ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ, ಸಂಸ್ಕೃತಿ ರಕ್ಷಣೆಗೆ ಸಿದ್ದರಾಮಯ್ಯ ಅಭಯ

|
Google Oneindia Kannada News

ಬೆಂಗಳೂರು, ಮಾ. 14: ಬಜೆಟ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಅಭಿವೃದ್ಧಿಗೆ ಆದ್ಯತೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾರಂಪರಿಕ ತಾಣಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿದ್ದಾರೆ. ಮೈಸೂರು, ಶ್ರೀರಂಗಪಟ್ಟಣ, ಬೇಲೂರು, ಹಳೇಬೀಡು ಸೇರಿದಂತೆ ಇನ್ನಿತರೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗಳಿಗೆ 20 ರೂ, ಮೀಸಲಿಟ್ಟಿದ್ದಾರೆ.

ಒಟ್ಟಾರೆ ಕನ್ನಡ ಮತ್ತು ಸಂಸ್ಕೃತಿ ಬೆಳವಣಿಗೆಗೆ 2015-16ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ 303 ಕೋಟಿ ರೂಪಾಯಿ ಗಳನ್ನು ತೆಗೆದಿರಿಸಲಾಗಿದೆ.[ಕರ್ನಾಟಕ ಬಜೆಟ್ 2015-16 : ಮುಖ್ಯಾಂಶಗಳು]

kannada

ಕನ್ನಡ ಮತ್ತಿ ಸಂಸ್ಕೃತಿ ರಕ್ಷಣೆಗೆ ಸಿದ್ದರಾಮಯ್ಯ ಅಭಯ
* ಕನ್ನಡದ ಆದಿಕವಿ ಪಂಪನ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆಗೆ 1 ಕೋಟಿ ರೂ. ಮೀಸಲು
*ಹಾವೇರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವಸ್ತು ಸಂಗ್ರಹಾಲಯ ಸ್ಥಾಪನೆ'ಗೆ 2.5 ಕೋಟಿ.ರೂ.
* ಕನ್ನಡದ ಪ್ರಥಮ ಅಂತರ್ಜಾಲ ವಿಶ್ವಕೋಶ ಕಣಜ' ಅಭಿವೃದ್ಧಿಗೆ ಸಮಿತಿ ಸ್ಥಾಪನೆ 2 ಕೋಟಿ ರೂ. ಅನುದಾನ
* ಕಡಲ ತೀರದ ಭಾರ್ಗವ ಡಾ. ಶಿವರಾಮ ಕಾರಂತ ಸ್ಮಾರಕ ನಿರ್ಮಾಣ.
* ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ಮಡಿಕೇರಿಯ ನಿವಾಸವನ್ನು ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿ.
* ಕನ್ನಡದ ಮೊದಲ ರಾಷ್ಟ್ರಕವಿ ಡಾ. ಮಂಜೇಶ್ವರ ಗೋವಿಂದ ಪೈ ಅವರ ನಿವಾಸದ ಪುನರುಜ್ಜೀವನ.
* ಕವಿ ಶೈಲ ಮಾದರಿಯಲ್ಲಿ ಜಿ.ಎಸ್. ಶಿವರುದ್ರಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ. ಬೇಂದ್ರೆ ಇವರ ಜನ್ಮ ಸ್ಥಳ/ಮನೆಗಳ ಅಭಿವೃದ್ಧಿ.
• ಕೊಂಕಣಿ ಅಧ್ಯಯನ ಪೀಠ ಸ್ಥಾಪನೆ - 2 ಕೋಟಿ ರೂ.ಗಳ ಶಾಶ್ವತ ನಿಧಿ [ರಾಜ್ಯ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಕೊಡುಗೆ]
* ಶ್ರವಣಬೆಳಗೊಳದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಜೈನ ಶಾಸನಗಳ ಅಧ್ಯಯನ ಪೀಠ ಸ್ಥಾಪನೆ - 1 ಕೋಟಿ ರೂ.
* ಅಂತರ್ಜಾಲದ ಮೂಲಕ ಕನ್ನಡ ಕಲಿಸುವ ವರ್ಚುವಲ್ ತರಗತಿಗಳ ಮತ್ತು ಬೆಂಗಳೂರಿನಲ್ಲಿ ಕನ್ನಡ ಕಲಿಕೆ ಕೇಂದ್ರಗಳ ಸ್ಥಾಪನೆ - 1 ಕೋಟಿ ರೂ.
* ಹವ್ಯಾಸಿ ರಂಗತಂಡಗಳ ಪುನಶ್ಚೇತನ.
* ಚರ್ಮವಾದ್ಯ ಕಲಾವಿದರ ರಾಜ್ಯಮಟ್ಟದ ಸಮ್ಮೇಳನ, ಕಾರ್ಯಾಗಾರಗಳ ಆಯೋಜನೆ.
* ವಿಭಾಗೀಯ ರಂಗಾಯಣಗಳ ಕಾರ್ಯನಿರ್ವಹಣೆಗೆ ಮತ್ತು ಹೊಸ ನಾಟಕಗಳ ಸಿದ್ಧತೆಗಾಗಿ 4 ಕೋಟಿ ರೂ.ಗಳ ವಿಶೇಷ ಅನುದಾನ.
* ಬೆಂಗಳೂರಿನಲ್ಲಿ ಕನ್ನಡ ಶಾಸ್ತ್ರೀಯ ಭಾಷೆ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆ - 1.2 ಕೋಟಿ ರೂ.
* ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳನ್ನೊಳಗೊಂಡ ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರ ರಚನೆ - ಪ್ರಾಥಮಿಕವಾಗಿ 1 ಕೋಟಿ ರೂ.
* ಘೋಷಿತ 772 ಸಂರಕ್ಷಿತ ಸ್ಮಾರಕಗಳ ಪಹರೆ/ಕಾವಲು, ಜಿ.ಐ.ಎಸ್. ಮೂಲಕ ಸರ್ವೆ ಮತ್ತು 3ಡಿ ಮ್ಯಾಪಿಂಗ್, ಸಂರಕ್ಷಣೆ ಹಾಗೂ ಅರಕ್ಷಿತ ಸ್ಮಾರಕಗಳ ಇನ್‍ವೆಂಟರಿ ತಯಾರಿಕೆಗಾಗಿ 5 ಕೋಟಿ ರೂ.
* ಮಳಖೇಡ ಕೋಟೆಯ ಸಂರಕ್ಷಣೆ ಹಾಗೂ ಸಮಗ್ರ ಅಭಿವೃದ್ಧಿ - 5 ಕೋಟಿ ರೂ.
* ವಿಶ್ವ ಪರಂಪರೆ ತಾತ್ಕಾಲಿಕ ಪಟ್ಟಿಯಲ್ಲಿರುವ ರಾಜ್ಯದ 3 ಸ್ಮಾರಕ ಸಮೂಹ ತಾಣಗಳ ಡೋಸಿಯರ್ ಮತ್ತು ವರದಿ ತಯಾರಿಕೆ - 3 ಕೋಟಿ ರೂ.
* ದೇವರದಾಸಿಮಯ್ಯನವರಿಗೆ ಸಂಬಂಧಿಸಿದ ಸ್ಮಾರಕಗಳು, ಪುಷ್ಕರಣಿಗಳ ಸಂರಕ್ಷಣೆಗೆ ಕಾರ್ಯ ಯೋಜನೆ - 2 ಕೋಟಿ ರೂ.
* ಕಿತ್ತೂರು ರಾಣಿ ಚನ್ನಮ್ಮ ಸಮಾಧಿ ಸ್ಥಳದ ಸಮಗ್ರ ಅಭಿವೃದ್ಧಿ- 1 ಕೋಟಿ ರೂ.
* ಶಿವಶರಣ ಬಸವಣ್ಣನವರ ಸಮಕಾಲೀನ ಹರಳಯ್ಯನವರ ಗದ್ದಿಗೆ ಅಭಿವೃದ್ಧಿ ಮತ್ತು ಸಂರಕ್ಷಣೆ - 50 ಲಕ್ಷ ರೂ.
* ಕನ್ನಡ ಸಾಹಿತ್ಯ ಪರಿಷತ್ 100 ವರ್ಷ ಪೂರ್ಣ, 2015-16 ಕನ್ನಡ ವರ್ಷಾಚರಣೆ - 10 ಕೋಟಿ ರೂ.ಗಳು.
* ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಸಿದ್ಧ ಚಿತ್ರ ಕಲಾವಿದ ಪಿ.ಆರ್.ತಿಪ್ಪೇಸ್ವಾಮಿರವರ ಅಧ್ಯಯನ ಪೀಠ ಸ್ಥಾಪನೆ - 1 ಕೋಟಿ ರೂ.ಗಳು.
* ಚಿತ್ರದುರ್ಗದ ಶ್ರೀ ಮುರುಘಮಠದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ 325 ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆ- 10 ಕೋಟಿ ರೂ.ಗಳು.
* ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ 20ಕೋಟಿ ರೂ. ನಿಗದಿ.

English summary
Chief Minister Siddaramaiah, presented the State budget for 2015-16. Kannada and culture department also got most grant in the State Bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X