ಯಡಿಯೂರಪ್ಪ ಕುಟುಂಬದ ವಿರುದ್ಧ ಬಸನಗೌಡ ಪಾಟಿಲ್ ಯತ್ನಾಳ್ ಹೊಸ ‘ಬಾಂಬ್’ ಸ್ಫೋಟ?
ಯಡಿಯೂರಪ್ಪ ಕುಟುಂಬ ಮತ್ತು ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಲು ಸಜ್ಜಾಗಿದ್ದಾರೆ. ಅಲ್ಲದೆ ಕರ್ನಾಟಕ ಬಿಜೆಪಿ ಮೇಲೆ ಹಿಡಿತ ಸಾಧಿಸಲು ಬಸನಗೌಡ ಪಾಟೀಲ್ ಯತ್ನಾಳ್ ಆಂಡ್ ಟೀಂ ಇದೀಗ ಹೊಸ ಬಾಂಬ್ ಸಿಡಿಸಲು ಸಜ್ಜಾಗಿದ್ದು. ಕುಂದಾನಗರಿ ಬೆಳಗಾವಿಯಲ್ಲೇ ವಿಜಯೇಂದ್ರ ವಿರುದ್ಧ ಹೋರಟಕ್ಕೆ ಸ್ಕೆಚ್ ರೆಡಿಯಾಗುತ್ತಿದೆ ಎಂಬ ಆರೋಪ ಸಂಚಲನ ಸೃಷ್ಟಿ ಮಾಡಿದೆ.
ಕಾಂಗ್ರೆಸ್ & ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜಂಟಿ ಪಾದಯಾತ್ರೆ ಮುಗಿಸಿರುವ ಬಿಜೆಪಿ ಮತ್ತು ಜೆಡಿಎಸ್ ದೋಸ್ತಿಗೆ ಈಗ ಮತ್ತೊಂದು ಕಂಟಕ ಎದುರಾಗಿದೆ ಬೆಂಗಳೂರು To ಮೈಸೂರು ಪಾದಯಾತ್ರೆಯಲ್ಲಿ ಭಾಗವಹಿಸದೇ ದೂರ ಉಳಿದ ಬಿಜೆಪಿಯ ಹಿರಿಯ ನಾಯಕರಾದ ರಮೇಶ್ ಜಾರಕಿಹೊಳಿ & ಯತ್ನಾಳ್ ಇದೀಗ ಹೊಸ ಬಾಂಬ್‌ನ ಸಿಡಿಸಲು ಸಜ್ಜಾಗಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಬೆಳಗಾವಿ ಹೊರವಲಯ ಬಳಿ ಹೊಟೇಲ್ ಒಂದ್ರಲ್ಲಿ ಮಾಜಿ ಸಿಎಂ ಹಾಗೂ ಲಿಂಗಾಯತ ಸಮುದಾಯದ ನಾಯಕ ಯಡಿಯೂರಪ್ಪ & ಬಿವೈ ವಿಜಯೇಂದ್ರ ವಿರುದ್ಧ ಹೊಸ ರಣತಂತ್ರ ರೆಡಿಯಾಗಿದೆ ಎಂಬ ಸಂಚಲನ ಸೃಷ್ಟಿಸುವ ಸುದ್ದಿ ಹೊರಬಿದ್ದಿದೆ.

ವಿಜಯೇಂದ್ರ ಅಧಿಕಾರ ಮುಕ್ತಾಯ?
ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೀಳಿಸಿ, ಬಿಜೆಪಿ ಸರ್ಕಾರವನ್ನ ರಚಿಸಲು ಪಣತೊಟ್ಟಿದ್ದಾರೆ ಬಿಜೆಪಿ & ಜೆಡಿಎಸ್ ನಾಯಕರು ಎಂಬ ಮಾತು ಹರಿದಾಡ್ತಿದೆ. ಆದ್ರೆ, ಈ ಸಮಯದಲ್ಲಿ ಕರ್ನಾಟಕ ಬಿಜೆಪಿ ಬುಡವನ್ನೇ ಅಲುಗಾಡಿಸಲು ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಜೊತೆಗಾರರು ರೆಡಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು. ಇದಕ್ಕೆ ಪೂರಕವಾಗಿ ಬೆಳಗಾವಿ ಹೊರವಲಯದ, ಖಾಸಗಿ ಹೋಟೆಲ್ ಒಂದರಲ್ಲಿ ಬಿಜೆಪಿ ಅತೃಪ್ತರು ಮೀಟಿಂಗ್ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಅತೃಪ್ತರ ಗುಪ್ತ ಸಭೆಯಲ್ಲಿ ಅಪ್ಪ & ಮಕ್ಕಳ ಹಿಡಿತದ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೆ ರಮೇಶ ಜಾರಕಿಹೊಳಿ ಕೂಡ ಇದೇ ರೀತಿಯಾಗಿ ಬಿಜೆಪಿ ಒಳಗೆ ಇರುವ ಅತೃಪ್ತರ ಪಡೆಯನ್ನ ಒಂದುಗೂಡಿಸಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡ್ತಿದೆ. ಹಾಗೇ ಯಡಿಯೂರಪ್ಪ, ವಿಜಯೇಂದ್ರ & ಆರ್. ಅಶೋಕ ಒಪ್ಪಂದ ರಾಜಕೀಯ ಮಾಡ್ತಿದ್ದಾರೆ ಎಂಬ ಆರೋಪವನ್ನು ಕೂಡ ಮಾಡಿದ್ದಾರೆ ಅತೃಪ್ತರು ಎನ್ನಲಾಗಿದೆ.
ಯಡಿಯೂರಪ್ಪ ಕುಟುಂಬದ ವಿರುದ್ಧ...
ಬೆಳಗಾವಿ ಜಿಲ್ಲೆಯಲ್ಲಿ ಪಾರುಪತ್ಯ ಸಾಧಿಸಿರುವ ಜಾರಕಿಹೊಳಿ ಕುಟುಂಬದ ಯಾವ ನಾಯಕರೂ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆಗೆ ಮರ್ಯಾದಿ ಕೊಟ್ಟಿಲ್ಲ. ಬಿಜೆಪಿ ನಾಯಕ ಬಾಲಚಂದ್ರ ಜಾರಕಿಹೊಳಿ ಅವರು ಸಹ ಅಂತರ ಕಾಯ್ದುಕೊಂಡಿದ್ದು. ಮುಡಾ ಮತ್ತು ವಾಲ್ಮೀಕಿ ಹಗರಣದ ಹೆಸರಲ್ಲಿ ಸಿಎಂ ಕುರ್ಚಿ ಅಲುಗಾಡಿಸಲು ಬಿಜೆಪಿ ನಾಯಕರು ಮುಂದೆ ನುಗ್ಗುತ್ತಿದ್ದಾರೆ. ಹೀಗೆ, ದೊಡ್ಡ ಹೋರಾಟ ನಡೆಯುವ ಸಮಯಕ್ಕೆ ಕರ್ನಾಟಕದ ಬಿಜೆಪಿ ಘಟಕದಲ್ಲಿ ಅಸಮಾಧಾನ ಕೂಡ ಸ್ಫೋಟವಾಗಿದೆ. ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಪ್ರಮುಖ ನಾಯಕರುಗಳು ಕೂಡ ಗುಪ್ತವಾಗಿ ಸೇರಿದ್ದರು ಎನ್ನಲಾಗಿದೆ. ಹಾಗೇ ಯತ್ನಾಳ್ & ತಂಡದ ಬಗ್ಗೆ ಬಿಜೆಪಿ ಕೇಂದ್ರ ನಾಯಕರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications