ಸೆ.9ರ ಕರ್ನಾಟಕ ಬಂದ್ ಬಿಸಿ ಎಲ್ಲಿಗೆ ತಟ್ಟಲಿದೆ?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 07 : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡ ಒಕ್ಕೂಟ ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಬೆಂಗಳೂರು ಮತ್ತು ಮೈಸೂರು ಭಾಗಕ್ಕೆ ಬಂದ್ ಬಿಸಿ ಜೋರಾಗಿ ತಟ್ಟಲಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ಉತ್ತರ ಕರ್ನಾಟಕ ಭಾಗದಕ್ಕಿಂತ ಬೆಂಗಳೂರು, ಮೈಸೂರು ಭಾಗದಲ್ಲಿ ಬಂದ್ ತೀವ್ರತೆ ಹೆಚ್ಚಾಗಿರಲಿದೆ ಎಂಬುದು ಗುಪ್ತಚರ ಇಲಾಖೆಯ ಮಾಹಿತಿ. ಕನ್ನಡ ಒಕ್ಕೂಟ ಸಂಪೂರ್ಣ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಪ್ರತಿಯೊಬ್ಬರೂ ಬಂದ್‌ಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದೆ.[ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್]

Karnataka bandh : Essential services to be hit badly

ಮಂಡ್ಯದಲ್ಲಿ ಎರಡು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್ 9ರಂದು ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆಯೇ? ಎಂದು ಕಾದು ನೋಡಬೇಕು. ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ಮಂಡ್ಯದಲ್ಲಿ ಸರಣಿ ಪ್ರತಿಭಟನೆಗಳು ನಡೆಯತ್ತಿವೆ.[ಬಂದ್, ಬಕ್ರೀದ್, ಗಣೇಶ ಚತುರ್ಥಿ...ಪೊಲೀಸರಿಗೆ ಬಿಡುವಿಲ್ಲ]

ಕನ್ನಡ ಒಕ್ಕೂಟ ಕರೆ ನೀಡಿರುವ ಬಂದ್‌ಗೆ ಬೆಂಗಳೂರಿನಲ್ಲಿ ಯಾವಾಗಲೂ ಬೆಂಬಲ ಸಿಗುತ್ತದೆ. ಆದ್ದರಿಂದ, ಬೆಂಗಳೂರು ನಗರದಲ್ಲಿ ಶುಕ್ರವಾರ ಅಂಗಡಿ, ಹೋಟೆಲ್, ಪೆಟ್ರೋಲ್ ಬಂಕ್ ಬಾಗಿಲು ಮುಚ್ಚುವ ಸಾಧ್ಯತೆ ಇದೆ.[ಮಂಡ್ಯದಲ್ಲಿ ಕಾವೇರಿ ಹೋರಾಟ : ಚಿತ್ರಗಳು]

ಮಂಡ್ಯ, ಮೈಸೂರು, ರಾಮನಗರ, ಶ್ರೀರಂಗಪಟ್ಟಣ, ಮದ್ದೂರು ಮುಂತಾದ ಕಡೆ ಬಂದ್ ಬಿಸಿ ಜೋರಾಗಿ ತಟ್ಟಲಿದೆ. ಶಾಲಾ-ಕಾಲೇಜು ಮತ್ತು ವ್ಯಾಪಾರಿ ಮಳಿಗೆಗಳು ಒಂದು ದಿನದ ಮಟ್ಟಿಗೆ ಬಾಗಿಲು ಮುಚ್ಚಲಿವೆ. ಬೆಂಗಳೂರಿನಲ್ಲಿ ಬಂದ್ ನಡೆದರೆ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಆದ್ದರಿಂದ, ಉದ್ಯಾನ ನಗರಿಯಲ್ಲಿ ಬಂದ್ ಆಚರಣೆ ಮಾಡಲಾಗುತ್ತದೆ.

ಸೆ.9ರಂದು ಬೆಂಗಳೂರಿನಿಂದ ಯಾವುದೇ ವಾಹನಗಳು ತಮಿಳುನಾಡಿಗೆ ತೆರಳುವುದಿಲ್ಲ ಮತ್ತು ಅಲ್ಲಿಂದ ಯಾವುದೇ ವಾಹನಗಳು ಬೆಂಗಳೂರಿಗೆ ಆಗಮಿಸುವುದಿಲ್ಲ. ಕೆಎಸ್ಆರ್‌ಟಿಸಿಯೂ ತಮಿಳುನಾಡಿಗೆ ಬಸ್ ಸೇವೆಯನ್ನು ಶುಕ್ರವಾರ ಸ್ಥಗಿತಗೊಳಿಸುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
On September 9th the Bengaluru-Mysuru region will be the worst hit and these parts it would be total, the state intelligence bureau says. The areas in Northern Karnataka are unlikely to be affected by the bandh called by famers's unions and activists protesting the release of Cauvery Water to Tamil Nadu.
Please Wait while comments are loading...