ಪ್ರಧಾನಿ ಮೋದಿ ಸಮಾವೇಶಕ್ಕೆ ಗೋವಾದಿಂದ ಬಿಜೆಪಿ ಜನರನ್ನು ಕರಿಸಿತೇ?: ಕಾಂಗ್ರೆಸ್ ಹೇಳಿದ್ದೇನು

ಬೆಂಗಳೂರು, ಮೇ 03: ಕರ್ನಾಟಕ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳಿಂದಲೂ ಭರ್ಜರಿ ಚುನಾವಣಾ ಪ್ರಚಾರ ಆರಂಭವಾಗಿದೆ. ಅದರಲ್ಲೂ ಬಿಜೆಪಿ ನಾಯಕರಂತೂ ರಾಜ್ಯದಲ್ಲೇ ಬೀಡು ಬಿಟ್ಟಿದ್ದು, ಪ್ರತಿ ನಿತ್ಯವು ರಾಜ್ಯ ಒಂದೊಂದು ಭಾಗದಲ್ಲಿ ಅಬ್ಬರ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಅವರ ರೋಡ್ ಶೋ, ಸಮಾವೇಶ ಕುರಿತು ರಾಜ್ಯ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಹೌದು, ಮೂಡಿಗೆರೆ, ಕಲಬುರಗಿ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಪರ ಮತಬೇಟೆ ಆರಂಭಿಸಿದ್ದಾರೆ. ಈಗಾಗಲೇ ಕೆಲವೆಡೆ ರೋಡ್ ಶೋ ಸಹ ನಡೆದಿದೆ. ಮೇ 6ರಂದು ಬೆಂಗಳೂರಿನಲ್ಲಿ 36 ಕೀಲೋ ಮೀಟರ್ ಬೃಹತ್ ರೋಡ್ ಶೋ ಮತ್ತು ಸಮಾವೇಶ ನಡೆಯಲಿದೆ ಎನ್ನಲಾಗಿದೆ.

ಆದರೆ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶಕ್ಕಾಗಿ ಬಿಜೆಪಿಯು ಬೇರೆ ಕಡೆಯಿಂದ ಜನರನ್ನು ದುಡ್ಡು ಕೊಟ್ಟು ಕರೆ ತಂದಿದೆ ಎಂದು ಕರ್ನಾಟಕ ಕಾಂಗ್ರೆಸ್‌ ಆರೋಪಿಸಿದೆ. ಈ ಕುರಿತು ಗೋವಾ ರಾಜ್ಯದ ಬಸ್‌ಗಳು ಬುಕ್ ಆಗಿರುವ ಬಗ್ಗೆ ವಿಡಿಯೋ ಮಾಡಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.

Karnataka BJP Invited People From Goa For PM Narendra Modi Conference Congress Alleges

ರಾಜ್ಯದಲ್ಲಿ ಕನ್ನಡಿಗರ ವಿರೋಧ ಎದುರಿಸುತ್ತಿರುವ ಕರ್ನಾಟಕ ಬಿಜೆಪಿ ಸರ್ಕಾರ ಮರಿಯಾದೆ ಉಳಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಗೋವಾದಿಂದ ಜನರನ್ನು ಕರೆತಂದಿದೆ ಎಂದು ಗಂಭೀರವಾಗಿ ಆರೋಪಿಸಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂತಹದೊಂದು ದುರ್ಗತಿಯನ್ನು ಕನ್ನಡಿಗರು ತಂದಿಟ್ಟಿದ್ದಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಅಲ್ಲದೇ ಪ್ರಧಾನಿ ಮೋದಿ ರಾಜ್ಯದಲ್ಲಿ ಇನ್ನೂ ನೂರು ಸಮಾವೇಶ ಮಾಡಿದರೂ ಸಹ ಕರ್ನಾಟಕದಿಂದ ಬಿಜೆಪಿಯನ್ನು ಒದ್ದೋಡಿಸುವುದು ನಿಶ್ಚಿತ ಎಂದು ಕಾಂಗ್ರೆಸ್ ಭವಿಷ್ಯ ನುಡಿದಿದೆ.

ದೇಶದ ಪ್ರಧಾನಿಯನ್ನು ಅವಮಾನಿಸಲು ಹೇಗೆ ಸಾಧ್ಯ?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬುಧವಾರ ಸುದ್ದಿಗಾರರಿಗೆ ಪ್ರಿತಿಕ್ರಿಯಿಸಿ ಪ್ರಧಾನಿ ಮಂತ್ರಿ ಮೋದಿಯವರು ಹೇಳುತ್ತಾರೆ, ಕಾಂಗ್ರೆಸ್ ನಾಯಕರು ತಮ್ಮನ್ನು ಅವಮಾನಿಸಿದ್ದೇವೆ ಎಂದು. ನೀವು ಈ ದೇಶದ ಪ್ರಧಾನಿ ನಾವು ಹೇಗೆ ನಿಮ್ಮನ್ನು ಅವಮಾನಿಸಲು ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ. ಆದರೆ ನೀವು ಕರ್ನಾಟಕವನ್ನ ಅವಮಾನಿಸುತ್ತಿದ್ದೀರಿ, ಅದಕ್ಕೆ ಉತ್ತರ ಕೊಡಿ. ರಾಜ್ಯಕ್ಕೆ ನಿಮ್ಮ ಕೊಡುಗೆಯಾದರೂ ಎನು? ಎಂದು ತಿರುಗ ಎಐಸಿಸಿ ಅಧ್ಯಕ್ಷರು ಪ್ರಶ್ನಿಸಿದ್ದಾರೆ.

Karnataka BJP Invited People From Goa For PM Narendra Modi Conference Congress Alleges

ಇತ್ತೀಚೆಗಷ್ಟೆ ಗದಗಿನಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರದ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಪ್ರಧಾನಿ ಮೋದಿಯವರು 'ವಿಷ ಸರ್ಪ ಇದ್ದಂತೆ ನೆಕ್ಕಿ ನೋಡಿದರೆ ನೀವು ಸತ್ತಂತೆ' ಎಂದು ಟೀಕಿಸಿದ್ದರು. ಈ ವಿವಾದದ ಸ್ವರೂಪ ಪಡೆದಿತ್ತು.

ಇದಾದ ಬಳಿಕ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ಪ್ರಿಯಾಂಕ್ ಖರ್ಗೆಯವರು ಪ್ರಧಾನಿಯನ್ನು ನಾಲಾಯಕ್ ಮಗ ಎನ್ನುವ ಮೂಲಕ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದರು. ಇದಕ್ಕೆ ಬಿಜೆಪಿ ನಾಯಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದಾದ ಕೂಡಲೇ ಎಚ್ಚೆತ್ತ ಕಾಂಗ್ರೆಸ್ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಯಿತು.

ಸ್ವತಃ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖರ್ಗೆಯವರು ತಾವು ಪ್ರಧಾನಿ ಮೋದಿಯನ್ನು ಟೀಕಿಸಿಲ್ಲ ಎಂದು ಸ್ವಷ್ಟನೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+