Karnataka Budget 2022 PDF: ಕರ್ನಾಟಕ ಬಜೆಟ್ ಪಿಡಿಎಫ್ ಡೌನ್‌ಲೋಡ್ ಮಾಡುವುದು ಹೇಗೆ?
ಬೆಂಗಳೂರು, ಮಾರ್ಚ್ 04: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ನೇ ಸಾಲಿನ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಮಧ್ಯಾಹ್ನ 12.30ರಿಂದ 2.30ರವರೆಗೆ ಎರಡು ಗಂಟೆಗಳ ಕಾಲ ಬಜೆಟ್ ಮಂಡನೆ ಮಾಡಲಾಗಿದೆ. ವಿವಿಧ ಇಲಾಖೆಗಳಿಗೆ ಸಾಕಷ್ಟು ಯೋಜನೆಗಳನ್ನು ಘೋಷಿಸಿದ್ದಾರೆ.
ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳ ಆಧಾರದಲ್ಲಿ ಬಜೆಟ್ ಮಂಡನೆ ಮಾಡಲಾಗಿದೆ. ಸಮಗ್ರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ದುರ್ಬಲ ವರ್ಗದ ರಕ್ಷಣೆ ಮತ್ತು ಏಳಿಗೆ , ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಸಬಲೀಕರಣ ಕಾರ್ಯಕ್ರಮ, ಹಿಂದುಳಿದ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ ಅಭಿವೃದ್ಧಿಗೆ ಸಂಘಟಿತ ಕಾರ್ಯಕ್ರಮ, ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯ - ಪಾಲುದಾರಿಕೆಯೊಂದಿಗೆ ಅಭಿವೃದ್ಧಿ ಹಾಗೂ ನವಭಾರತಕ್ಕಾಗಿ ನವ ಕರ್ನಾಟಕ ಹೊಸ ಚಿಂತನೆ, ಹೊಸ ಚೈತನ್ಯದ ಜತ ಹೊಸ ಮುನ್ನೋಟ ಎಂಬ ನೆಲೆಯಲ್ಲಿ ಪಂಚಸೂತ್ರಗಳ ಆಧಾರದಲ್ಲಿ ಬಜೆಟ್ ಇದೆ.ಇನ್ನು ಯಾವ ಇಲಾಖೆಗೆ ಎಷ್ಟು ಎನ್ನುವ ಮಾಹಿತಿ ಇಲ್ಲಿದೆ.
ಯಾವ ಇಲಾಖೆಗೆ ಎಷ್ಟು ಅನುದಾನ?
* ಕಂದಾಯ ಇಲಾಖೆಗೆ 16,388 ಕೋಟಿ ರೂಪಾಯಿ ಅನುದಾನ
* ಆಹಾರ ಇಲಾಖೆಗೆ 2,288 ಕೋಟಿ ರೂಪಾಯಿ ಅನುದಾನ,
* ವಸತಿ ಇಲಾಖೆಗೆ 3,594 ಕೋಟಿ ರೂಪಾಯಿ ಅನುದಾನ
* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 4,713 ಕೋಟಿ ಅನುದಾನ,
* ಸಮಾಜ ಕಲ್ಯಾಣ ಇಲಾಖೆಗೆ 9,389 ಕೋಟಿ ಅನುದಾನ
* ಲೋಕೋಪಯೋಗಿ ಇಲಾಖೆಗೆ 10,447 ಕೋಟಿ ರೂ.
* ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 11,222 ಕೋಟಿ ರೂ.
* ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 8,457 ಕೋಟಿ ರೂ. ಅನುದಾನ
* ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಗೆ 13,982 ಕೋಟಿ ರೂ.
* ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಗೆ 17,325 ಕೋಟಿ ರೂ.
* ಇಂಧನ ಇಲಾಖೆಗೆ 12,655 ಕೋಟಿ ರೂಪಾಯಿ ಅನುದಾನ
* ಜಲ ಸಂಪನ್ಮೂಲ ಇಲಾಖೆಗೆ 20,601 ಕೋಟಿ ಅನುದಾನ
* ಶಿಕ್ಷಣ ಇಲಾಖೆಗೆ 31,980 ಕೋಟಿ ರೂಪಾಯಿ ಅನುದಾನ.
* ನಗರಾಭಿವೃದ್ಧಿ ಇಲಾಖೆಗೆ 16,076 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ.

ಬಜೆಟ್ ಪ್ರತಿ ಪಡೆಯುವುದು ಹೇಗೆ?
ಆರ್ಥಿಕ ಇಲಾಖೆಯ ವೆಬ್‌ಸೈಟ್( Karnataka Finance) ಎಂದು ಟೈಪ್ ಮಾಡಿ ಅದರಲ್ಲಿ ಬಜೆಟ್ ಡಾಕ್ಯೂಮೆಂಟ್ ಕ್ಲಿಕ್ ಮಾಡಿದರೆ ಈ ವರ್ಷ ಹಾಗೂ ಹಳೆಯ ಬಜೆಟ್ ಪ್ರತಿಗಳು ಲಭ್ಯವಿರಲಿವೆ.
ಇಲ್ಲವಾದಲ್ಲಿ ನೇರವಾಗಿ ಪಿಡಿಎಫ್ ಲಿಂಕ್ ಕ್ಲಿಕ್ ಮಾಡುವ ಮೂಲಕವೂ ಬಜೆಟ್ ಪ್ರತಿ ಪಡೆಯಬಹುದು.
ಇನ್ನೂ ಬಿಜೆಪಿ ಪೇಜ್, ಮುಖ್ಯಮಂತ್ರಿ ಟ್ವಿಟ್ಟರ್ ಖಾತೆಯಲ್ಲಿ ಅವರು ಅಟ್ಯಾಚ್ ಮಾಡಿರುವ ಪ್ರತಿಗಳು, ವಿಡಿಯೋಗಳ ಮೂಲಕವೂ ಬಜೆಟ್ ಪ್ರತಿ ಓದಬಹುದು.












Click it and Unblock the Notifications