ಮುದ್ರಾಂಕ ಶುಲ್ಕ ಇಳಿಕೆ, ಫ್ಲಾಟ್ ಖರೀದಿದಾರರಿಗೆ ಶುಭ ಸುದ್ದಿ ಕೊಟ್ಟ ಸರ್ಕಾರ

ಬೆಂಗಳೂರು, ಸೆಪ್ಟೆಂಬರ್ 21: ಬೆಂಗಳೂರಿನಲ್ಲಿ ಫ್ಲಾಟ್ ಖರೀದಿದಾರರಿಗೆ ಬೊಮ್ಮಾಯಿ ಸರ್ಕಾರ ಶುಭ ಸುದ್ದಿ ಕೊಟ್ಟಿದೆ. ಮುದ್ರಾಂಕ ಶುಲ್ಕ ಕಾಯ್ದೆ 1957ಕ್ಕೆ ತಿದ್ದುಪಡಿ ತರಲಾಗಿದ್ದು, ವಿಧಾನಸಭೆ ಅಧಿವೇಶನದಲ್ಲಿ ವಿಧೇಯಕ ಮಂಡನೆಯಾಗಿದೆ.

ಯಡಿಯೂರಪ್ಪ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಮುದ್ರಾಂಕ ಶುಲ್ಕ ತಗ್ಗಿಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.

2021-22ನೇ ಸಾಲಿನ ಬಜೆಟ್‌ ವೇಳೆ 35ರಿಂದ 45 ಲಕ್ಷ ರು. ಮೌಲ್ಯದ ಫ್ಲ್ಯಾಟ್‌ಗಳ ನೋಂದಣಿ ವೇಳೆಯೂ ಮುದ್ರಾಂಕ ಶುಲ್ಕವನ್ನು 5ರಿಂದ ಶೇ.3ಕ್ಕೆ ಇಳಿಕೆ ಮಾಡುವ ಬಗ್ಗೆ ಘೋಷಿಸಲಾಗಿತ್ತು. ಅದರಂತೆ, ಮೊದಲ ಬಾರಿ ನೋಂದಣಿಯ ಮುದ್ರಾಂಕ ಶುಲ್ಕ ಕಡಿತಗೊಳಿಸಲಾಗಿದೆ.

Karnataka Assembly passes Bill slashing stamp duty by 2% on flats priced below Rs 45 lakh

ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು 20 ಲಕ್ಷ ರು.ವರೆಗಿನ ಮೌಲ್ಯದ ಫ್ಲ್ಯಾಟ್‌ಗಳ ಮೊದಲನೇ ನೋಂದಣಿ ವೇಳೆ ಶೇ.5ರಷ್ಟಿರುವ ಮುದ್ರಾಂಕ ಶುಲ್ಕವನ್ನು ಶೇ.2ಕ್ಕೆ ಹಾಗೂ 20ರಿಂದ 35 ಲಕ್ಷ ರು. ಮೌಲ್ಯದ ಫ್ಲ್ಯಾಟ್‌ಗಳ ಮುದ್ರಾಂಕ ಶುಲ್ಕವನ್ನು ಶೇ.5ರಿಂದ 3ಕ್ಕೆ ಇಳಿಕೆ ಮಾಡಿತ್ತು. ಕಳೆದ ಮಾರ್ಚಲ್ಲಿ ಮಂಡಿಸಿದ 2021-22ನೇ ಸಾಲಿನ ಬಜೆಟ್‌ ವೇಳೆ 35ರಿಂದ 45 ಲಕ್ಷ ರು. ಮೌಲ್ಯದ ಫ್ಲ್ಯಾಟ್‌ಗಳ ನೋಂದಣಿ ವೇಳೆಯೂ ಮುದ್ರಾಂಕ ಶುಲ್ಕವನ್ನು 5ರಿಂದ ಶೇ.3ಕ್ಕೆ ಇಳಿಕೆ ಮಾಡುವುದಾಗಿ ಘೋಷಿಸಿತ್ತು. ಈಗ ಅದನ್ನು ಅನುಷ್ಠಾನಕ್ಕೆ ತಂದಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕದ ದೆಸೆಯಿಂದ ಬೆಂಗಳೂರಿನಲ್ಲಿ ಲಕ್ಷಾಂತರ ಫ್ಲಾಟ್ ಗಳು ಮಾರಾಟವಾಗದೆ ಉಳಿದಿವೆ. ಮುದ್ರಾಂಕ ಶುಲ್ಕ ತಗ್ಗಿಸಿರುವುದರಿಂದ, ಮಧ್ಯಮ ವರ್ಗ ಹಾಗೂ ಕೆಳ ಮಧ್ಯಮ ವರ್ಗದ ಜನತೆ ಕಡಿಮೆ ಬಜೆಟ್ ನಲ್ಲಿ ಫ್ಲಾಟ್ ಖರೀದಿಸಲು ಮುಂದಾಗುವ ಅವಕಾಶ ಹೆಚ್ಚಾಗುವ ಸಾಧ್ಯತೆಯಿದೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ 20 ಲಕ್ಷ ರು. ವರೆಗಿನ ಮೌಲ್ಯದ ಫ್ಲ್ಯಾಟ್‌ಗಳ ಮೊದಲನೇ ನೋಂದಣಿ ವೇಳೆ ಶೇ.5ರಷ್ಟಿರುವ ಮುದ್ರಾಂಕ ಶುಲ್ಕವನ್ನು ಶೇ.2ಕ್ಕೆ ಹಾಗೂ 20 ರಿಂದ 35 ಲಕ್ಷ ರು. ಮೌಲ್ಯದ ಫ್ಲ್ಯಾಟ್‌ಗಳ ಮುದ್ರಾಂಕ ಶುಲ್ಕವನ್ನು ಶೇ.5ರಿಂದ 3ಕ್ಕೆ ಇಳಿಕೆ ಮಾಡಲು ನಿರ್ಧರಿಸಲಾಗಿತ್ತು.

ಕ್ರೆಡಾಯ್ ಪ್ರತಿಕ್ರಿಯೆ:
ಆಸ್ತಿ ನೋಂದಣಿಯ ಸ್ಟಾಂಪ್ ಡ್ಯೂಟಿ ಈಗಿರುವ ಶೇ.5ರಿಂದ ಶೇ. 2-1ಕ್ಕೆ ಇಳಿದರೆ ಖರೀದಿದಾರರಿಗೆ ಅನುಕೂಲ ಎಂದು ಕ್ರೆಡಾಯ್, ಬೆಂಗಳೂರಿನ ಕಾರ್ಯದರ್ಶಿ ಸುರೇಶ್ ಹರಿ ಪ್ರತಿಪಾದಿಸಿದ್ದಾರೆ.

ಸಾಮಾನ್ಯವಾಗಿ ಶೇ.70ರಷ್ಟು ಮಾರುಕಟ್ಟೆ ಮೌಲ್ಯದಲ್ಲಿ ಮಾರ್ಗದರ್ಶಿ ಮೌಲ್ಯವನ್ನು ಥಂಬ್ ರೂಲ್‍ನಡಿ ಲೆಕ್ಕಾಚಾರ ಹಾಕಲಾಗುತ್ತದೆ. ಈ ಲೆಕ್ಕಾಚಾರದಲ್ಲೇ ಕೆಲವು ಅಸಮಂಜಸ ಸಂಗತಿಗಳಿವೆ. ಇದು ಕೃತಕ ಭ್ರಾಂತಿ ಹುಟ್ಟಿಸುತ್ತದೆ ಮತ್ತು ಹಾಗಾಗಿ ರಿಯಲ್ ಎಸ್ಟೇಲ್ ಮಾರುಕಟ್ಟೆಯಲ್ಲಿ ಹಣದುಬ್ಬರದ ಒಂದು ಟ್ರೆಂಡ್ ಇರುತ್ತದೆ.

ಹಣದುಬ್ಬರದ ಟ್ರೆಂಡ್ ಮತ್ತು ಹೆಚ್ಚಿನ ಸ್ಟಾಂಪ್ ಡ್ಯೂಟಿ ಶುಲ್ಕ ಇದೆಲ್ಲದರ ಪರಿಣಾಮವಾಗಿ ಖರೀದಿದಾರರು ರಿಜಿಸ್ಟ್ರೇಶನ್‌ಗೆ ಮುಂದೆ ಬರುವುದಿಲ್ಲ. ಆಸ್ತಿಯ ಮೌಲ್ಯದೊಂದಿಗೆ ನೋಂದಣಿ ಶುಲ್ಕ ಜೋಡಿಸವುದನ್ನು ತಪ್ಪಿಸಬೇಕು. ನೋಂದಣಿ ಶುಲ್ಕವನ್ನು ಸಾಮಾನ್ಯವಾಗಿ ಡಾಕ್ಯುಮೆಂಟೇಶಶನ್ ಗಾಗಿ ವಿಧಿಸಲಾಗುತ್ತದೆ. ಇದು ಎಲ್ಲಾ ರೀತಿಯ ಆಸ್ತಿಯ ವಿಧ, ಮೌಲ್ಯ ಹಾಗೂ ಗಾತ್ರಕ್ಕೂ ಒಂದೇ ಆಗಿರುತ್ತದೆ. ಹಾಗಿದ್ದ ಮೇಲೆ ಯಾಕಾಗಿ ನೋಂದಣಿ ಶುಲ್ಕವನ್ನು ಆಸ್ತಿಯ ಮೌಲ್ಯದ ಶೇಕಡಾವಾರು ಲೆಕ್ಕಾಚಾರ ಹಾಕಲಾಗುತ್ತದೆ'' ಎಂದು ಸುರೇಶ್ ಹರಿ ಪ್ರಶ್ನಿಸಿದ್ದಾರೆ.

ಮುದ್ರಾಂಕ ಶುಲ್ಕ ಕಾಯ್ದೆ ತಿದ್ದುಪಡಿ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಂಬಿ ಪಾಟೀಲ್, ಇದಕ್ಕಿಂತ ಇನ್ನೂ ಹೆಚ್ಚಿನ ಕೊಡುಗೆ ಜನತೆಗೆ ಸಿಗಬೇಕಿದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಮಾದರಿ ಅನುಸರಿಸುವುದು ಉತ್ತಮ, ಬೆಲೆ ಸಮರದ ನಡುವೆ ಮುದ್ರಾಂಕ ಶುಲ್ಕ ತಗ್ಗಿಸಿ, ಖರೀದಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದಿದ್ದಾರೆ.

''ಅಧಿಕಾರಿಗಳ ಜೊತೆ ಮಾರುಕತೆ ನಡೆಸಿ, ಮಾರ್ಗದರ್ಶಿ ಮೌಲ್ಯಕ್ಕನುಗುಣವಾಗಿ ಮುದ್ರಾಂಕ ಶುಲ್ಕ ತಗ್ಗಿಸಲಾಗಿದೆ'' ಎಂದು ಸಚಿವ ಅಶೋಕ್ ಹೇಳಿದರು.

Recommended Video

      RCB ಸತತ ಮೂರನೇ ಬಾರಿಗೆ KKR ವಿರುದ್ಧ ಹೀನಾಯವಾಗಿ ಎಡವಿದೆ | Oneindia Kannada

      ಜನರು ತಮ್ಮದೇ ಸ್ವಂತ ಜಮೀನಿನಲ್ಲಿ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳಲು ಬೇಕಾದ ಅನುಕೂಲವನ್ನು ಕಲ್ಪಿಸುವಂತೆ ಕಾಂಗ್ರೆಸ್ ಮುಖಂಡರಾದ ಡಿಕೆ ಶಿವಕುಮಾರ್ ಹಾಗೂ ರಮೇಶ್ ಕುಮಾರ್ ಆಗ್ರಹಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+