Industry: ಕರ್ನಾಟಕ ಸಚಿವ ಸಂಪುಟ ಅನುಮೋದನೆ ನೀಡಿದ ಯೋಜನೆಗಳು, ಅನುದಾನದ ವಿವರ
ಬೆಂಗಳೂರು, ಫೆಬ್ರವರಿ 21: ರಾಜ್ಯದಲ್ಲಿ ಈಗಾಗಲೇ ಕೈಗಾರಿಕಾ ನೀತಿ 2025-30 ಜಾರಿಗೊಳಿಸಲಾಗಿದೆ. ಇದಕ್ಕೆ ಅನುಮೋದನೆ ನೀಡುವ ಜೊತೆಗೆ ಸಾಕಷ್ಟು ಯೋಜನೆಗಳಿಗೆ ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಐಐಐಟಿ-ಬೆಂಗಳೂರಿನಲ್ಲಿ ಮೂಲಸೌಕರ್ಯ ವಿಸ್ತರಣೆ ಅನುದಾನ ಪೂರೈಕೆ ಒಳಗೊಂಡಂತೆ ವಿವಿಧ ಮೂಲ ಸೌಕರ್ಯ ಯೋಜನೆಗಳನ್ನು ಜಾರಿಗೆ ತರಲು ಅನುಮೋದನೆ ನೀಡಲಾಯಿತು.
ಒಂದು ವಾರದ ಹಿಂದಷ್ಟೇ ಇನ್ವೆಸ್ಟ್ ಕರ್ನಾಟಕ 2025 ಪೂರ್ಣಗೊಂಡಿದೆ. ಐಐಐಟಿ-ಬೆಂಗಳೂರು ಮೂಲ ಸೌಕರ್ಯ ಒದಗಿಸುವ ಒಟ್ಟು 817 ಕೋಟಿ ರೂ.ಯೋಜನೆಗೆ ಕರ್ನಾಟಕವು ಶೇ. 35 ರಷ್ಟು ಅಂದರೆ 285.95 ಕೋಟಿ ರೂ. ನೀಡುವುದಾಗಿ ಒಪ್ಪಿದೆ. ಇದನ್ನು ಮುಂದಿನ ತಿಂಗಳು ಮಂಡನೆ ಆಗಲಿರುವ ಕರ್ನಾಟಕ ಬಜೆಟ್ 2024-25ನಲ್ಲಿ ಘೋಷಿಸಲಿದೆ. ಬಾಕಿ ಮೊತ್ತವನ್ನು ಏಳು ವರ್ಷಗಳಲ್ಲಿ ನೀಡಲು ಸರ್ಕಾರ, ಸಂಪುಟವು ತೀರ್ಮಾನಿಸಿದೆ. ಬಾಕಿ ಹಣ ವಿವಿಧ ಮೂಲಗಳಿಂದ ಐಐಐಟಿ ಬೆಂಗಳೂರು ಪಡೆದುಕೊಳ್ಳಲು ಮುಂದಾಗಿದೆ ಎಂದು TNIE ವರದಿ ಮಾಡಿದೆ.

ಕರ್ನಾಟಕ ಸರ್ಕಾರ ಮೈಸೂರು, ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿ ಸ್ಟಾರ್ಟ್‌ಅಪ್ ಉತ್ತೇಜನಕ್ಕಾಗಿ 75 ಕೋಟಿ ರೂ.ಗಳ ಕ್ಲಸ್ಟರ್ ಸೀಡ್ ಫಂಡ್ ಸ್ಥಾಪನೆಗೆ ನಿರ್ಧರಿಸಿದೆ. 70.805 ಕೋಟಿ ರೂ.ಗಳಲ್ಲಿ ಸೆಮಿ-ಕಂಡಕ್ಟರ್ ಫ್ಯೂಚರ್ ಆಕ್ಸಿಲರೇಟರ್ ಲ್ಯಾಬ್ 2.0 ಸ್ಥಾಪನೆಗೆ ಪ್ಲಾನ್ ಮಾಡಿಕೊಳ್ಳಲಾಗಿದೆ. 2025 ಮತ್ತು 2030 ರ ನಡುವೆ ರಾಜ್ಯವು ತನ್ನ ಪಾಲನ್ನು 50.33 ಕೋಟಿ ರೂ.ಗಳಿಗೆ ಒದಗಿಸುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
50,000 ಕೋಟಿ ರೂ. ಹೂಡಿಕೆಗಳನ್ನು ಆಕರ್ಷಿಸಲು ಕ್ಲೀನ್ ಮೊಬಿಲಿಟಿ ನೀತಿಗೆ ಸಚಿವ ಸಂಪುಟ ಅನುಮೋದಿಸಲಾಗಿದೆ. ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕೌಶಲ್ಯ ತರಬೇತುದಾರರು ಮತ್ತು ಹತ್ತು ವೃತ್ತಿಪರ ಸಂಯೋಜಕರನ್ನು ಹೊರಗುತ್ತಿಗೆ ನೀಡಲಾಗುವುದು.
ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಟರ್ನ್‌ಕೀ, ಲಂಪ್ಸಮ್-ಫಿಕ್ಸ್ಡ್ ಪ್ಲಾನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಇದರ ಹೆಚ್ಚುವರಿ ದ್ವಿಪಥ ಆರ್‌ಒಬಿ ನಿರ್ಮಾಣಕ್ಕೆ 426.50 ಕೋಟಿ ರೂ.ಗೆ ಸಂಪುಟ ನಿರ್ಧರಿಸಿದೆ. ರಾಜ್ಯದ ಜಲ ಭದ್ರತೆಗಾಗಿ ಬೆಂಗಳೂರು 2,000 ಕೋಟಿ ರೂ. ವೆಚ್ಚದಲ್ಲಿ 16 ಕಾಮಗಾರಿ ಪ್ಯಾಕೇಜ್‌ಗಳ ಜಾರಿಗೆ ಒಪ್ಪಿಗೆ ನೀಡಲಾಗಿದೆ.
ವಿಜಯಪುರ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ, ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗ್ರಾಮ ಪಂಚಾಯತಿಗಳಿಗೆ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಲೋಕೋಪಯೋಗಿ ಸೇರಿದಂತೆ ಇತರ ಇಲಾಖೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಲಾಗಿದೆ.












Click it and Unblock the Notifications