ಕರ್ನಾಟಕದ ಬಿಜೆಪಿ - ಕಾಂಗ್ರೆಸ್ ನಡುವೆ ನೀರು ಹಂಚಿಕೆ ವಿಚಾರಕ್ಕೆ ಜಟಾಪಟಿ!
ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ನಡುವೆ ಮತ್ತೊಂದು ಸುತ್ತಿನ ವಾಕ್ಸಮರ ಶುರುವಾಗಿದೆ. ಎರಡೂ ಪಕ್ಷಗಳು ಟ್ವೀಟ್‌ವಾರ್ ಶುರು ಮಾಡಿಕೊಂಡಿದ್ದು. ಎರಡೂ ಪಕ್ಷಗಳ ವಾಕ್ಸಮರ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. ಮೊದಲಿಗೆ ಕೇರಳ, ತಮಿಳುನಾಡು, ತೆಲಂಗಾಣಕ್ಕೆ ಉಪಕಾರಿಯಾಗಿ, ಕರ್ನಾಟಕಕ್ಕೆ ದ್ರೋಹ ಬಗೆದಿರುವ ನಾಡದ್ರೋಹಿ ರಾಜ್ಯ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಇದಕ್ಕೆ 7 ಪ್ರಶ್ನೆಗಳ ಮೂಲಕ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ರಾಜ್ಯದಲ್ಲಿ ಬಿರುಬಿಸಿಲು ಇದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ನೀರಿನ ಸಮಸ್ಯೆ ಎದುರಾಗುವ ಆತಂಕ ಇದೆ. ಇದೀಗ ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಯೇ ನೀರಿನ ವಿಚಾರವಾಗಿ ಜಗಳ ನಡೆದಿದೆ. ಅದೇನು ಎನ್ನುವ ವಿವರ ನೋಡೋಣ.

ರಾಜ್ಯ ಕಾಂಗ್ರೆಸ್ ಸರ್ಕಾರವು ನೆರೆಯ ತೆಲಂಗಾಣಕ್ಕೆ ನೀರು ಬಿಟ್ಟಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಬಿಜೆಪಿ - ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ. ಇದಕ್ಕೆ ಕಾಂಗ್ರೆಸ್ ಪಕ್ಷವು 7 ಪ್ರಶ್ನೆಗಳನ್ನು ಕೇಳಿದೆ. ಅಲ್ಲದೆ ನಾವು ಜನಪರ ಆಡಳಿತ ನೀಡುತ್ತಿದ್ದೇವೆ ಎಂದೂ ಕಾಂಗ್ರೆಸ್ ಸರ್ಕಾರ ಹೇಳಿಕೊಂಡಿದೆ.
ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತವನ್ನು ಸಹಿಸದೆ ಹೊಟ್ಟೆ ಉರಿಯಿಂದ ಕಪೋಕಲ್ಪಿತ ಕಥೆಗಳನ್ನು ಸೃಷ್ಟಿಸಿ ನಂಜು ಕಾರುತ್ತಿರುವ ರಾಜ್ಯ ಬಿಜೆಪಿ ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ, ಅನುದಾನ ಕಡಿತದ ಅನ್ಯಾಯದ ಬಗ್ಗೆ ಏಕೆ ತುಟಿ ಬಿಚ್ಚುತ್ತಿಲ್ಲವೇಕೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

* ಮುಂದುವರಿದು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನೆರೆ, ಬರ ಪರಿಹಾರದಲ್ಲಿ ಮೋಸವಾದಾಗ ಏಕೆ ಬಾಯ್ತೆರೆಯಲಿಲ್ಲ?
* ಜಿ.ಎಸ್.ಟಿ ಪರಿಹಾರದಲ್ಲಿ ದ್ರೋಹ ಬಗೆದಾಗ ಏಕೆ ಕನ್ನಡಿಗರು ನೆನಪಾಗಲಿಲ್ಲ?
* ಪಿ.ಎಂ ಕೇರ್ಸ್ ಫಂಡ್‌ನಲ್ಲಿ ಮೋಸವಾದಾಗ ಧಮ್ಮು ತಾಕತ್ತು ತೋರಿಸಲಿಲ್ಲ?
* ಮೇಕೆದಾಟು, ಕಳಸಾ ಬಂಡೂರಿ, ಭದ್ರಾಮೇಲ್ದಂಡೆ ಯೋಜನೆಯಂತಹ ಪ್ರಮುಖ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಬಳಿ ಏಕೆ ಧ್ವನಿ ಎತ್ತಲಿಲ್ಲ?
ಕೇರಳ, ತಮಿಳುನಾಡು, ತೆಲಂಗಾಣಕ್ಕೆ ಉಪಕಾರಿಯಾಗಿ, ಕರ್ನಾಟಕಕ್ಕೆ ದ್ರೋಹ ಬಗೆದಿರುವ ನಾಡದ್ರೋಹಿ @INCKarnataka !!#CongressFailsKarnataka pic.twitter.com/hF2lLTK7Pq
— BJP Karnataka (@BJP4Karnataka) March 4, 2025
* ನೀವು ಅಧಿಕಾರದಲ್ಲಿದ್ದಾಗ ನಿಮ್ಮದೇ ಪಕ್ಷದ ಶಾಸಕರಾಗಿದ್ದ ಶಿವರಾಜ್ ಪಾಟೀಲ್ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸುತ್ತೇವೆ ಎಂದು ನಾಡದ್ರೋಹಿ ಹೇಳಿಕೆ ಕೊಟ್ಟಾಗಲೂ ನೀವು ಮೌನವಹಿಸಿದ್ದೇಕೆ?
* ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಂದಿನ ನಿಮ್ಮದೇ ಸರ್ಕಾರ ಅಗತ್ಯ ಅನುದಾನವನ್ನೇಕೆ ಕೊಡಲಿಲ್ಲ?
* ಕೋತಿ ತಾನು ತಿಂದು ಮೇಕೆ ಮೂತಿ ಒರೆಸಿತು ಎಂಬ ಮಾತಿನಂತೆ ನಾಡು, ನುಡಿ, ನೆಲ, ಜಲದ ರಕ್ಷಣೆಯ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದ ಬಿಜೆಪಿಗರು ಮೋದಿಯನ್ನು ಮೆಚ್ಚಿಸುವ ಭರದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಮರೆತು ನಾಡಿಗೆ ದ್ರೋಹ ಬಗೆದು, ಈಗ ವಿಶ್ವಮಟ್ಟದಲ್ಲಿ ಶ್ಲಾಘನೆ ಪಡೆದ ಗ್ಯಾರಂಟಿ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿರುವುದನ್ನು ನಾಡಿನ ಜನತೆ ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿದೆ. ಇದೀಗ ಈ ಎರಡೂ ಟ್ವೀಟ್‌ಗಳು ವೈರಲ್ ಆಗಿವೆ.












Click it and Unblock the Notifications