ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಮಾನಾಥ ರೈ ಅವರೇ ಆರಾಮಾಗಿ ನಿದ್ದೆ ಮಾಡಿ'

|
Google Oneindia Kannada News

ಬೆಂಗಳೂರು, ಮಾ. 26 : ಕೆ.ಎಸ್.ಈಶ್ವರಪ್ಪ ಅವರು ಸಾಯುವ ತನಕ ಬಿಜೆಪಿಯಲ್ಲೇ ಇರುತ್ತೇನೆ ಎಂದು ಶಪಥ ಮಾಡಿದ್ದಾರೆ, ರಮಾನಾಥ ರೈ ಅವರೇ ನೀವು ಆರಾಮಾಗಿ ನಿದ್ದೆ ಮಾಡಿ ಎಂದು ಸದನದಲ್ಲಿ ವಿಪಕ್ಷಗಳು ಸಲಹೆ ನೀಡಿವೆ. ಸರ್ಕಾರ 'ಮದ್ಯ ಭಾಗ್ಯ'ವನ್ನೂ ಕರುಣಿಸಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರವನ್ನು ಲೇವಡಿ ಮಾಡಿದ್ದಾರೆ. ಇವು ಸದನದಲ್ಲಿ ಬುಧವಾರ ನಡೆದ ಸ್ವಾರಸ್ಯಕರ ಚರ್ಚೆಗಳು.

ಪರಿಷತ್ತಿನಲ್ಲಿ ಈಶ್ವರಪ್ಪ ಶಪಥ : ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಬಜೆಟ್‌ ಮೇಲಿನ ಭಾಷಣದ ವೇಳೆ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಸಮುದಾಯಗಳ ಕುರಿತು ಉಲ್ಲೇಖಿಸಿದರು. ಬಸವಣ್ಣ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರ ಬಗ್ಗೆಯೂ ಮಾತನಾಡಿದರು.

Assembly Session

ಇದನ್ನು ಗಮನಿಸಿದ ಸಚಿವ ಎಚ್.ಸಿ. ಮಹದೇವಪ್ಪ ಅವರು 'ನೀವು ಇವರೆಲ್ಲರ ಹೆಸರನ್ನು ಹೇಳುತ್ತಿರುವುದು ನೋಡಿದರೆ ನಮ್ಮ ಸಿದ್ಧಾಂತಗಳ ಪ್ರಭಾವ ನಿಮ್ಮ ಮೇಲೆ ಆಗಿರಬಹುದು' ಎಂದು ಕಿಚಾಯಿಸಿದರು.[ಊದೋರು ಶಂಖ ಊದ್ರಿ, ಶಿವನ ಪೂಜೆ ಆಗಲಿ ಬಿಡಲಿ]

ಇದರಿಂದ ಕೆರಳಿದ ಈಶ್ವರಪ್ಪ ಅವರು 'ನಾನು ಬಸವಣ್ಣ, ಶಂಕರಾಚಾರ್ಯ, ಅಂಬೇಡ್ಕರ್ ಅವರ ಆದರ್ಶಗಳನ್ನು ಆರ್‌ಎಸ್‌ಎಸ್‌ನಿಂದ ಪಡೆದಿದ್ದೇನೆ. ಈ ಆದರ್ಶಗಳು ನನ್ನ ರಕ್ತದಲ್ಲಿ ಸೇರಿವೆ. ನಾನೂ ಸಾಯುವ ತನಕ ಬಿಜೆಪಿಯಲ್ಲೇ ಇರುತ್ತೇನೆ' ಎಂದು ಶಪಥ ಮಾಡಿದರು. [ಬುಧವಾರದ ಕಲಾಪದ ಮುಖ್ಯಾಂಶಗಳು]

ಸಚಿವರೇ ನೀವು ಆರಾಮಾಗಿ ನಿದ್ದೆ ಮಾಡಿ : ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಕೆ.ಎಸ್‌.ಈಶ್ವರಪ್ಪ ಮಾತು ಆರಂಭಿಸುತ್ತಿದ್ದಂತೆ ಅರಣ್ಯ ಸಚಿವ ರಮಾನಾಥ ರೈ ಪ್ರತಿಕ್ರಿಯೆ ನೀಡಲು ಪ್ರಯತ್ನಿಸಿದರು. ಎರಡು ಮೂರು ಬಾರಿ ಪ್ರತಿಕ್ರಿಯೆ ನೀಡಲು ಎದ್ದುನಿಂತರು ಈಶ್ವರಪ್ಪ ಮಾತು ನಿಲ್ಲಿಸಲಿಲ್ಲ. ಈ ವೇಳೆ ಮಧ್ಯೆ ಪ್ರವೇಶಿಸಿದ ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿ, 'ರಮಾನಾಥ ರೈ ಅವರೇ ನೀವು ಆರಾಮಾಗಿ ನಿದ್ದೆ ಮಾಡಿ. ಪ್ರತಿಪಕ್ಷ ನಾಯಕರಿಗೆ ಅಡ್ಡಿಪಡಿಸಬೇಡಿ' ಎಂದು ಛೇಡಿಸಿದರು.

ರಾಜ್ಯದ ಜನರಿಗೆ 'ಮದ್ಯ ಭಾಗ್ಯ' ನೀಡಿ : 'ಕರ್ನಾಟಕದ ಜನರಿಗೆ ಹಲವು ಭಾಗ್ಯಗಳನ್ನು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡ ವರ್ಗದ ಜನರಿಗೆ ಅನುಕೂಲವಾಗುವಂತೆ 'ಮದ್ಯ ಭಾಗ್ಯ'ವನ್ನೂ ಕರುಣಿಸಲಿ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಇತರೆ ಮೂಲಗಳಿಂದ ತೆರಿಗೆ ಸಂಗ್ರಹ ಮಾಡಲು ವಿಫಲವಾಗಿರುವ ಸರ್ಕಾರ ಆ ಕೊರತೆಯನ್ನು ಭರಿಸುವ ಸಲುವಾಗಿ ಅಬಕಾರಿ ಇಲಾಖೆಯ ಅಡಿಯಲ್ಲಿ ಬರುವ ಮದ್ಯದ ಮೇಲೆ ವಿಪರೀತ ತೆರಿಗೆ ವಿಧಿಸುತ್ತಿದೆ ಎಂದು ಕುಮಾರಸ್ವಾಮು ದೂರಿದ್ದಾರೆ.

English summary
Karnataka Budget session 2015 : Humorous decisions on Wednesday, March 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X