ಗೃಹ ಸಚಿವರನ್ನು ಭೇಟಿ ಮಾಡಿದ ಬಿಜೆಪಿ ನಾಯಕರು

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 15 : ಬಿಜೆಪಿ ಕಾರ್ಯಕರ್ತ ರಾಜು ಅವರ ಹತ್ಯೆ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಕರ್ನಾಟಕ ಬಿಜೆಪಿ ಒತ್ತಾಯಿಸಿದೆ. ಈ ಕುರಿತು ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಬಿಜೆಪಿ ನಾಯಕರು ಇಂದು ಮನವಿ ಸಲ್ಲಿಸಿದರು.

ಮಾಜಿ ಗೃಹ ಸಚಿವ ಆರ್.ಅಶೋಕ್, ಮಾಜಿ ಸಚಿವ ಸುರೇಶ್ ಕುಮಾರ್ ನೇತೃತ್ವದ ಬಿಜೆಪಿ ನಾಯಕರ ನಿಯೋಗ ಮಂಗಳವಾರ ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿತು. ರಾಜ್ಯ ಸರ್ಕಾರ ಯಾವುದೇ ನಡೆ ಈ ರೀತಿ ಕೃತ್ಯ ಮಾಡುವವರಿಗೆ ಮೃದು ಧೋರಣೆ ತೋರಿಸುವಂತಿರಬಾರದು ಎಂದು ನಿಯೋಗ ಒತ್ತಾಯಿಸಿತು. [ಕರ್ನಾಟಕದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ: ಪ್ರತಾಪ್ ಸಿಂಹ]

g parameshwara

ಭಾನುವಾರ ಮೈಸೂರಿನಲ್ಲಿ ವಿಎಚ್‌ಪಿ ಮತ್ತು ಬಿಜೆಪಿ ಕಾರ್ಯಕರ್ತ ರಾಜು ಅವರನ್ನು ಕೊಲೆ ಮಾಡಿದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ನಿಯೋಗ ಮನವಿ ಮಾಡಿತು. ಗೃಹ ಸಚಿವರು ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ನಿಯೋಗಕ್ಕೆ ತಿಳಿಸಿದರು. [ಚಿತ್ರಗಳು : ಮೈಸೂರಲ್ಲಿ ಪೊಲೀಸರ ಪಥಸಂಚಲನ]

ಗೃಹ ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಶಾಸಕರಾದ ಮುನಿರಾಜು, ವೈ.ಎ.ನಾರಾಯಣಸ್ವಾಮಿ, ರವಿ ಸುಬ್ರಮಣ್ಯ, ಕೃಷ್ಣಪ್ಪ ಹಾಗೂ ವಿಧಾನಪರಿಷತ್ ಸದಸ್ಯ ಅಶ್ವತ್ಥನಾರಾಯಣ ಮುಂತಾದವರಿದ್ದರು.[ಮೈಸೂರು : ರಾಜು ಕೊಲೆ ಪ್ರಕರಣದ ತನಿಖೆ ಸಿಸಿಬಿಗೆ]

home minister

ಅಧಿಕಾರಿಗಳ ಜೊತೆ ಸಭೆ : ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಮೈಸೂರಿಗೆ ಭೇಟಿ ನೀಡಿದ್ದು ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ರಾಜಯ ಹತ್ಯೆ, ಸೋಮವಾರದ ಬಂದ್ ವೇಳೆ ನಡೆದ ಘಟನೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾರೆ.

ಕ್ಯಾತಮಾರನಹಳ್ಳಿಯಲ್ಲಿರುವ ರಾಜು ಅವರ ನಿವಾಸಕ್ಕೆ ಭೇಟಿ ನೀಡಿದ ಪರಮೇಶ್ವರ ಅವರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಸರ್ಕಾರದ ಕಡೆಯಿಂದ ಪರಿಹಾರವಾಗಿ 5 ಲಕ್ಷ ರೂ.ಗಳ ಮೊತ್ತದ ಚೆಕ್‌ ಅನ್ನು ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A delegation of Karnataka BJP leaders on Tuesday met Home Minister Dr.G.Parameshwara and demanded the state government to nab the culprits at the earliest who killed 32-year-old Vishwa Hindu Parishad (VHP), BJP worker Raju in Udaygiri police station limits Mysuru on Sunday.
Please Wait while comments are loading...