ಅಸಮರ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ 6 ತಿಂಗಳ ರಿಪೋರ್ಟ್ ಕಾರ್ಡ್
ಬೆಂಗಳೂರು, ನವೆಂಬರ್ 11: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಹಾಗೂ ಸರ್ಕಾರದ ನಡುವೆ ಟ್ವೀಟ್ ವಾರ್ ಗಳು ಜೋರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ರಾಜ್ಯ ಬಿಜೆಪಿ ಕಿಡಿಕಾರಿದೆ.ಅಸಮರ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಆರು ತಿಂಗಳ ರಿಪೋರ್ಟ್ ಕಾರ್ಡ್ ಎಂದು ಹಲವು ಅಂಶಗಳನ್ನ ಉಲ್ಲೇಖಿಸಿದೆ.
▪️ಇಂಡಿ ಮೈತ್ರಿಕೂಟದ ಸಭೆ
▪️ಸ್ಟಾಲಿನ್ ನಾಡಿಗೆ ಕಾವೇರಿ ನೀರು
▪️ತೆಲಂಗಾಣಕ್ಕೆ ಫಾಕ್ಸ್‌ಕಾನ್ ಶಿಫ್ಟ್
▪️ಪಂಚ ರಾಜ್ಯ ಚುನಾವಣೆಗೆ ಕಲೆಕ್ಷನ್
▪️ಪ್ರಿಯಾಂಕ್ ಖರ್ಗೆ ಅಕ್ರಮ ಪರೀಕ್ಷೆ
▪️ಕರ್ನಾಟಕ ಜಿಹಾದಿಗಳ ಅಡಗುತಾಣ
▪️ ಗ್ಯಾರಂಟಿಗಳ ಅಪ್ರಬುದ್ಧ ಅನುಷ್ಠಾನ

ಇನ್ನೂ ಮತ್ತೊಂದು ಟ್ವೀಟ್ ಮಾಡಿರುವ ಬಿಜೆಪಿ, ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕ V/S ಸಚಿವರ ಕಾದಾಟ ಎಂದಿಗೂ ಮುಗಿಯದ ಕತೆ! ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಸಚಿವ ಮಧು ಬಂಗಾರಪ್ಪನವರ ನಡುವೆ ಬೂದಿ ಮುಚ್ಚಿದ ಕೆಂಡದಂತಿದ್ದ ಕಚ್ಚಾಟ ಈಗ ಬೀದಿಗೆ ಬಂದು ನಿಂತಿದೆ.
ಅಸಮರ್ಥ ಮುಖ್ಯಮಂತ್ರಿ @siddaramaiah ಅವರ ಸರ್ಕಾರದ 6 ತಿಂಗಳ ರಿಪೋರ್ಟ್ ಕಾರ್ಡ್:
— BJP Karnataka (@BJP4Karnataka) November 11, 2023
▪️ಇಂಡಿ ಮೈತ್ರಿಕೂಟದ ಸಭೆ
▪️ಸ್ಟಾಲಿನ್ ನಾಡಿಗೆ ಕಾವೇರಿ ನೀರು
▪️ತೆಲಂಗಾಣಕ್ಕೆ ಫಾಕ್ಸ್‌ಕಾನ್ ಶಿಫ್ಟ್
▪️ಪಂಚ ರಾಜ್ಯ ಚುನಾವಣೆಗೆ ಕಲೆಕ್ಷನ್
▪️ಪ್ರಿಯಾಂಕ್ ಖರ್ಗೆ ಅಕ್ರಮ ಪರೀಕ್ಷೆ
▪️ಕರ್ನಾಟಕ ಜಿಹಾದಿಗಳ ಅಡಗುತಾಣ
▪️ ಗ್ಯಾರಂಟಿಗಳ ಅಪ್ರಬುದ್ಧ…
ಕರ್ನಾಟಕದ ಜನತೆ ಬರದಿಂದ ಬಸವಳಿಯುತ್ತಿದ್ದು, ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದ್ದರೂ #CongressVsCongress ನ ನಡುವಿನ ಕಿತ್ತಾಟ ಮುಗಿಯದಿರುವುದು ಕರ್ನಾಟಕದ ದುರಂತ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ಬಿ. ವೈ. ವಿಜಯೇಂದ್ರರವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಪಕ್ಷದ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. 25 ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡು ಕೆಲಸ ಪ್ರಾರಂಭ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಕಾರ್ಯಕರ್ತರನ್ನು ಒಟ್ಟಾಗಿ ಸೇರಿಸಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಇನ್ನಷ್ಟೂ ಬಲಪಡಿಸುತ್ತೇವೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.












Click it and Unblock the Notifications