Karnataka Bandh: ಕಮಲ್ ಹಾಸನ್ ವಿವಾದ: ಕರ್ನಾಟಕ ಬಂದ್‌ಗೆ ಮುಂದಾದ ಕನ್ನಡಪರ ಸಂಘಟನೆಗಳು!
ನಟ ಕಮಲ್ ಹಾಸನ್ ವಿವಾದವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಇದರ ನಡುವೆ ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ಮುಂದಾಗಿದೆ. ತಮಿಳು ಭಾಷೆಯು ಕನ್ನಡದ ತಾಯಿ ಭಾಷೆಯಾಗಿದೆ. ತಮಿಳ್‌ನಿಂದಲೇ ಕನ್ನಡ ಬಂದಿದ್ದು ಅಂತ ಹೇಳಿರುವ ನಟ ಕಮಲ್ ಹಾಸನ್ ಇಲ್ಲಿಯ ವರೆಗೆ ಕ್ಷಮೆ ಕೇಳಿಲ್ಲ. ಅಲ್ಲದೇ ಅವರ ಹೇಳಿಕೆಗೆ ಸಂಬಂಧಿಸಿದಂತೆ ವಿಷಾದವನ್ನೂ ಅವರು ವ್ಯಕ್ತಪಡಿಸಿಲ್ಲ. ಇದೀಗ ಅವರ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದು. ಕನ್ನಡಿಗರು ಕಮಲ್ ಕ್ಷಮೆ ಕೇಳುವ ವರೆಗೆ ಬಿಡಲ್ಲ ಎಂದು ಹೇಳುತ್ತಿದ್ದು. ಕನ್ನಡಪರ ಸಂಘಟನೆಗಳು ಒಂದಾಗಿ ಇದೀಗ ಕರ್ನಾಟಕ ಬಂದ್‌ಗೆ ಮುಂದಾಗಿವೆ.
ಕನ್ನಡಿಗರನ್ನು ಕೆಣಕುವ ಹೇಳಿಕೆ ಕೊಟ್ಟಿರುವ ಕಮಲ್ ಹಾಸನ್ ಕ್ಷಮೆ ಕೇಳುವ ವರೆಗೆ ಬಿಡುವ ಪ್ರಶ್ನೆಯೇ ಇಲ್ಲ ಅಂತ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ. ಕನ್ನಡ ಭಾಷೆಯ ಉಗಮದ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವ ಕಮಲ್ ಹಾಸನ್ ಅವರನ್ನು ಕ್ಷಮೆ ಕೇಳಿಸದೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಕನ್ನಡಿಗರು ಹೇಳಿದ್ದಾರೆ. ಅವರು ಅವರ ಹೇಳಿಕೆಯನ್ನು ಪದೇ ಪದೇ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಹಾಗೂ ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸದೆ ಇರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡಪರ ಹೋರಾಟಗಾರರು ಇದೀಗ ಕರ್ನಾಟ ಬಂದ್‌ಗೆ ಕರೆ ನೀಡಲು ಮುಂದಾಗಿದ್ದಾರೆ. ಕಮಲ್ ಹಾಸನ್ ಅವರು ನಟಿಸಿರುವ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಇದೀಗ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡಪರ ಸಂಘಟನೆಗಳು ಒಂದೊಮ್ಮೆ ಈ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಿದರೆ, ಚಿತ್ರಮಂದಿರಗಳಿಗೆ ಬೆಂಕಿ ಹಚ್ಚಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಇದೇ ಮಾತನ್ನು ವಾಟಾಳ್ ನಾಗರಾಜ್ ಅವರು ಸಹ ಹೇಳಿದ್ದಾರೆ.
ಕರ್ನಾಟಕ ಬಂದ್: ನಟ ಕಮಲ್ ಹಾಸನ್ ಅವರು ಕೂಡಲೇ ಅವರು ನೀಡಿರುವ ಹೇಳಿಕೆಗೆ ಕ್ಷಮೆ ಕೇಳಬೇಕು ಇಲ್ಲದಿದ್ದರೆ, ಅವರ ಸಿನಿಮಾ ಬಿಡುಗಡೆಗೆ ಬಿಡಲ್ಲ. ಕನ್ನಡಪರ ಸಂಘಟನೆಗಳು ಈ ವಿಚಾರದಲ್ಲಿ ಒಂದಾಗಿದ್ದೇವೆ. ಆದರೆ, ರಾಜಕಾರಣಿಗಳು ಇನ್ನೂ ಬಂದಿಲ್ಲ. ಬಿಜೆಪಿ ಅಥವಾ ಕಾಂಗ್ರೆಸ್ ನಾಯಕರು ಈ ವಿಚಾರವನ್ನು ಗಂಭೀರವಾಗಿ ವಿರೋಧ ಮಾಡಿಲ್ಲ ಅಂತ ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ.
ಹುಷಾರ್ ಇದು ಭಾಷೆಯ ಪ್ರಶ್ನೆ. ನೀವು ಪಕ್ಷ ಎಲ್ಲವನ್ನೂ ಬಿಟ್ಟು ಬೀದಿಗೆ ಬರಬೇಕು. ಪಾರ್ಟಿಗಳು ನಿರ್ಣುಯ ಮಾಡಬೇಕು ಹೋರಾಟಕ್ಕಾಗಿ ಬೀದಿಗೆ ಇಳಿಯಬೇಕು ಎಂದು ಆಗ್ರಹಿಸಿದ್ದಾರೆ. ನಾವೆಲ್ಲಾ (ಕನ್ನಡಪರ ಸಂಘಟನೆಗಳು) ನೋಡುತ್ತೇವೆ. ಯಾವ ಹಂತಕ್ಕೆ ಹೋಗಲಿದೆ ಎಂದು ನೋಡಲಿದ್ದೇವೆ. ಇದೇ ಪರಿಸ್ಥಿತಿ ಮುಂದುವರಿದರೆ, ಕರ್ನಾಟಕ ಬಂದ್ ಮಾಡಲಾಗುವುದು ಅಂತ ಹೇಳಿದ್ದಾರೆ. ಇಷ್ಟರಲ್ಲೇ ಈ ವಿಚಾರದಲ್ಲಿ ನಿರ್ಣಯ ತೆಗೆದುಕೊಳ್ಳಲಿದ್ದೇವೆ. ನಾವು ಕನ್ನಡ ಭಾಷೆಯ ವಿಚಾರದಲ್ಲಿ ಜೈಲಿಗೆ ಹೋಗುವುದಕ್ಕೂ ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ. ಭಾಷೆಯ ವಿಚಾರದಲ್ಲಿ ಎಲ್ಲರೂ ಬೀದಿಗೆ ಇಳಿದು ಹೋರಾಟ ಮಾಡಬೇಕಿದೆ ಅಂತಲೂ ಅವರು ಹೇಳಿದ್ದಾರೆ.












Click it and Unblock the Notifications