ಸಚಿವ ಖಮರುಲ್ ಇಸ್ಲಾಂ ರಾಜೀನಾಮೆಗೆ ಸದನದಲ್ಲಿ ಪಟ್ಟು

ಬೆಂಗಳೂರು, ಜೂ. 27 : ಮುಂಗಾರು ಅಧಿವೇಶನದ ಐದನೇ ದಿನ ಪ್ರತಿಪಕ್ಷಗಳು ಸದನದ ಹಕ್ಕುಚ್ಯುತಿ ಮಾಡಿರುವ ಆರೋಪ ಎದುರಿಸುತ್ತಿರುವ ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ಅವರ ರಾಜೀನಾಮೆಗೆ ಒತ್ತಾಯಿಸಿವೆ. ಶುಕ್ರವಾರದ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಖಮರುಲ್ ಇಸ್ಲಾಂ ಅವರು ಜನರನ್ನು ತಪ್ಪುದಾರಿಗೆ ಎಳೆದಿದ್ದಾರೆ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಸಚಿವ ಖಮರುಲ್ ಇಸ್ಲಾಂ ತಮ್ಮ ವಿರುದ್ಧದ ಆರೋಪಗಳ ಕುರಿತು ಹೇಳಿಕೆ ನೀಡಲು ಮುಂದಾದಾಗ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಬಿಜೆಪಿಯ ಸಿ.ಟಿ.ರವಿ, ಸುನೀಲ್‌ ಕುಮಾರ್ ಮೊದಲಾದವರು ಇಸ್ಲಾಂ ಅವರು ಹೇಳಿಕೆ ನೀಡುವುದು ಬೇಡ ಎಂದರು.

Assembly Monsoon session

ಸದನದಲ್ಲಿ ಮಾತನಾಡಿದ ಸಿ.ಟಿ.ರವಿ ಅವರು, ಸಚಿವರು ತಾವಾಗಿಯೇ ರಾಜೀನಾಮೆ ಕೊಟ್ಟು ರಾಜಕೀಯದಲ್ಲಿ ಒಳ್ಳೆಯ ಸಂಪ್ರದಾಯಕ್ಕೆ ನಾಂದಿ ಹಾಡಬೇಕಿತ್ತು. ವಿರೋಧ ಪಕ್ಷಗಳು ಒತ್ತಾಯ ಮಾಡಿದರೂ ರಾಜೀನಾಮೆ ಕೊಡದೆ ಇರುವುದು ಸರಿಯಲ್ಲ ಎಂದು ಹೇಳಿದರು. [ಗುರುವಾರದ ವಿಧಾನಸಭೆ ಕಲಾಪದ ಮುಖ್ಯಾಂಶಗಳು]

ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಸಚಿವರು ಸದನದಲ್ಲಿ ಉತ್ತರ ಕೊಟ್ಟರೆ ತಪ್ಪು ಸಂದೇಶ ಹೋಗುತ್ತದೆ. ಹಕ್ಕು ಚ್ಯುತಿ ಮಾಡಿರುವ ಸಚಿವರು ಉತ್ತರ ಹೇಳಿದರೆ ಹೇಗೆ? ಸ್ವಲ್ಪ ಕಡಿವಾಣ ಹಾಕಿ ಎಂದು ಮನವಿ ಮಾಡಿಕೊಂಡರು. ಪ್ರತಿಪಕ್ಷದವರನ್ನು ಸಮಾಧಾನಪಡಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಅವರು ಎಲ್ಲಿಯವರೆಗೆ ಸಚಿವರಾಗಿರುತ್ತಾರೋ ಅಲ್ಲಿಯವರೆಗೆ ಅವರು ಉತ್ತರ ಹೇಳುತ್ತಾರೆ ಎಂದರು.

ಸಚಿವರು ಮಾಡಿದ್ದೇನು : ಹಿಂದೆ ನಡೆದ ವಿಧಾನಸಭೆ ಕಲಾಪದ ವೇಳೆ ಅಲ್ಪಸಂಖ್ಯಾತ ಆಯೋಗದ ವರದಿ ಕುರಿತಂತೆ ಸಚಿವ ಖಮರುಲ್ ಇಸ್ಲಾಂ ಅವರು, ಸದನದಲ್ಲಿ ಸುಳ್ಳು ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಡಾ.ಎ.ಹೆಚ್.ಶಿವಯೋಗಿಸ್ವಾಮಿ ಸಲ್ಲಿಸಿದ ಹಕ್ಕುಚ್ಯುತಿ ದೂರಿನ ವಿಚಾರಣೆ ನಡೆಸಿದ್ದ ಹಕ್ಕುಬಾಧ್ಯತಾ ಸಮಿತಿ ಬುಧವಾರ ತನ್ನ ವರದಿ ನೀಡಿತ್ತು.

ಸಮಿತಿ ಅಧ್ಯಕ್ಷ ಗೋ.ಮಧುಸೂದನ್ ಜೂನ್ 25ರಂದು ವಿಧಾನಪರಿಷತ್ತಿಗೆ ಸಲ್ಲಿಸಿದ ವರದಿಯಲ್ಲಿ ಸಚಿವರ ಸುಳ್ಳುಮಾಹಿತಿ ನೀಡಿರುವುದ ನಿಜ ಖಮರುಲ್ ಇಸ್ಲಾಂ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕೆಂದು ಶಿಫಾರಸು ಮಾಡಿದ್ದರು. ಗುರುವಾರವೂ ಬಿಜೆಪಿ ಸದಸ್ಯರು ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+