ಕರ್ನಾಟಕ ಬಜೆಟ್ 2018 : ಯಾರು, ಏನು ಹೇಳಿದರು?

ಬೆಂಗಳೂರು, ಫೆಬ್ರವರಿ 16 : ಹಣಕಾಸು ಸಚಿವ, ಮುಖ್ಯಮಂತ್ರಿ ಸಿದ್ದರಾಮಯ್ಯ 2018-19ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಸುಮಾರು 4 ಗಂಟೆಗಳ ಕಾಲದ ಸುಧೀರ್ಘ ಭಾಷಣದಲ್ಲಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

2018ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದ ಸಿದ್ದರಾಮಯ್ಯ ಅವರು ಹಲವಾರು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದರು. ಎಲ್ಲಾ ವರ್ಗದ ಜನರನ್ನು ಓಲೈಕೆ ಮಾಡು ಬಜೆಟ್ ಮಂಡಿಸಿದರು.

'ರಾಜ್ಯದ ಬೊಕ್ಕಸದಲ್ಲಿರುವುದು ಜನರ ಬೆವರಿನ ದುಡ್ಡು. ನಾನು ಅದನ್ನು ನಿರ್ವಹಣೆ ಮಾಡುವ ಟ್ರಸ್ಟಿ ಮಾತ್ರ. ಪ್ರತಿ ಪೈಸೆಗೆ ಲೆಕ್ಕ ಕೇಳುವ ಹಕ್ಕು ಜನರಿಗೆ ಇದೆ. ಅದನ್ನು ನಾನು ಗೌರವಿಸುತ್ತೇನೆ' ಎಂದು ಸಿದ್ದರಾಮಯ್ಯ ಬಜೆಟ್ ಭಾಷಣ ಆರಂಭಿಸುವಾಗ ಹೇಳಿದರು.

ಸಿದ್ದರಾಮಯ್ಯ ಮಂಡನೆ ಮಾಡಿದ ಬಜೆಟ್‌ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಪ್ರತಿಪಕ್ಷಗಳು ಚುನಾವಣೆ ಹತ್ತಿರವಾಗುತ್ತಿದೆ. ಈ ಬಜೆಟ್‌ಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂದು ಟೀಕಿಸಿವೆ. ಬಜೆಟ್ ಬಗ್ಗೆ ಯಾರು?, ಏನು ಹೇಳಿದರು? ಚಿತ್ರಗಳಲ್ಲಿ ನೋಡಿ...

ಇಂದಿನ ಬಜೆಟ್‌ಗೆ ಮೂರು ಕಾಸಿನ ಕಿಮ್ಮತ್ತಿಲ್ಲ

ಇಂದಿನ ಬಜೆಟ್‌ಗೆ ಮೂರು ಕಾಸಿನ ಕಿಮ್ಮತ್ತಿಲ್ಲ

'ಇಂದಿನ ಬಜೆಟ್‌ಗೆ ಮೂರು ಕಾಸಿನ ಕಿಮ್ಮತ್ತಿಲ್ಲ. ಇದರಲ್ಲಿರುವ ಯಾವ ಯೋಜನೆಗಳು ಕಾರ್ಯರೂಪಕ್ಕೆ ಬರುವುದಿಲ್ಲ' ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. 'ಮುಂದೆ ಬರುವ ಸರ್ಕಾರ ಬಜೆಟ್ ಬದಲಾವಣೆ ಮಾಡಲಿದೆ. ಮುಂದಿನ ಬಜೆಟ್‌ ಅನ್ನು ನಾನೇ ಮಂಡನೆಮಾಡುತ್ತೇನೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರ ಮೂಗಿಗೆ ತುಪ್ಪ ಸವರಿದ್ದಾರೆ

ಸರ್ಕಾರಿ ನೌಕರರ ಮೂಗಿಗೆ ತುಪ್ಪ ಸವರಿದ್ದಾರೆ

'ಇದೊಂದು ನಿರಾಶಾದಾಯಕ, ರೈತ ವಿರೋಧಿ ಬಜೆಟ್' ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದರು. 'ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಬೇಡಿಕೆ ಇತ್ತು. ಆದರೆ, ಸಿದ್ದರಾಮಯ್ಯ ನೌಕರರ ಮೂಗಿಗೆ ತುಪ್ಪ ಸವರಿದ್ದಾರೆ' ಎಂದು ಶೆಟ್ಟರ್ ದೂರಿದರು.

ಸಿದ್ದರಾಮಯ್ಯ ಘೋಷಣೆ ವೀರ

ಸಿದ್ದರಾಮಯ್ಯ ಘೋಷಣೆ ವೀರ

'ಇದು ಚುನಾವಣೆ ಬಜೆಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ವೀರ.
ಬಜೆಟ್ ಮಂಡನೆ ಮೂಲಕ ಜನರ ಕಣ್ಣಿಗೆ ಮಣ್ಣೆರಚಲು ಹೊರಟಿದ್ದಾರೆ.
ಮುಂದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ.
ಯಡಿಯೂರಪ್ಪ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ' ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದರು.

ಈ ಬಜೆಟ್ ಹೆಬ್ಬಾವು ಆಗಲಿಲ್ಲ, ಕೇರೆಹಾವು ಆಗಲಿಲ್ಲ

ಈ ಬಜೆಟ್ ಹೆಬ್ಬಾವು ಆಗಲಿಲ್ಲ, ಕೇರೆಹಾವು ಆಗಲಿಲ್ಲ

'ಚುನಾವಣೆ ಇರುವುದರಿಂದ ಹೆಬ್ಬಾವು ಅಥವ ಕೇರೆ ಹಾವನ್ನಾದರೂ ತೆಗಿತಾರೆ ಎಂದು ಅಂದುಕೊಂಡಿದ್ದೆವು. ಆದರೆ, ಜನಪರವಲ್ಲದ, ಜನಪ್ರಿಯವೂ ಅಲ್ಲದ ಬಜೆಟ್ ಮಂಡನೆ ಮಾಡಿದ್ದಾರೆ' ಎಂದು ಮಾಜಿ ಸಚಿವ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.

ಅವೈಜ್ಞಾನಿಕ ಬಜೆಟ್

ಅವೈಜ್ಞಾನಿಕ ಬಜೆಟ್

'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಅವೈಜ್ಞಾನಿಕವಾದದ್ದು. ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿ ಬಜೆಟ್‌ನಲ್ಲಿ ಕಾಣಿಸುತ್ತಿದೆ' ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಶುಗರ್ ಲೆಸ್ ಬಜೆಟ್ ಮಂಡಿಸಿದ್ದಾರೆ

ಶುಗರ್ ಲೆಸ್ ಬಜೆಟ್ ಮಂಡಿಸಿದ್ದಾರೆ

'ಸಿದ್ದರಾಮಯ್ಯ ಶುಗರ್ ಲೆಸ್ ಬಜೆಟ್ ಮಂಡಿಸಿದ್ದಾರೆ. ಜನ ಸಿಹಿಯನ್ನು ನಿರೀಕ್ಷೆ ಮಾಡಿದ್ದರು. ಆದರೆ, ಸಿದ್ದರಾಮಯ್ಯ ನಿರೀಕ್ಷೆ ಹುಸಿ ಮಾಡಿದ್ದಾರೆ. ಅಭಿವೃದ್ಧಿ ಬಜೆಟ್ ಎಂದು ಹೇಳುವುದಕ್ಕೆ ಏನೂ ಇಲ್ಲ' ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+