ವಿಶ್ವಾಸಮತ: ಬಿಜೆಪಿ ಟ್ವೀಟ್ ಏಟು, ಕಾಂಗ್ರೆಸ್ ಎದಿರೇಟು

ಬೆಂಗಳೂರು, ಜುಲೈ 22: ವಿಶ್ವಾಸಮತದ ಹಗ್ಗ-ಜಗ್ಗಾಟ ಬೆಳಿಗ್ಗಿನಿಂದಲೂ ವಿಧಾನಸೌಧದಲ್ಲಿ ನಡೆಯುತ್ತಲೇ ಇದೆ. ಬಿಜೆಪಿಯವರು ಇಂದೇ ವಿಶ್ವಾಸಮತ ಮಾಡಿ ಎಂದು ಪಟ್ಟು ಹಿಡಿದಿದ್ದರೆ, ದೋಸ್ತಿ ಪಕ್ಷದವರು ನಾಳೆಗೆ ಮುಂದೂಡಿ ಎಂದು ಪಟ್ಟು ಹಿಡಿದಿದ್ದಾರೆ.

ಸದನದ ಒಳಗೆ ಬಿಜೆಪಿ-ಕಾಂಗ್ರೆಸ್‌ ಜಟಾಪಟಿಗೆ ಇಳಿದಿದ್ದರೆ, ಹೊರಗೆ ಸಾಮಾಜಿಕ ಜಾಳತಾಣದಲ್ಲೂ ಸಹ ಎರಡೂ ಪಕ್ಷಗಳು ಪರಸ್ಪರ ಜಟಾಪಟಿಗೆ ಇಳಿದಿವೆ.

ಸಂಜೆ ಸದನದಲ್ಲಿ ಗದ್ದಲ ಹೆಚ್ಚಾಗಿ ಸ್ಪೀಕರ್ ಅವರ ಸದನವನ್ನು ಹತ್ತು ನಿಮಿಷದ ವರೆಗೆ ಮುಂದೂಡಿದಾಗ, ಕರ್ನಾಟಕ ಬಿಜೆಪಿಯು 'ನುಡಿದಂತೆ ನಡೆಯಿರಿ' ಎಂದು ಟ್ವೀಟ್ ಮಾಡಿತು.

 Karnataka BJP tweet about vote of confidence, congress replies

'ಸೋಮವಾರ ವಿಶ್ವಾಸಮತ ಯಾಚನೆ ಮಾಡುತ್ತೇವೆ' ಎಂದು ಶುಕ್ರವಾರವೇ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮಾತು ನೀಡಿದ್ದರು, ಹಾಗಾಗಿ ಇಂದೇ ವಿಶ್ವಾಸಮತ ಯಾಚನೆ ಮಾಡಿ ಎಂದು ಬಿಜೆಪಿ ಸದಸ್ಯರು ಒತ್ತಾಯ ಮಾಡಿದರು ಈ ಹಿನ್ನೆಲೆಯಲ್ಲಿ ಬಿಜೆಪಿಯು ಹೀಗೆ ಟ್ವೀಟ್ ಮಾಡಿತ್ತು.

ಇದಕ್ಕೆ ಉತ್ತರಿಸಿದ ಕರ್ನಾಟಕ ಕಾಂಗ್ರೆಸ್‌, 'ಆಪರೇಷನ್ ಕಮಲವೆಂಬ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ನಿಮ್ಮ ಕುತಂತ್ರ ಬಯಲಾಗುತ್ತಿದೆ.. ಸ್ವಲ್ಪ ತಡೆಯಿರಿ..!' ಎಂದು ಪ್ರತಿ ಟ್ವೀಟ್ ಮಾಡಿದೆ.

ಅದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ ಬಿಜೆಪಿ ಕರ್ನಾಟಕ, 'ಒಂದು ವರ್ಷದಿಂದ ನಿಮ್ಮ ದುರಾಡಳಿತವನ್ನು ತಡೆದುಕೊಂಡು ಸಾಕಾಗಿದೆ ಈಗ ನಿಮ್ಮ ಡ್ರಾಮಾ ಸಾಕು ನಡಿಯಿರಿ' ಎಂದು ಟ್ವೀಟ್ ಮಾಡಿದೆ.

ಬಿಜೆಪಿಯ ಎರಡನೇ ಟ್ವೀಟ್‌ಗೆ ಪ್ರತಿಯಾಗಿ ಮತ್ತೆ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಕಳ್ಳತನ ಬಿಟ್ಟು ಅನ್ನಕ್ಕಾಗಿ ದುಡಿಯಿರಿ, ವಾಮಮಾರ್ಗ ಬಿಟ್ಟು ಸಂವಿಧಾನದ ಮಾರ್ಗದಲ್ಲಿ ನಡೆಯಿರಿ, ನೀವು ಅನೈತಿಕರಲ್ಲದಿದ್ದರೆ ಜನಮತ ಪಡೆಯಿ' ಎಂದು ಪ್ರತಿಟ್ವೀಟ್ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+