ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಏಕದಿನದ ವಿದ್ಯುತ್ ಬಳಕೆಯಲ್ಲಿ ಜ.13ರಂದು ದಾಖಲೆ, ಕಾರಣ ಏನು?, ಪೂರ್ಣ ವಿವಿರ ಇಲ್ಲಿದೆ

|
Google Oneindia Kannada News

ಬೆಂಗಳೂರು ಜನವರಿ 17: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿದೆ. ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಉಚಿತ ವಿದ್ಯುತ್ ಭರವಸೆ ನೀಡುತ್ತಿವೆ. ಇದರ ಮಧ್ಯದಲ್ಲಿ ಕರ್ನಾಟಕವು ಜನವರಿ 13ರಂದು ಗರಿಷ್ಠ ಮಟ್ಟದಲ್ಲಿ ವಿದ್ಯುತ್ ಬಳಕೆಗೆ ಸಾಕ್ಷಿಯಾಗಿದೆ. ಈ ಮೂಲಕ ತನ್ನದೇ ಸರ್ವಕಾಲಿಕ ಹಿಂದಿನ ದಾಖಲೆ ಮುರಿದಿದೆ.

ರಾಜ್ಯದಲ್ಲಿ ಕಳೆದ 2022ರ ಮಾರ್ಚ್ ನಲ್ಲಿ 14,818 ಮೆಘಾವ್ಯಾಟ್ (Mw) ವಿದ್ಯುತ್ ಬಳಕೆಯ ಪೀಕ್ ಲೋಡ್ ಸಾಧಿಸಿತ್ತು. ಇದೇ ಸಾರ್ವಜಕಾಲಿಕ ದಾಖಲೆಯಾಗಿತ್ತು. ಆದರೆ ಅದನ್ನು ಇದೇ ವರ್ಷದ ಆರಂಭಿಕ ಜನವರಿ 15 ದಿನದಲ್ಲೇ ಆ ದಾಖಲೆ ಮೀರಿ ಹೊಸ ದಾಖಲೆ ಸೃಷ್ಟಿಯಾಗಿದೆ. 14,818 ಮೆಘಾವ್ಯಾಟ್ ಗಿಂತಲೂ ಹೆಚ್ಚು ವಿದ್ಯುತ್ ಬಳಕೆ ಆಗಿದೆ. ಮುಂಬರಲಿರುವ ಬೇಸಿಗೆ ವೇಳೆ ಬೇಡಿಕೆ ಇನ್ನಷ್ಟು 15,500 ಮೆಗಾವ್ಯಾಟ್ ಹೆಚ್ಚಾಗುವ ನಿರೀಕ್ಷೆ ಇದೆ. ಕರ್ನಾಟಕ ಇಂಧನ ಇಲಾಖೆ ಅಗತ್ಯಷ್ಟು ಇಂಧನ ಪೂರೈಕೆ ಸಿದ್ಧವಿದೆ ಎಂದು ಇಂಧನ ಇಲಾಖೆ ತಿಳಿಸಿದೆ.

ಕರ್ನಾಟಕವು ಕಳೆದ (2022) ಮಾರ್ಚ್‌ ಅಂದರೆ ಬೇಸಿಗೆ ಅವಧಿಯಲ್ಲಿ ವಿದ್ಯುತ್ ಬಳಕೆಯ ಗರಿಷ್ಠ ಮಟ್ಟ (ಪೀಕ್) ತಲುಪಿತ್ತು. ಅಂತಹ ಗರಿಷ್ಠ ಮಟ್ಟದ ಬಳಕೆ ಜನವರಿಯಲ್ಲಿ ಆಗಿದೆ. ಈಗಿನ್ನು ಚಳಿಗಾಲ. ಇದೆಲ್ಲ ನೋಡಿದರೆ ಮುಂದಿನ ಬೇಸಿಗೆಗೆ ಜನವರಿಯ ದಾಖಲೆ ಮುರಿಯುವ ಸಾಧ್ಯತೆ ಇದೆ. ಅಷ್ಟರ ಮಟ್ಟಿಗೆ ವಿದ್ಯುತ್ ಬಳಕೆಯಾಗಲಿದೆ. ಮುಂಬರಲಿರುವ ಬೇಸಿಗೆಯಲ್ಲಿ ಕರ್ನಾಟಕದಲ್ಲಿ 15,300 ರಿಂದ 15,500 ಮೆಘಾವ್ಯಾಟ್ ವರೆಗೆ ಬೇಡಿಕೆ ಬರಬಹುದು ಎಂದು ಊಸಿಲಾಗಿದೆ.

Karnataka broke all-time record last year with highest electricity consumption 235 million units

ಕಳೆದ ಜನವರಿ 2022 ರಲ್ಲಿ ಕರ್ನಾಟಕವು ನಿತ್ಯ 190-210 ಮಿಲಿಯನ್ ಯುನಿಟ್‌ಗಳನ್ನು ಬಳಸುತ್ತಿತ್ತು. ಇದೀಗ ಜನವರಿ 13ರಂದು ಒಂದೇ ದಿನ ಹಳೆಯ ದಾಖಲೆಗಿಂತಲೂ ಹೆಚ್ಚು 235 ಮಿಲಿಯನ್ ಯೂನಿಟ್‌ಗಳ ವಿದ್ಯುತ್ ಖರ್ಚಾಗಿದೆ ಎಂದು ರಾಜ್ಯ ಮೇಲ್ವಿಚಾರಣಾ ನಿಯಂತ್ರಣ ಮತ್ತು ಡೇಟಾ ಸ್ವಾಧೀನ (SCADA) ನೆಟ್‌ವರ್ಕ್‌ ತಿಳಿಸಿದೆ.

ವಿದ್ಯುತ್ ಬಳಕೆ ಸರಾಸರಿ ಶೇ. 10ರಷ್ಟು ಏರಿಕೆ

ನೀರಾವರಿ ಪಂಪ್‌ಸೆಟ್‌ ಬಳಕೆ, ಉದ್ಯೋಗಿಗಳು ಕಚೇರಿಯಿಂದಲೇ ಕೆಲಸ ಮಾಡುವ ಪ್ರಮಾಣ ಹೆಚ್ಚಾಗಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ವಿದ್ಯತ್ ಬಳಕೆಯಲ್ಲಿ ನಾವು ಪೀಕ್ ತಲುಪಿದ್ದೇವೆ. ರಾಜ್ಯದಲ್ಲಿ ಅಂತರ್ಜಲ ಮಟ್ಟವು ಉತ್ತಮವಾಗಿದೆ. ಹಲವಾರು ಕಂಪನಿಗಳು ವರ್ಕ್‌ ಫ್ರಂ ಹೋಮ್‌ನಿಂದ ಕಚೇರಿಗೆ ಮರಳಿವೆ. ಉದ್ಯಮಗಳು ಉತ್ಪಾದನಾ ಚಟುವಟಿಕೆಗಳ ಪುನಾರಂಭವಾಗಿದೆ. ಹೀಗಾಗಿ ಈ ವರ್ಷ ವಿದ್ಯುತ್ ಬಳಕೆ ರಾಜ್ಯದಲ್ಲಿ ಸರಾಸರಿ ಶೇ.10ರಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Karnataka broke all-time record last year with highest electricity consumption 235 million units

ಇಂಧನ ಸಚಿವ ವಿ.ಸುನೀಲ್ ಕುಮಾರ್ ಇದಕ್ಕೆ ಪ್ರತಿಕ್ರಿಯಿಸಿದ್ದು, ನವೆಂಬರ್‌ನಿಂದ ಇಂಧನ ಬಳಕೆಯಲ್ಲಿ ಏರಿಕೆ ಆಗುತ್ತಾ ಬಂದಿದೆ. ಡಿಸೆಂಬರ್‌ನ ಕೆಲವು ದಿನಗಳಲ್ಲಿ ವಿದ್ಯುತ್ ಬಳಕೆ ಕುಸಿತ ಕಂಡರೂ ಸಹ ಮತ್ತೆ ಹೆಚ್ಚಾಗುತ್ತಾ ಹೋಯಿತು. ಸಾಮಾನ್ಯವಾಗಿ ಬೇಸಿಗೆಯಲ್ಲಿ ವಿದ್ಯುತ್ ಗೆ ಹೆಚ್ಚು ಬೇಡಿಕೆ ಇರುತ್ತದೆ. ಈ ವರ್ಷ ಬೇಸಿಗೆ ಬೇಡಿಕೆಗಿಂತಲೂ ಹೆಚ್ಚು ಪೂರೈಸಲಾಗುವುದು. ಯಾವುದೇ ವಿದ್ಯುತ್ ಕಡಿತ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

English summary
Karnataka broke all-time record of last year with highest electricity consumption of 235 million units in one day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X