ಸಂಪುಟ ವಿಸ್ತರಣೆ ಪಟ್ಟಿ ಪ್ರಕಟ: 10 ಶಾಸಕರಿಗೆ ನಾಳೆಯಿಂದ 'ಗುರು'ಬಲ
Recommended Video
ಬೆಂಗಳೂರು, ಫೆಬ್ರವರಿ.05: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃ,ತ್ವದ ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ.06ರಂದು ನೂತನ ಸಚಿವರಾಗಿ ಪ್ರಯಾಣವಚನ ಸ್ವೀಕರಿಸುವ 10 ಮಂದಿ ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ರವಾನಿಸಲಾಗಿದೆ.
ಕರ್ನಾಟಕ ಉಪ ಚುನಾವಣೆಯಲ್ಲಿ ಗೆದ್ದು ಬಿಜೆಪಿಯ ಅಧಿಕಾರದ ಗದ್ದುಗೆಯನ್ನು ಗಟ್ಟಿಗೊಳಿಸಿದ 10 ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಸೂಚಿಸಿದ ಬೆನ್ನಲ್ಲೇ ಪಟ್ಟಿ ಫೈನಲ್ ಆಗಿದೆ. ಇದೀಗ ಅಂತಿಮ ಪಟ್ಟಿಯನ್ನು ಪರಿಗಣಿಸುವಂತೆ ರಾಜ್ಯಪಾಲ ವಜೂಭಾಯ್ ವಾಲಾ ಅವರಿಗೆ ಕಳುಹಿಸಿಕೊಡಲಾಗಿದೆ.
ಫೆಬ್ರವರಿ.06ರಂದು ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ 10 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ವಜೂಭಾಯ್ ವಾಲಾ ನೂತನ ಸಚಿವರಿಗೆ ಬೆಳಗ್ಗೆ.10.30ಕ್ಕೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

ಇನ್ನು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲರಿಗೆ ಕಳುಹಿಸಿ ಪಟ್ಟಿಯಲ್ಲಿ ಯಾವ ಯಾವ ಶಾಸಕರ ಹೆಸರಿದೆ ಎಂಬುದನ್ನು ಇಲ್ಲಿ ನೋಡಿ.
- ರಮೇಶ್ ಜಾರಕಿಹೊಳಿ, ಗೋಕಾಕ್ ಶಾಸಕ
- ಎಸ್.ಟಿ.ಸೋಮಶೇಖರ್, ಯಶವಂತಪುರ ಶಾಸಕ
- ಬೈರತಿ ಬಸವರಾಜ್, ಕೆಆರ್ ಪುರ ಶಾಸಕ
- ಕೆ. ಗೋಪಾಲಯ್ಯ, ಮಹಾಲಕ್ಷ್ಮಿ ಲೇಔಟ್ ಶಾಸಕ
- ನಾರಾಯಣಗೌಡ, ಕೆಆರ್ ಪೇಟೆ
- ಕೆ.ಸುಧಾಕರ್, ಚಿಕ್ಕಬಳ್ಳಾಪುರ,
- ಶಿವರಾಮ್ ಹೆಬ್ಬಾರ್, ಯಲ್ಲಾಪುರ ಶಾಸಕ
- ಆನಂದ್ ಸಿಂಗ್, ವಿಜನಗರ ಶಾಸಕ
- ಬಿ.ಸಿ.ಪಾಟೀಲ್, ಹಿರೇಕೆರೂರು ಶಾಸಕ
- ಶ್ರೀಮಂತ್ ಪಾಟೀಲ್ , ಕಾಗವಾಡ ಶಾಸಕ












Click it and Unblock the Notifications