ಸ್ವಾತಂತ್ರ್ಯೋತ್ಸವ ದಿನಾಚರಣೆ ನಂತರ ಸಂಪುಟ ವಿಸ್ತರಣೆ, ಯಾರಿಗೆ ಅದೃಷ್ಟ?

ಕೈ-ತೆನೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 14 ತಿಂಗಳು ಅಧಿಕಾರ ನಡೆಸಿದ್ದು ಈಗ ಇತಿಹಾಸ. ಈಗ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆ, ಸಂಪುಟ ವಿಸ್ತರಣೆಯ ಜವಾಬ್ದಾರಿಯನ್ನು ಹೊತ್ತು ಬಿ.ಎಸ್ ಯಡಿಯೂರಪ್ಪ ಅವರು ಮುನ್ನಡೆಯುತ್ತಿದ್ದಾರೆ. ಸದ್ಯಕ್ಕೆ ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿಯಲ್ಲಿನ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲಿ ಮುಖ್ಯಮಂತ್ರಿಗಳು ನಿರತರಾಗಿದ್ದಾರೆ. ಆಗಸ್ಟ್ 16ರಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜತೆ ಯಡಿಯೂರಪ್ಪ ಸಭೆ ನಡೆಸಿ, ಅಂತಿಮ ಪಟ್ಟಿ ಹಿಡಿದುಕೊಂಡು ಬೆಂಗಳೂರಿಗೆ ಬರಲಿದ್ದಾರೆ.

ಸಂಪುಟ ಹೇಗಿರಲಿದೆ?: ಮೊದಲಿಗೆ ಯಡಿಯೂರಪ್ಪ ನೇತೃತ್ವದಲ್ಲಿ 23:11 ಸೂತ್ರದಡಿ ಮಂತ್ರಿ ಮಂಡಲ ರಚಿಸುವಂತೆ ಸೂಚಿಸಲಾಗಿತ್ತು. ನೂತನ ಸಚಿವ ಸಂಪುಟದಲ್ಲಿ ಇಬ್ಬರನ್ನು ಉಪಮುಖ್ಯಮಂತ್ರಿಯಾಗಿ ನೇಮಕಮಾಡುವ ನಿರ್ಧಾರವಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ರಾಜೀನಾಮೆ ನೀಡಿರುವವರ ಭವಿಷ್ಯ ನಿರ್ಧಾರ ನೋಡಿಕೊಂಡು, 15 ಜನರ ಪೈಕಿ 11 ಮಂದಿಗೆ ಸಚಿವ ಸ್ಥಾನಗಳನ್ನು ನೀಡುವ ಸಾಧ್ಯತೆಯೂ ಇತ್ತು. ಆದರೆ, ಈಗ ಎಲ್ಲವೂ ಬದಲಾಗಿದೆ. ಮೊದಲ ಹಂತದಲ್ಲಿ 10 ರಿಂದ 12 ಮಂದಿ ಹಿರಿಯರಿಗೆ ಸ್ಥಾನ ಕಲ್ಪಿಸಲು ಬಿಜೆಪಿ ಮುಂದಾಗಿದೆ.

ಒಟ್ಟಾರೆ, ಪ್ರದೇಶವಾರು, ಜಾತಿ ಲೆಕ್ಕಾಚಾರ, ಅನುಭವದ ಆಧಾರದ ಮೇಲೆ ಡಿಸಿಎಂಗಳ ಸಂಖ್ಯೆಯನ್ನು ಹೆಚ್ಚಿಸಲೂ ಬಹುದು. 106 ಶಾಸಕರ ಬೆಂಬಲದೊಂದಿಗೆ ಸದನದಲ್ಲಿ ಬಹುಮತ ಸಾಬೀತು ಮಾಡಿದ ಬಿಎಸ್​ ಯಡಿಯೂರಪ್ಪ, ಯಾರಿಗೆಲ್ಲಾ ಸಚಿವ ಸ್ಥಾನ ನೀಡಬೇಕು ಎಂಬ ಪಟ್ಟಿಯನ್ನು ಈಗಾಗಲೇ ಬಿಜೆಪಿ ಹೈಕಮಾಂಡ್ ಗೆ ನೀಡಿದ್ದಾರೆ. ಅತ್ತ ಉನ್ನಯ ಹುದ್ದೆಗೇರಿರುವ ಆರೆಸ್ಸೆಸ್ ಮುಖಂಡ ಸಂತೋಷ್ ಕೂಡಾ ಒಂದು ಪಟ್ಟಿ ನೀಡಿದ್ದಾರೆ. ಎರಡನ್ನು ತಾಳೆ ಮಾಡಿ ನೋಡಿ, ಅಮಿತ್ ಶಾ ಒಂದು ಫೈನಲ್ ಪಟ್ಟಿ ನೀಡಲಿದ್ದಾರೆ ಎಂಬ ಸುದ್ದಿಯಿದೆ.

ಮೊದಲ ಹಂತದಲ್ಲಿ 10 ರಿಂದ 12 ಮಂದಿಗೆ ಸ್ಥಾನ

ಮೊದಲ ಹಂತದಲ್ಲಿ 10 ರಿಂದ 12 ಮಂದಿಗೆ ಸ್ಥಾನ

ಮೊದಲ ಹಂತದಲ್ಲಿ ಬಿ ಶ್ರೀರಾಮುಲು, ಮಾಧುಸ್ವಾಮಿ, ಕೆಎಸ್ ಈಶ್ವರಪ್ಪ, ಗೋವಿಂದ ಕಾರಜೋಳ, ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಅಶ್ವತ್ಥನಾರಾಯಣ,ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ ಹಾಗೂ ಪಕ್ಷೇತರ ಶಾಸಕ ನಾಗೇಶ್ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಈ ಮೂಲಕ ಪ್ರದೇಶವಾರು ಹಂಚಿಕೆ ಒಂದು ಹಂತ ಪೂರೈಸಿ, ಸಚಿವರನ್ನು ಪ್ರವಾಹ ಪರಿಸ್ಥಿತಿ ಅವಲೋಕನ, ನೆರೆ ಸಂತ್ರಸ್ತರ ನೆರವಿಗೆ ಧಾವಿಸುವಂತೆ ಮುಖ್ಯಮಂತ್ರಿ ಸೂಚಿಸಲಿದ್ದಾರೆ.

ಇನ್ನೂ ತಗ್ಗದ ಉಪ ಮುಖ್ಯಮಂತ್ರಿ ಖಾತೆ ಕೂಗು

ಇನ್ನೂ ತಗ್ಗದ ಉಪ ಮುಖ್ಯಮಂತ್ರಿ ಖಾತೆ ಕೂಗು

ವಾಲ್ಮೀಕಿ ಸಮುದಾಯದ ನಾಯಕ ಶ್ರೀರಾಮಲುಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಅವರ ಅಭಿಮಾನಿಗಳು, ಕಾರ್ಯಕರ್ತರು ಬಹುಕಾಲದಿಂದ ಬೇಡಿಕೆ ಇಟ್ಟಿದ್ದಾರೆ. ಆರಂಭದಲ್ಲಿ ಡಿಸಿಎಂ ಸ್ಥಾನ ನೀಡುವ ಬಗ್ಗೆ ಮಾತುಕತೆ ನಡೆದಾಗ ಶ್ರೀರಾಮುಲು ಹೆಸರು ಮುಂಚೂಣಿಯಲ್ಲಿತ್ತು. ಶ್ರೀರಾಮುಲು ಅಲ್ಲದೆ, ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ, ಆರ್ ಅಶೋಕ್, ಅರವಿಂದ್ ಲಿಂಬಾಳಿ ಸೇರಿದಂತೆ ಅನೇಕ ಮಂದಿ ಹೆಸರು ಕೇಳಿ ಬಂದಿತ್ತು. ಆದರೆ, ಈ ಬಾರಿ ಡಿಸಿಎಂ ಹುದ್ದೆ ಬೇಡ ಎಂದು ಬಿಜೆಪಿ ಹೈ ಕಮಾಂಡ್ ನಿರ್ಧರಿಸಿದೆ.

ಅನರ್ಹ ಶಾಸಕರ ಕಥೆಯೇನು?

ಅನರ್ಹ ಶಾಸಕರ ಕಥೆಯೇನು?

ಒಟ್ಟು 2 ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲು ಬಿಜೆಪಿ ತೀರ್ಮಾನಿಸಿದೆ. ಮೊದಲ ಹಂತದಲ್ಲಿ 10 ರಿಂದ 12 ಶಾಸಕರು ಮಾತ್ರ ಸಂಪುಟ ಸೇರಲಿದ್ದಾರೆ. ಅನರ್ಹ ಶಾಸಕರ ಬಗ್ಗೆ ಸುಪ್ರೀಂಕೋರ್ಟ್‌ ನೀಡುವ ತೀರ್ಪನ್ನು ನೋಡಿಕೊಂಡು 2ನೇ ಹಂತದ ವಿಸ್ತರಣೆಯನ್ನು ಮಾಡುವ ಚಿಂತನೆ ಇದೆ. ಆದರೆ, ಮೊದಲ ಹಂತದಲ್ಲಿ ಸಂಪುಟ ಸೇರುವವರು ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಬೆಂಬಲಿತರಿಗೆ ಸಚಿವ ಸ್ಥಾನ ಕೈ ತಪ್ಪಿದರೂ ನಿಗಮ ಮಂಡಳಿ ಸ್ಥಾನ ನೀಡುವ ಭರವಸೆಯಂತೂ ಸಿಕ್ಕಿದೆ.

34 ಸ್ಥಾನಕ್ಕೆ 40ಕ್ಕೂ ಅಧಿಕ ಮಂದಿ ಲಾಬಿ

34 ಸ್ಥಾನಕ್ಕೆ 40ಕ್ಕೂ ಅಧಿಕ ಮಂದಿ ಲಾಬಿ

34 ಸ್ಥಾನಕ್ಕೆ 40ಕ್ಕೂ ಅಧಿಕ ಮಂದಿ ಲಾಬಿ ಮಾಡುತ್ತಿದ್ದಾರೆ. ಈಗ ಸಂಪುಟ ಸೇರಲು ಹಾತೊರೆಯುತ್ತಿರುವ ಶಾಸಕರ ಪಟ್ಟಿ ಹೀಗಿದೆ:
* ಬಿ ಶ್ರೀರಾಮುಲು
* ಕೆಎಸ್ ಈಶ್ವರಪ್ಪ
* ಆರ್ ಅಶೋಕ
* ಸುರೇಶ್ ಕುಮಾರ್
* ಗೋವಿಂದ ಕಾರಜೋಳ
* ಬಸವರಾಜ ಬೊಮ್ಮಾಯಿ
* ಸಿಎಂ ಉದಾಸಿ
* ಸಿದ್ದು ಸವದಿ
* ವೀರಣ್ಣ ಚರಂತಿ ಮಠ
* ಬಸನಗೌಡ ಪಾಟೀಲ್ ಯತ್ನಾಳ್
* ಜಗದೀಶ್ ಶೆಟ್ಟರ್
* ಗೂಳಿಹಟ್ಟಿ ಶೇಖರ್
* ಸಿಟಿ ರವಿ(ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕರೆ ಮಂತ್ರಿಮಂಡಲಕ್ಕೆ ಇಲ್ಲ)
* ಡಾ ಅಶ್ವಥನಾರಾಯಣ
* ವಿ ಸೋಮಣ್ಣ
* ಅರವಿಂದ ಲಿಂಬಾವಳಿ
* ಎಸ್ಎ ರಾಮದಾಸ್
* ಶಶಿಕಲಾ ಜೊಲ್ಲೆ
* ಮುರುಗೇಶ್ ನಿರಾಣಿ
* ರಾಜುಗೌಡ
* ಕೆಜೆ ಬೋಪಯ್ಯ
* ರೇಣುಕಾಚಾರ್ಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+