ಈ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳ ಪಟ್ಟಿ!
ಬೆಂಗಳೂರು, ನವೆಂಬರ್ 28: ಈ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳ ಪಟ್ಟಿಯನ್ನ ರಾಜ್ಯ ಬಿಜೆಪಿ ಬಿಡುಗಡೆ ಮಾಡಿದ್ದು, ಲೋಕಾಯುಕ್ತವನ್ನೇ ಇನ್ನಿಲ್ಲದಂತೆ ಮಾಡಿದ ಭ್ರಷ್ಟ ಮುಖ್ಯಮಂತ್ರಿ ಅಧಿಕಾರದಲ್ಲಿರುವಾಗ ಭ್ರಷ್ಟಾಚಾರಗಳು ರಾಜರೋಷವಾಗಿಯೇ ಸಾಗಿವೆ ಎಂದು ಟ್ವೀಟ್ ಮೂಲಕ ಬಿಜೆಪಿ ಹೇಳಿದೆ.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳ ಪಟ್ಟಿ!
▪ ಅಧಿಕಾರಿಗಳ ವರ್ಗಾವಣೆಯಲ್ಲಿ ಭ್ರಷ್ಟಾಚಾರ!
▪ ನೇಮಕಾತಿ ಪರೀಕ್ಷೆಯಲ್ಲಿ ಭ್ರಷ್ಟಾಚಾರ!
▪ ಕಾಸಿಗಾಗಿ ಪೋಸ್ಟಿಂಗ್ ದಂಧೆ ಭ್ರಷ್ಟಾಚಾರ!
▪ ಶ್ಯಾಡೋ ಸಿಎಂ ಅವರ ಭ್ರಷ್ಟಾಚಾರದ ಹಾವಳಿ!
▪ ಔಷಧಿ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ!
▪ ಇಂಧನ ಇಲಾಖೆಯಲ್ಲಿ ಗುತ್ತಿಗೆದಾರರ ಭ್ರಷ್ಟಾಚಾರ!
▪ ಶಿಕ್ಷಣ ಇಲಾಖೆಯ ಶೂ ಚಪ್ಪಲಿ ಭ್ರಷ್ಟಾಚಾರ!
▪ ಅಬಕಾರಿ ಇಲಾಖೆಯಲ್ಲಿ ಶಿಫ್ಟಿಂಗ್ ಭ್ರಷ್ಟಾಚಾರ!
▪️ ಆರೋಗ್ಯ ಇಲಾಖೆಯಲ್ಲಿ ಕಳಪೆ ಔಷಧಿಯ ಭ್ರಷ್ಟಾಚಾರ!

ಭ್ರಷ್ಟಾಚಾರದ ಪಿತಾಮಹ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಮೇಲೆ ಭ್ರಷ್ಟಾಚಾರಗಳು ನಡೆಯುತ್ತಿಲ್ಲವೆಂದರೆ ಕಾಂಗ್ರೆಸ್ ಸರ್ಕಾರಕ್ಕೆ ಬಹುದೊಡ್ಡ ಅವಮಾನ. ಪ್ರತಿಯೊಂದು ಇಲಾಖೆಯಲ್ಲೂ ಕಳಂಕಿತರು ಭ್ರಷ್ಟರು ಆರೋಪಿತರೇ ತುಂಬಿ ತುಳುಕುತ್ತಿದ್ದಾರೆ. ಹಣದ ದುರಾಸೆಗೆ ಬಿದ್ದಿರುವ #ATMSarkara ಆರೋಗ್ಯ ಇಲಾಖೆಯಲ್ಲೂ ಭ್ರಷ್ಟಾಚಾರದ ಕ್ಯಾನ್ಸರ್ ಹರಡಿ ಮಜಾ ನೋಡುತ್ತಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕಾಮಾಲೆ ಕಣ್ಣಿಗಂತು ಯಾವುದೂ ಕಾಣುತ್ತಿಲ್ಲ. ಕಂಡರೂ ಶ್ಯಾಡೋ ಸಿಎಂ ಪ್ರಭಾವಕ್ಕೆ ಸೈಲೆಂಟ್ ಆಗಿದ್ದಾರೆ. ಕರ್ನಾಟಕವನ್ನು ಕಾಂಗ್ರೆಸ್ ತನ್ನ ಪಾಲಿನ ATM ಮಾಡಿಕೊಂಡಿದೆ ಎಂಬುದು ವೃಥಾ ಆರೋಪವಲ್ಲ. ಈ ಬಗ್ಗೆ ಕಣ್ಣಿಗೆ ಕಾಣುವ ಸಾಕ್ಷ್ಯಗಳೇ ಇವೆ.
ತೆಲಂಗಾಣ ಚುನಾವಣೆಗೆ ಪ್ರಚಾರಕ್ಕಾಗಿ ಕಾಂಗ್ರೆಸ್ ನಮ್ಮ ರಾಜ್ಯದ ಸರ್ಕಾರಿ ಖಜಾನೆಯಿಂದ ಖರ್ಚು ಮಾಡಿ, ರಾಜ್ಯ ಸರ್ಕಾರದ ಹೆಸರಿನಲ್ಲಿ ತೆಲಂಗಾಣ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುವ ಮೂಲಕ ಕಾಂಗ್ರೆಸ್ ಚುನಾವಣಾ ಅಕ್ರಮದಲ್ಲಿ ತೊಡಗಿದೆ. ಚುನಾವಣಾ ಆಯೋಗ ಕಾಂಗ್ರೆಸ್‌ಗೆ ನೋಟಿಸ್ ನೀಡಿ ಛೀಮಾರಿ ಹಾಕಿದೆ. ನೈತಿಕವಾಗಿ ದಿವಾಳಿಯಾಗಿ, ಭ್ರಷ್ಟಾಚಾರದಲ್ಲಿ ಹೊಸ ದಾಖಲೆ ಬರೆಯುತ್ತಿರುವ ಸಿದ್ದರಾಮಯ್ಯ ಅವರು ಕರ್ನಾಟಕದ ಮಾನವನ್ನು ದೇಶದೆಲ್ಲೆಡೆ ಹರಾಜು ಹಾಕುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
6 ತಿಂಗಳ ಬಳಿಕ ಇಂದು ಸಿಎಂ ಸಿದ್ದರಾಮಯ್ಯ ಅವರು ಜನತಾ ದರ್ಶನ ಪ್ರಾರಂಭಿಸಿದ್ದಾರೆ. ಜನರ ಅಹವಾಲು ಕೇಳಿ ತಕ್ಷಣವೇ ಪರಿಹಾರ ನೀಡಬೇಕು ಎಂದು ಸುಮ್ಮನೆ ಮೇಜು, ಖುರ್ಚಿ ಹಾಕಿಸಿ ಮನವಿ ಪತ್ರ ಪಡೆಯುವ ಮೂಲಕ ಮಾಡಿರುವುದ ಬೋಗಸ್ ದರ್ಶನ.ಭ್ರಷ್ಟಾಚಾರದಲ್ಲಿ ಮುಳುಗಿ, ವರ್ಗಾವಣೆ ದಂಧೆಯಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾವು ಪ್ರತಿಭಟಿಸುತ್ತೇವೆ ಎಂದು ಬಿಜೆಪಿ ಹೇಳಿದೆ.












Click it and Unblock the Notifications