ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಚುನಾವಣೆ 2019 : ಬಿಜೆಪಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ

|
Google Oneindia Kannada News

Recommended Video

Lok Sabha Elections 2019 :ಲೋಕಸಭಾ ಚುನಾವಣೆಗೆ ಕರ್ನಾಟಕ ಬಿಜೆಪಿಯಿಂದ ಸಂಭಾವ್ಯ ಪಟ್ಟಿ ರಿಲೀಸ್ |Oneindia Kannada

ಬೆಂಗಳೂರು, ಜನವರಿ 02 : 2019ರ ಲೋಕಸಭಾ ಚುನಾವಣೆಗೆ ಕರ್ನಾಟಕ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೆಚ್ಚಿನ ಅಧಿಕಾರವನ್ನು ಅಮಿತ್ ಶಾ ಅವರು ನೀಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ಬಿ.ಎಸ್.ಯಡಿಯೂರಪ್ಪ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಜನವರಿ 10ರೊಳಗೆ ಪಟ್ಟಿಯನ್ನು ದೆಹಲಿಗೆ ಕಳುಹಿಸಿಕೊಡುವಂತೆ ಅಮಿತ್ ಶಾ ಸೂಚನೆ ನೀಡಿದ್ದಾರೆ.

ಲೋಕಸಭೆ ಚುನಾವಣೆ : 9 ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿಗಳಿಲ್ಲ!ಲೋಕಸಭೆ ಚುನಾವಣೆ : 9 ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿಗಳಿಲ್ಲ!

ಅಮಿತ್ ಶಾ ಅವರು ತಮ್ಮ ತಂಡದ ಮೂಲಕ ರಾಜ್ಯದಲ್ಲಿ ರಹಸ್ಯ ಸಮೀಕ್ಷೆ ನಡೆಸಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು?, ಹಾಲಿ ಸಂಸದರ ಪರ ಅಲೆ ಹೇಗಿದೆ? ಎಂದು ಈ ತಂಡ ವರದಿ ಸಿದ್ಧಪಡಿಸಿದ್ದು, ಹೈಕಮಾಂಡ್ ನಾಯಕರಿಗೆ ನೀಡಿದೆ.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಕೆಲವು ಕ್ಷೇತ್ರಗಳಿಗೆ ಇಬ್ಬರಿಗಿಂತ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಣೆಯನ್ನು ಯಡಿಯೂರಪ್ಪ ಅವರು ಹೈಕಮಾಂಡ್ ನಾಯರಿಗೆ ನೀಡಿದ್ದಾರೆ. ಅನಂತ್ ಕುಮಾರ್ ಅವರ ನಿಧನದಿಂದ ತೆರವಾದ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. 28 ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ....

ಲೋಕಸಭೆ ಚುನಾವಣೆ : ಕರ್ನಾಟಕ ಬಿಜೆಪಿಗೆ ಕಗ್ಗಂಟಾಗಿರುವ 11 ಕ್ಷೇತ್ರಗಳುಲೋಕಸಭೆ ಚುನಾವಣೆ : ಕರ್ನಾಟಕ ಬಿಜೆಪಿಗೆ ಕಗ್ಗಂಟಾಗಿರುವ 11 ಕ್ಷೇತ್ರಗಳು

ಬೆಂಗಳೂರು ವಲಯ

ಬೆಂಗಳೂರು ವಲಯ

* ಬೆಂಗಳೂರು ದಕ್ಷಿಣ - ತೇಜಸ್ವಿನಿ ಅನಂತ್ ಕುಮಾರ್
* ಬೆಂಗಳೂರು ಉತ್ತರ - ಡಿ.ವಿ.ಸದಾನಂದ ಗೌಡ
* ಬೆಂಗಳೂರು ಕೇಂದ್ರ - ಪಿ.ಸಿ.ಮೋಹನ್
* ಬೆಂಗಳೂರು ಗ್ರಾಮಾಂತರ - ಸಿ.ಪಿ.ಯೋಗೇಶ್ವರ, ತುಳಸಿ ಮುನಿರಾಜು ಗೌಡ

ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ

ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ

* ಚಿಕ್ಕಬಳ್ಳಾಪುರ - ಬಿ.ಎನ್.ಬಚ್ಚೇಗೌಡ, ಕಟ್ಟಾ ಸುಬ್ರಮಣ್ಯ ನಾಯ್ಡು
* ಕೋಲಾರ - ಡಿ.ಎಸ್.ವೀರಯ್ಯ, ಚಿ.ನಾ.ರಾಮು, ನಾರಾಯಣ ಸ್ವಾಮಿ
* ಮೈಸೂರು-ಕೊಡಗು - ಪ್ರತಾಪ್ ಸಿಂಹ
* ತುಮಕೂರು - ಜಿ.ಎಸ್.ಬಸವರಾಜು

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

* ಚಾಮರಾಜನಗರ - ಎಂ.ಶಿವಣ್ಣ, ವಿ.ಶ್ರೀನಿವಾಸ ಪ್ರಸಾದ್
* ಚಿತ್ರದುರ್ಗ - ಜನಾರ್ದನ ಸ್ವಾಮಿ
* ಶಿವಮೊಗ್ಗ - ಬಿ.ವೈ.ರಾಘವೇಂದ್ರ
* ದಾವಣಗೆರೆ - ಜಿ.ಎಂ.ಸಿದ್ದೇಶ್ವರ
* ಚಿಕ್ಕಮಗಳೂರು - ಉಡುಪಿ - ಶೋಭಾ ಕರಂದ್ಲಾಜೆ, ಜಯಪ್ರಕಾಶ್ ಹೆಗ್ಡೆ

ದಕ್ಷಿಣ ಕನ್ನಡ, ಉತ್ತರ ಕನ್ನಡ

ದಕ್ಷಿಣ ಕನ್ನಡ, ಉತ್ತರ ಕನ್ನಡ

* ದಕ್ಷಿಣ ಕನ್ನಡ - ನಳೀನ್ ಕುಮಾರ್ ಕಟೀಲ್
* ಉತ್ತರ ಕನ್ನಡ - ಅನಂತ್ ಕುಮಾರ್ ಹೆಗಡೆ
* ಚಿಕ್ಕೋಡಿ - ರಮೇಶ್ ಕತ್ತಿ
* ಬೆಳಗಾವಿ - ಸುರೇಶ್ ಅಂಗಡಿ

ಧಾರವಾಡ, ಹಾವೇರಿ, ಕೊಪ್ಪಳ, ಬೀದರ್

ಧಾರವಾಡ, ಹಾವೇರಿ, ಕೊಪ್ಪಳ, ಬೀದರ್

* ಧಾರವಾಡ - ಪ್ರಹ್ಲಾದ್ ಜೋಶಿ
* ಹಾವೇರಿ-ಗದಗ - ಶಿವಕುಮಾರ್ ಉದಾಸಿ
* ಕೊಪ್ಪಳ - ಸಂಗಣ್ಣ ಕರಡಿ
* ಬೀದರ್ - ಭಗವಂತ್ ಖೂಬಾ
* ಬಾಗಲಕೋಟೆ - ಪಿ.ಸಿ.ಗದ್ದಿಗೌಡರ್
* ವಿಜಯಪುರ - ರಮೇಶ್ ಜಿಗಜಿಣಗಿ

English summary
Karnataka BJP president B.S.Yeddyurappa finalized the probable candidates list for Lok Sabha Elections 2019. List will submit to high command leaders before January 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X