'ನಾನು ತಪ್ಪು ಮಾಡಿದ್ದರೆ ಪ್ರಶ್ನಿಸಲು ಧರ್ಮ ಪತ್ನಿ ಇದ್ದಾಳೆ'

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 05 : ಕರ್ನಾಟಕ ವಿಧಾನಸಭೆಯ ಆರು ದಿನಗಳ ಜಂಟಿ ಅಧಿವೇಶನಕ್ಕೆ ಶನಿವಾರ ತೆರೆಬಿದ್ದಿದೆ. ದುಬಾರಿ ವಾಚ್ ವಿಚಾರದಲ್ಲಿ ಕುಮಾರಸ್ವಾಮಿ ಅವರಿಂದ ತೇಜೋವಧೆ ಆಗಿದೆ ಎಂದು ಆರೋಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಅವರು ಸುದೀರ್ಘ ಉತ್ತರ ನೀಡಿದರು.

ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣ ಸೇರಿ ಒಟ್ಟು ಆರು ದಿನಗಳ ಕಲಾಪ ನಡೆದಿದೆ. ಶನಿವಾರದ ಕಲಾಪದ ಬಳಿಕ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸದಸವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ. ಮಾರ್ಚ್ 18ರಂದು ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಲಿದ್ದು, ಅಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. [ವಾಚ್ ವಿವಾದ : ಎಚ್ಡಿಕೆ ವಿರುದ್ಧ ತನಿಖೆಗೆ ಆದೇಶ!]

assembly session

ಕುಮಾರಸ್ವಾಮಿ ಸುದೀರ್ಘ ಉತ್ತರ : ವಜ್ರ ಖಚಿತ ಊಬ್ಲೋ ವಾಚ್ ವಿವಾದದಲ್ಲಿ ಕುಮಾರಸ್ವಾಮಿ ಅವರಿಂದ ತೇಜೋವಧೆ ಆಗಿದೆ ಎಂದು ಆರೋಪಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಅವರು ಇಂದು ಸುದೀರ್ಘ ಉತ್ತರ ನೀಡಿದರು. [ವಾಚ್ ವಾರ್ : ಎಚ್ಡಿಕೆಯಿಂದ ಕಾಗೋಡು ತಿಮ್ಮಪ್ಪ ತನಕ!]

ಶನಿವಾರದ ಕಲಾಪದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, 'ನನ್ನ ತೇಜೋವಧೆ ಮಾಡಿದ್ದು ನೀವು. ನಾನು ತಪ್ಪು ಮಾಡಿದ್ದರೆ ಅದನ್ನು ಪ್ರಶ್ನಿಸಲು ಧರ್ಮ ಪತ್ನಿ ಇದ್ದಾಳೆ. ಆದರೆ, ನೀವು ನನ್ನ ತೇಜೋವಧೆ ಮಾಡಲು ವಿಧಾನಸೌಧದಲ್ಲಿ ನಿಮ್ಮ ಬೆಂಬಲಿಗರಿಗೆ ಪತ್ರಿಕಾಗೋಷ್ಠಿ ನಡೆಸಲು ಅವಕಾಶ ಮಾಟ್ಟಿದ್ದೀರಿ. ದಯವಿಟ್ಟು ಈ ರೀತಿ ತೇಜೋವಧೆ ಮಾಡಬೇಡಿ' ಎಂದರು. [ಸಖತ್ ಮಿಂಚುತ್ತಿರುವ ದುಬಾರಿ ಉಬ್ಲೋ ವಾಚುಗಳ ಕಥೆ]

ಮುಖ್ಯಮಂತ್ರಿಗಳ ಬಳಿ ಇದ್ದದ್ದು ಕದ್ದ ವಾಚೋ?, ಗಿಫ್ಟ್ ವಾಚೋ? ಎನ್ನುವುದನ್ನು ಅವರೇ ಸ್ಪಷ್ಟಪಡಿಸಲಿ. ನನ್ನನ್ನು ಹಿಟ್ ಅಂಡ್ ರನ್ ಅಂದರೂ ಪರವಾಗಿಲ್ಲ. ವಾಚ್ ವಿಚಾರಕ್ಕೆ ನಾನು ತಿಲಾಂಜಲಿ ಹಾಡುತ್ತೇನೆ. ಹಾದಿ ಬೀದಿಯಲ್ಲಿ ಹೋಗುವವರು ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾರೆ' ಎಂದರು. ['ಕುಮಾರಸ್ವಾಮಿ ಪತ್ನಿ ನಟಿಯಲ್ಲವೇ, ಮಗ ಹೀರೋ ಅಲ್ಲವೇ?']

'ಸಿದ್ಧಾಂತಗಳ ವಿಚಾರ ಬಂದಾಗ ನಾನು ವಾಚ್ ವಿಚಾರ ಪ್ರಸ್ತಾಪಿಸಿದೆ. 10 ದಿನ ಆದಮೇಲೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ಕೊಟ್ಟರು. ನಂತರ ಗುಜರಿ, ಹರಾಜು ಬಗ್ಗೆ ಆರೋಪ, ಪ್ರತ್ಯಾರೋಪ ನಡೆಯಿತು. ಹಿಂದೆ ನಾನು ಬಿಜೆಪಿ ವಿರುದ್ಧ ಹೋರಾಟ ಮಾಡಿದಾಗ ಕಾಂಗ್ರೆಸ್‍ನವರು ಫಲ ಉಂಡರು. ಈಗ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡಿದಾಗ ಬಿಜೆಪಿಯವರು ಲಾಭ ಪಡೆಯುತ್ತಾರೆ' ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
5 days Karnataka Assembly joint session in Vidhana Soudha, Bengaluru. Day 6 March 5 2016 highlights. What happened in the Assembly?
Please Wait while comments are loading...