Cabinet Reshuffle: ಉಪಚುನಾವಣೆ ಬಳಿಕ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿ! 7 ಸಚಿವರಿಗೆ CM ಕೋಕ್? ಇಲ್ಲಿದೆ ಪಟ್ಟಿ
ಬೆಂಗಳೂರು, ನವೆಂಬರ್ 13: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ವಿವಿಧ ಭ್ರಷ್ಟಾಚಾರ ಆರೋಪಗಳನ್ನು ಎದರಿಸುತ್ತಿದೆ. ಸಚಿವರ ಹೇಳಿಕೆಗಳು ಸರ್ಕಾರಕ್ಕೆ ಸಂಕಷ್ಟ ತರುತ್ತಿದೆ. ಆಡಳಿತಯಂತ್ರ ಸುಸೂತ್ರವಾಗಿ ನಡೆಸಲು ಸಿದ್ದರಾಮಯ್ಯ ಅವರು ಉಪ ಚುನಾವಣೆ ಬಳಿಕ ಮೇಜರಿ ಸರ್ಜರಿ ನಡೆಸಲಿದ್ದಾರೆ ಎನ್ನಲಾಗಿದೆ. ಡಿಸೆಂಬರ್‌ನಲ್ಲಿ ಸಚಿವ ಸಂಪುಟ ಪುನಾರಚರನೆ ಆಗಲಿದೆ, ಕೆಲವು ಸಚಿವರನ್ನು ಕೈ ಬಿಡಬಹುದು ಎಂದು ಮೂಲಗಳು ತಿಳಿಸಿವೆ.
ಭಷ್ಟಾಚಾರ ಹಣೆಪಟ್ಟಿ ಹೊತ್ತ, ವಿವಾದಗಳನ್ನು ಎಳೆದುಕೊಂಡು ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದ ವಿವಿಧ ಸುಮಾರು 07 ಮಂದಿ ಸಚಿವರನ್ನು ಸಂಪುಟದಿಂದ ಕೈಬಿಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಡಿಸೆಂಬರ್ ಮೊದಲ ಇಲ್ಲವೇ ಎರಡನೇ ವಾರ ಸಂಪುಟ ಪುನಾರಚನೆ ಮಾಡಿ, ಆಡಳಿತಕ್ಕೆ ಚುರುಕು ನೀಡಲಾಗುತ್ತಿದೆ. ಇದರಿಂದ ಸರ್ಕಾರದಲ್ಲಿ ಅಸಮಾಧಾನದ ಹೊಗೆ ಸೃಷ್ಟಿಯಾಗಬಹುದು ಅಂತಲೂ ಅಂದಾಜಿಸಲಾಗಿದೆ.

ಕೈ ಬಿಡುವು ಸಚಿವರ ಸ್ಥಾನಗಳಿಗೆ ಅರ್ಹರನ್ನು ಹೊಸ ಮುಖಗಳನ್ನು ಕೂರಿಸುವ ಸಾಧ್ಯತೆ ಇದೆ. ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಿದೆ. ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ಉಪಚುನಾವಣೆ ಮುಗಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಕೇಂದ್ರ ವರಿಷ್ಠರು ಚರ್ಚಿಸಲಿದ್ದಾರೆ.
ಯಾರನ್ನು ಸಂಪುಟದಿಂದ ಕೈ ಬಿಡಬೇಕು. ಯಾರಿಗೆ ಮಣೆ ಹಾಕಬೇಕು. ಆಡಳಿತವು ಯಾವುದೇ ಆರೋಪ ಎದುರಿಸದೇ ಹೇಗೆ ಕಾರ್ಯನಿರ್ವಹಿಸಬೇಕು ಎಂಬೆಲ್ಲದರ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸಂಪುಟದಿಂದ ಮಂತ್ರಿಗಿರಿ ಕಳೆದುಕೊಳ್ಳುವವರು ಯಾರು?
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಎಸ್.ಎಸ್.ಮಲ್ಲಿಕಾರ್ಜುನ್, ಬೋಸರಾಜು, ಕೆ.ಎನ್. ರಾಜಣ್ಣ ಸೇರಿದಂತೆ ಇಲಾಖೆಯಲ್ಲಿ ಹೆಚ್ಚು ಸಕ್ರಿಯರಲ್ಲದ ಸುಮಾರು ಏಳು ಸಚಿವರಿಗೆ ಸಿಎಂ ಕೋಕ್ ನೀಡುವ ಸಾಧ್ಯತೆ ಇದೆ.
ಆರ್‌ಬಿ ತಿಮ್ಮಾಪುರ ಅವರು ನಿರ್ವಹಿಸುತ್ತಿರುವ ಅಬಕಾರಿ ಇಲಾಖೆಯಲ್ಲಿ ನೂರಾರು ಕೋಟಿ ರೂಪಾಯಿ ಭ್ರಷ್ಟಾಚಾರವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ವಿಪಕ್ಷಗಳು ಅವರ ರಾಜೀನಾಮೆ ಪಡೆಯುವಂತೆ ಒತ್ತಡ ಹಾಕಿದ್ದಾರೆ.
ಅಲ್ಲದೇ ಇನ್ನೂ ಕೆಲ ಸಚಿವರು ತಮ್ಮ ವಿವಾದಿತ ಹೇಳಿಕೆಗಳಿಂದ ಸರ್ಕಾರಕ್ಕೆ ನಿರಂತರವಾಗಿ ಮುಜುಗರ ತರುತ್ತಿದ್ದಾರೆ. ಇಲಾಖೆ ಕಾರ್ಯದಲ್ಲಿ ಸಕ್ರಿಯವಾಗಿಲ್ಲ ಇಲ್ಲದವರು ಇದ್ದಾರೆ. ಹೀಗೆ ನಿಷ್ಕ್ರೀಯ ರೀತಿಯಲ್ಲಿ ಇರುವವರನ್ನು ಗುರುತಿಸಿ, ಸಭೆಯಲ್ಲಿ ಚರ್ಚಿಸಿ ಸಂಪುಟದಿಂದ ಕೈ ಬಿಡಲು ತೀರ್ಮಾನಿಸಲಾಗಿದೆ. ಹೊಸಬರಿಗೆ ಮಣೆ ಹಾಕಿ ಸಚಿವ ಸ್ಥಾನ ನೀಡುವ ಮುಖೇನ ಎದುರಾದ ಸಮಸ್ಯೆಗಳಿಗೆ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications