ್ದ ಜಾತಿ ಗಣತಿ ರಿವೀಲ್ ಆಗುತ್ತೆ ಅಂತಾ ಜನ ಕಾಯುತ್ತಿದ್ದಾರೆ. ಸಂಪುಟ ಸಭೆ ಅನುಮೋದನೆ ನೀಡಿದ ನಂತರ ಜಾತಿ ಗಣತಿ ವರದಿ ಬಹಿರಂಗವಾಗುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆ ಮತ್ತು ಬಿಬಿಎಂಪಿ ಚನಾವಣೆಗೆ ಇನ್ನು ಕೆಲವೇ ತಿಂಗಳು ಇರುವಾಗ ಜಾತಿ ಗಣತಿ ವಿಚಾರ ಮತ್ತೆ ಸುದ್ದಿಯಾಗುತ್ತಿದೆ. ಹಾಗೇ ರಾಜ್ಯ ಸರ್ಕಾರದ ನಡೆಯ ಬಗ್ಗೆ ವಿಪಕ್ಷಗಳು ಕೂಡ ಕಣ್ಣಿಟ್ಟಿವೆ.












Click it and Unblock the Notifications