‘ಶಿವಮೊಗ್ಗದಲ್ಲಿ ಈ ಹಿಂದೆ ವಿಧ್ವಂಸಕ ಕೃತ್ಯ ಎಸಗಿದ PFI ಗೂಂಡಾ...’
ಮಲೆನಾಡಿನ ಹೆಬ್ಬಾಗಿಲು ಎಂಬ ಕೀರ್ತಿ ಪಡೆದಿರುವ ಶಿವಮೊಗ್ಗದ ಪರಿಸ್ಥಿತಿ ಇದೀಗ ಬೂದಿ ಮುಚ್ಚಿದ ಕೆಂಡವಾಗಿದೆ. ಯಾವ ಕ್ಷಣದಲ್ಲಿ ಏನಾಗುತ್ತೋ ಎಂಬ ಭಯ ಆವರಿಸಿದೆ. ಇದೇ ಕಾರಣಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸಿಎಂ ಕಠಿಣ ಆದೇಶ ಹೊರಡಿಸಿದ್ದಾರೆ. ಆದರೆ ಈ ಸಂದರ್ಭದಲ್ಲೇ ಬಿಜೆಪಿ ಗಂಭೀರ ಆರೋಪವನ್ನು ಮಾಡಿದೆ. ಹಾಗಾದ್ರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಗ್ಗೆ ಕಮಲ ಪಾಳಯ ಮಾಡಿದ ಆರೋಪ ಏನು?
ರಾಜ್ಯದಲ್ಲಿ ಹಲವು ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತಿಕ್ಕಾಟ ಮಾಮೂಲು. ಆದರೆ ಇದೀಗ ಮತ್ತೊಂದು ವಿಚಾರಕ್ಕೆ ಕಿಚ್ಚು ಹೊತ್ತಿಕೊಂಡಿದೆ. ಅದರಲ್ಲೂ ಶಿವಮೊಗ್ಗದ ಪರಿಸ್ಥಿತಿ ಬಗ್ಗೆ ಇಬ್ಬರ ನಡುವೆ ಕಿಡಿ ಹೊತ್ತಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿಯ ರಾಜ್ಯ ಘಟಕ, ಕಾಂಗ್ರೆಸ್ ನಾಯಕರ ವಿರುದ್ಧ ಗಂಭೀರ ಆರೋಪ ಹೊರಿಸಿದೆ. ಹಾಗಾದರೆ ಇದೀಗ ಬಿಜೆಪಿ ಮಾಡಿರುವ ಟ್ವೀಟ್‌ನಲ್ಲಿ ಹೊರಿಸಿರುವ ಆರೋಪವಾದರೂ ಏನು? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

'ಶಿವಮೊಗ್ಗದಲ್ಲಿ ಈ ಹಿಂದೆ ವಿಧ್ವಂಸಕ...'
ಇಂದು ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, 'ಶಿವಮೊಗ್ಗದಲ್ಲಿ ಈ ಹಿಂದೆ ವಿಧ್ವಂಸಕ ಕೃತ್ಯ ಎಸಗಿದ PFI ಗೂಂಡಾಗಳನ್ನೆಲ್ಲಾ ಬಿಡುಗಡೆಗೊಳಿಸಿದ್ದು ಕಾಂಗ್ರೆಸ್ ಸರ್ಕಾರ! ಪೊಲೀಸ್ ಅಧಿಕಾರಗಳ ಮೇಲೆಯೇ ಮತಾಂಧರು ಕಲ್ಲುತೂರಾಟ ನಡೆಸಿದ್ದು, ಅನೇಕ ಪೊಲೀಸರೇ ಗಾಯಗೊಂಡಿದ್ದರೂ ಅದರ ಬಗ್ಗೆ ಚಕಾರವೆತ್ತದ ನಿಮ್ಮ ಸರ್ಕಾರಕ್ಕೆ ಕನಿಷ್ಟ ಮಾನ ಮರ್ಯಾದೆ ಉಳಿದಿದೆಯೇ?' ಎಂದು ಪ್ರಶ್ನೆ ಮಾಡಿದೆ.
ಶಿವಮೊಗ್ಗದಲ್ಲಿ ಈ ಹಿಂದೆ ವಿಧ್ವಂಸಕ ಕೃತ್ಯ ಎಸಗಿದ PFI ಗೂಂಡಾಗಳನ್ನೆಲ್ಲಾ ಬಿಡುಗಡೆಗೊಳಿಸಿದ್ದು ಕಾಂಗ್ರೆಸ್ ಸರ್ಕಾರ!
— BJP Karnataka (@BJP4Karnataka) October 2, 2023
ಪೊಲೀಸ್ ಅಧಿಕಾರಗಳ ಮೇಲೆಯೇ ಮತಾಂಧರು ಕಲ್ಲುತೂರಾಟ ನಡೆಸಿದ್ದು, ಅನೇಕ ಪೊಲೀಸರೇ ಗಾಯಗೊಂಡಿದ್ದರೂ ಅದರ ಬಗ್ಗೆ ಚಕಾರವೆತ್ತದ ನಿಮ್ಮ ಸರ್ಕಾರಕ್ಕೆ ಕನಿಷ್ಟ ಮಾನ ಮರ್ಯಾದೆ ಉಳಿದಿದೆಯೇ?
ನಮ್ಮ ದಕ್ಷ, ಸಮರ್ಥ, ಶಕ್ತಿಯುತ… https://t.co/iv4qljt15Y
ಹಾಗೇ ವಾಗ್ದಾಳಿ ಮುಂದುವರಿಸಿದ ಬಿಜೆಪಿ, 'ನಮ್ಮ ದಕ್ಷ, ಸಮರ್ಥ, ಶಕ್ತಿಯುತ ಪೊಲೀಸ್ ಅಧಿಕಾರಿಗಳ ಕೈ ಕಟ್ಟಿ ಹಾಕಿ ಮೂಲಭೂತವಾದಿಗಳ ತಾಳಕ್ಕೆ ಕುಣಿಯುವ ಹಾಗೆ ಮಾಡಿರುವ ನಿಮ್ಮ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಯಾವ ನೈತಿಕತೆಯೂ ಉಳಿದಿಲ್ಲ! ಇನ್ನು ನಾಲ್ಕು ಪೈಸೆಯ ಗೌರವವನ್ನೂ ಉಳಿಸಿಕೊಳ್ಳದ ನಿಮ್ಮ ಸರ್ಕಾರದ ವಿರುದ್ಧ ಯಾವ ಸಂಚಿನ ಅಗತ್ಯವೂ ಇಲ್ಲ. ಗೆದ್ದಲು ಹಿಡಿದ ಮರದ ಅವಸಾನ ಕಟ್ಟಿಟ್ಟ ಬುತ್ತಿ.' ಎಂದಿದೆ.
ಶಿವಮೊಗ್ಗದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಕಿಡಿಗೇಡಿಗಳ ಪ್ರಯತ್ನಕ್ಕೆ ಪೊಲೀಸ್ ಅಧಿಕಾರಿಗಳು ಸಮರ್ಥ ರೀತಿಯಲ್ಲಿ ತಡೆದಿದ್ದಾರೆ.
— Karnataka Congress (@INCKarnataka) October 2, 2023
ಕೋಮು ಸಂಘರ್ಷದ ಮೂಲಕ ಕಾಂಗ್ರೆಸ್ ಸರ್ಕಾರದ ಹೆಸರು ಕೆಡಿಸಲು @BJP4Karnataka ಹಲವು ಬಗೆಯಲ್ಲಿ ಷಡ್ಯಂತ್ರ ನಡೆಸಿದೆ, ಇದನ್ನು ನಮ್ಮ ಪೊಲೀಸರು ಸಮರ್ಥವಾಗಿ ನಿಭಾಯಿಸುವ ಶಕ್ತಿ ಹೊಂದಿದ್ದಾರೆ.
ಬಿಜೆಪಿಯ ಯಾವ…
ಕರ್ನಾಟಕ ಕಾಂಗ್ರೆಸ್ ಹೇಳಿದ್ದು ಏನು?
ಇನ್ನು ಬಿಜೆಪಿಗೂ ಮೊದಲು ಟ್ವೀಟ್ ಮಾಡಿದ್ದ ಕರ್ನಾಟಕ ಕಾಂಗ್ರೆಸ್ ಈ ರೀತಿ ಹೇಳಿತ್ತು, 'ಶಿವಮೊಗ್ಗದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಕಿಡಿಗೇಡಿಗಳ ಪ್ರಯತ್ನಕ್ಕೆ ಪೊಲೀಸ್ ಅಧಿಕಾರಿಗಳು ಸಮರ್ಥ ರೀತಿಯಲ್ಲಿ ತಡೆದಿದ್ದಾರೆ. ಕೋಮು ಸಂಘರ್ಷದ ಮೂಲಕ ಕಾಂಗ್ರೆಸ್ ಸರ್ಕಾರದ ಹೆಸರು ಕೆಡಿಸಲು @BJP4Karnataka ಹಲವು ಬಗೆಯಲ್ಲಿ ಷಡ್ಯಂತ್ರ ನಡೆಸಿದೆ, ಇದನ್ನು ನಮ್ಮ ಪೊಲೀಸರು ಸಮರ್ಥವಾಗಿ ನಿಭಾಯಿಸುವ ಶಕ್ತಿ ಹೊಂದಿದ್ದಾರೆ. ಬಿಜೆಪಿಯ ಯಾವ ಸಂಚುಗಳನ್ನು ಯಶಸ್ವಿಯಾಗಲು ಬಿಡುವುದಿಲ್ಲ.' ಎಂದಿತ್ತು ಕಾಂಗ್ರೆಸ್, ಇದೀಗ ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡಿದೆ.












Click it and Unblock the Notifications