ವಾಟಾಳ್ ಕರೆ ನೀಡಿದ್ದ ಕರ್ನಾಟಕ ಬಂದ್ ದಿನಾಂಕ ಬದಲು

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ11 : ಮಹದಾಯಿ ನದಿ ನೀರು ವಿಚಾರವಾಗಿ ಕರೆ ನೀಡಲಾಗಿದ್ದ ಬಂದ್ ದಿನಾಂಕ ಬದಲಾಗಿದೆ. ಜನವರಿ 27 ರ ಬದಲಾಗಿ ಜ.25ರಂದು ಬಂದ್ ಗೆ ಕರೆ ನೀಡಲಾಗಿದೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ
ವಾಟಾಳ್ ನಾಗರಾಜ್ ತಿಳಿಸಿದರು.

ಮಹದಾಯಿ ನದಿ ನೀರು ವಿಚಾರದಲ್ಲಿ ಕೇಂದ್ರ ಸರಕಾರ ಕರ್ನಾಟಕದ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಈ ಬಂದ್ ಆಚರಿಸಲಾಗುತ್ತಿದೆ.

ಪ್ರಧಾನಿ ಮೋದಿ ರಾಜ್ಯಕ್ಕೆ ಬರುವ ಮುನ್ನಾ ದಿನ (ಜ 27) 'ಕರ್ನಾಟಕ ಬಂದ್'

ಸಾಲು ಸಾಲು ರಜೆ ಇರುವ ಹಿನ್ನೆಲೆಯಲ್ಲಿ ಬಂದ್ ದಿನಾಂಕ ಬದಲು, ಜ. 28ರಂದು ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜ.27ಕ್ಕೆ ಬಂದ್ ಆಚರಿಸಲು ನಿಶ್ಚಯಿಸಲಾಗಿತ್ತು.

Karnataka bandh prepone to Jan 25

ಆದರೆ, ಆ ವೇಳೆ ಸಾಲು ಸಾಲು ರಜೆಗಳು ಇರುವುದರಿಂದ ದಿನಾಂಕವನ್ನು ಬದಲಿಸಿ ಜ. 25 ಫಿಕ್ಸ್ ಮಾಡಲಾಗಿದೆ. ಅಂದು ಗುರುವಾರ ಟೌನ್​ಹಾಲ್​ನಿಂದ ಫ್ರೀಡಂ ಪಾರ್ಕ್​ವರೆಗೂ ಬೃಹತ್ ಜಾಥಾ ನಡೆಯಲಿದೆ.

ಅಂದು ಕನ್ನಡಿಗರ ಬೃಹತ್ ಶಕ್ತಿ ಪ್ರದರ್ಶನವಾಗಲಿದೆ. ಅಂದು ಕನ್ನಡ ಚಿತ್ರರಂಗ ಕೂಡ ಸ್ತಬ್ಧಗೊಳ್ಳಲಿದೆ. ಅಂದು ರಾಜ್ಯದಲ್ಲಿ ಚಿತ್ರ ಪ್ರದರ್ಶನವಾಗಲೀ ಚಿತ್ರೀಕರಣವಾಗಲೀ ನಡೆಯುವುದಿಲ್ಲ. ಸ್ಯಾಂಡಲ್ವುಡ್ ಸ್ಟಾರ್ಸ್ ಮತ್ತು ಚಿತ್ರರಂಗ ಗಣ್ಯರು ಈ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಕ್ರಾಂತಿ ವಿಶೇಷ ಪುಟ

ಗೋವಾ ಮುಖ್ಯಮಂತ್ರಿ ನಾಲಾಯಕ್: ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರು ಒಬ್ಬ ನಾಲಾಯಕ್. ಬೇಜವಾಬ್ದಾರಿ ಮುಖ್ಯಮಂತ್ರಿ. ಮಹದಾಯಿ ವಿಚಾರದಲ್ಲಿ ಯಡಿಯೂರಪ್ಪ ಮಾಡಿದ್ದು ತಪ್ಪು. ಗೋವಾ ಸಿಎಂ ಅವರು ಯಡಿಯೂರಪ್ಪಗೆ ಪತ್ರ ಬರೆದದ್ದು ತಪ್ಪು. ಯಾವ ಆಧಾರದ ಮೇಲೆ ಅವರು ಪಕ್ಷದ ಮುಖಂಡರಿಗೆ ಪತ್ರ ಬರೆದೆಂದು ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು.

ಮೋದಿಯ ಗುಲಾಮರಲ್ಲ: ಕರ್ನಾಟಕ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆಂದು ವಾಟಾಳ್ ನಾಗರಾಜ್ ಆರೋಪಿಸಿದರು. ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆಗಳನ್ನು ಪ್ರಧಾನಿ ಕಡೆಗಣಿಸಿದ್ದಾರೆ. ಕರ್ನಾಟಕ ರಾಜ್ಯದವರೇನು ಮೋದಿಯ ಗುಲಾಮರಲ್ಲ. ಮೋದಿಗೆ ತಾಕತ್ತಿದ್ದರೆ ಗೋವಾ ಮುಖ್ಯಮಂತ್ರಿಗಳನ್ನು ವಜಾ ಮಾಡಲಿ ಎಂದು ಕನ್ನಡ ಹೋರಾಟಗಾರ ಆಗ್ರಹಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Following the continuous holidays in month end, Karnataka bandh on January 27 is preponed to January 25 to urge Mahadayi row resolve.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ