ಸರ್ಕಾರಕ್ಕೆ 6 ತಿಂಗಳು : 'ನಿಜ ಹೇಳಿ ಕುಮಾರಣ್ಣ' ಎಂದ ಬಿಜೆಪಿ!
Recommended Video

ಬೆಂಗಳೂರು, ನವೆಂಬರ್ 23 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ 6 ತಿಂಗಳು ಪೂರ್ಣಗೊಳಿಸಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಬಿಜೆಪಿ 'ನಿಜ ಹೇಳಿ ಕುಮಾರಣ್ಣ' ಎಂಬ ಅಭಿಯಾನ ಆರಂಭಿಸಿದೆ.
ಕರ್ನಾಟಕ ಬಿಜೆಪಿ @BJP4Karnataka ಟ್ವಿಟರ್ ಖಾತೆಯಿಂದ ಸರಣಿ ಟ್ವೀಟ್‌ಗಳನ್ನು ಮಾಡಿದೆ. #ನಿಜಹೇಳಿಕುಮಾರಣ್ಣ ಎಂಬ ಹ್ಯಾಷ್‌ಟ್ಯಾಗ್ ಬಳಸಿ ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ.
'ಸುಳ್ಳು-ಪೊಳ್ಳು ಹೇಳಿಕೊಂಡು ನೀವು ಅಧಿಕಾರಕ್ಕೆ ಬಂದು ಇಂದಿಗೆ ಆರು ತಿಂಗಳಾಯ್ತು. ಸಂಪೂರ್ಣ ಸಚಿವ ಸಂಪುಟ ಇನ್ನೂ ವಿಸ್ತರಣೆಯಾಗಿಲ್ಲ. ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಎಂದು ಪ್ರತಿಪಕ್ಷ ಬಿಜೆಪಿ ತನ್ನ ಟ್ವೀಟ್‌ನಲ್ಲಿ ಆರೋಪ ಮಾಡಿದೆ.
ನಿಜ ಹೇಳಿ ಕುಮಾರಣ್ಣ, ನಿಜ ಹೇಳಿ, ಕೊಟ್ಟ ಭರವಸೆಯಂತೆ ರೈತರ ಸಾಲ ಮನ್ನಾ ಯಾವಾಗ ಮಾಡ್ತಿರಾ?. ನಿಜ ಹೇಳಿ ಕುಮಾರಣ್ಣ ಎಂದು ಬಿಜೆಪಿ ತನ್ನ ಟ್ವೀಟ್‌ನಲ್ಲಿ ಆಗ್ರಹಿಸಿದೆ. ಟ್ವೀಟ್‌ಗಳ ವಿವರ ಇಲ್ಲಿದೆ ನೋಡಿ....
|
ಸಾಲ ಮನ್ನಾ ಮಾಡ್ತಿರಾ, ಇಲ್ವಾ?
ಕರ್ನಾಟಕ ಬಿಜೆಪಿ ನಿಜ ಹೇಳಿ ಕುಮಾರಣ್ಣ ಎಂಬ ಅಭಿಯಾನವನ್ನು ಆರಂಭಿಸಿದ್ದು, ಸಾಲ ಮನ್ನಾ ಮಾಡ್ತಿರಾ ಇಲ್ವಾ? ಎಂದು ಪ್ರಶ್ನಿಸಿದೆ.
|
ನಿಮ್ಮ ಸರಕಾರ ಬಂದು ಆರು ತಿಂಗಳಾಯ್ತು
ನಿಮ್ಮ ಸರ್ಕಾರ ಬಂದು ಆರು ತಿಂಗಳಾಯ್ತು, ರಾಜ್ಯಕ್ಕೆ ಏನು ಮಾಡಿದೀರಿ? ಎಂದು ಬಿಜೆಪಿ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದೆ.
|
ಬರಪೀಡಿತ ತಾಲೂಕುಗಳು
ರಾಜ್ಯದ ಬರಪೀಡಿತ ತಾಲೂಕುಗಳಿಗೆ ವಿಶೇಷ ಪ್ಯಾಕೇಜ್ ಅನ್ನು ಬಿಡುಗಡೆ ಮಾಡುವಿರಾ? ಎಂದು ಬಿಜೆಪಿ ಕುಮಾರಸ್ವಾಮಿ ಅವರನ್ನು ಟ್ವೀಟರ್‌ನಲ್ಲಿ ಪ್ರಶ್ನಿಸಿದೆ.
|
ಸಂಪುಟ ವಿಸ್ತರಣೆ ಯಾವಾಗ?
ಸಂಪುಟ ವಿಸ್ತರಣೆ ಮಾಡದೇ ಎಲ್ಲಾ ಖಾತೆಗಳನ್ನು ನಿಮ್ಮ ಬಳಿ ಇಟ್ಟುಕೊಂಡಿದ್ದೀರಿ. ಸಂಪುಟ ವಿಸ್ತರಣೆಯನ್ನು ಯಾವಾಗ ಮಾಡುತ್ತೀರಿ? ಎಂದು ಬಿಜೆಪಿ ಕೇಳಿದೆ.












Click it and Unblock the Notifications