ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Karnataka Assembly Elections 2023: ಈ 70 ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್‌ ಬಹುತೇಕ ಖಚಿತ- ಕ್ಷೇತ್ರವಾರು ಪಟ್ಟಿ ನೋಡಿ

ಕರ್ನಾಟಕ ಚುನಾವಣೆಗೆ ಇನ್ನೆಡರು ತಿಂಗಳು ಬಾಕಿ ಇದೆ. ರಾಜಕೀಯ ಪಕ್ಷಗಳು ಈಗಾಗಲೇ ತಯಾರಿ ನಡೆಸುತ್ತಿವೆ. 70 ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್‌ ಬಹುತೇಕ ಖಚಿತವಾಗಿದೆ. ಅಭ್ಯರ್ಥಿಗಳ ಕ್ಷೇತ್ರವಾರು ಪಟ್ಟಿ ಇಲ್ಲಿದೆ.

|
Google Oneindia Kannada News

ಬೆಂಗಳೂರು, ಫೆಬ್ರವರಿ 04: ಕರ್ನಾಟಕ ಚುನಾವಣೆಗೆ ಇನ್ನೆಡರು ತಿಂಗಳು ಬಾಕಿ ಇದೆ. ರಾಜಕೀಯ ಪಕ್ಷಗಳು ಈಗಾಗಲೇ ತಯಾರಿ ನಡೆಸುತ್ತಿವೆ. ಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಹೊಂದಿರುವ ಜೆಡಿಎಸ್‌ ಈಗಾಗಲೇ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿಯ ಸಭೆ ನಡೆಯಲಿದೆ. ಇನ್ನು ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಈ ತಿಂಗಳೊಳಗೆ ಅಂತಿಮಗೊಳಿಸಲಿದೆ. ಗುರುವಾರ ನಡೆದ ಕಾಂಗ್ರೆಸ್‌ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಮಾಲೋಚನೆಗಳು ನಡೆದಿವೆ. ಈ ಸಮಾಲೋಚನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರು ಅಭ್ಯರ್ಥಿಗಳ ಆಯ್ಕೆ ಸಂಬಂಧ ಸುಳಿವೊಂದನ್ನು ಬಿಟ್ಟುಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಕಾಂಗ್ರೆಸ್‌ನ ಮೊದಲ ಪಟ್ಟಿ ಸಿದ್ದಗೊಂಡಿರುವುದು ಖಚಿತವಾಗುತ್ತದೆ.

 ಡಿಕೆಶಿ ನೀಡಿದ ಸುಳಿವೇನು?

ಡಿಕೆಶಿ ನೀಡಿದ ಸುಳಿವೇನು?

2018 ರಲ್ಲಿ ಆಯ್ಕೆಯಾಗಿರುವ ಕಾಂಗ್ರೆಸ್‌ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸಹಾಯ ಮಾಡಲಿಲ್ಲ. ಆದರೆ, ಅವರು ತಮ್ಮ ಕ್ಷೇತ್ರಗಳ ಶ್ರೇಯೋಭಿವೃದ್ಧಿಗಾಗಿ ದುಡಿದಿದ್ದಾರೆ. ಜನರ ನಡುವೆ ನಿಂತು ಅವರ ಕಷ್ಟಗಳನ್ನು ಆಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಿರುವ ಕಾಂಗ್ರೆಸ್‌ನ ಬಹುತೇಕ ಹಾಲಿ ಶಾಸಕರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗಲಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.

 2018ರ ವಿಧಾನಸಭೆ ಚುನಾವಣೆ ಫಲಿತಾಂಶ

2018ರ ವಿಧಾನಸಭೆ ಚುನಾವಣೆ ಫಲಿತಾಂಶ

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಒಟ್ಟು 225 ಕ್ಷೇತ್ರಗಳಲ್ಲಿ 104 ಕ್ಷೇತ್ರಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿತ್ತು. ಕಾಂಗ್ರೆಸ್‌ 80 ಕ್ಷೇತ್ರಗಳಲ್ಲಿ ಜಯಬೇರಿ ಬಾರಿಸಿತ್ತು. ಜೆಡಿಎಸ್‌ಗೆ 37 ಸ್ಥಾನಗಳು ದೊರೆತಿದ್ದವು.

 ಕಾಂಗ್ರೆಸ್‌ನ ಈಗಿರುವ ಶಾಸಕರಿಗೆ ಟಿಕೆಟ್‌: ಪಟ್ಟಿ ಇಲ್ಲಿದೆ

ಕಾಂಗ್ರೆಸ್‌ನ ಈಗಿರುವ ಶಾಸಕರಿಗೆ ಟಿಕೆಟ್‌: ಪಟ್ಟಿ ಇಲ್ಲಿದೆ

1 - ಚಿಕ್ಕೋಡಿ ಸದಲಗಾ - ಗಣೇಶ್ ಹುಕ್ಕೇರಿ
2 - ಯಮಕನಮರಡಿ - ಸತೀಶ್ ಜಾರಕಿಹೊಳಿ
3 - ಬೆಳಗಾವಿ ಗ್ರಾಮೀಣ - ಲಕ್ಷ್ಮೀ ಹೆಬ್ಬಾಳ್ಕರ್
4 - ಖಾನಾಪುರ - ಅಂಜಲಿ ನಿಂಬಾಳ್ಕರ್
5 - ಬೈಲಹೊಂಗಲ - ಮಹಂತೇಶ್ ಕೌಜಲಗಿ
6 - ಜಮಖಂಡಿ - ಆನಂದ್ ನ್ಯಾಮಗೌಡ (ಉಪ ಚುನಾವಣೆ)
7 - ಬಾದಾಮಿ - ಸಿದ್ದರಾಮಯ್ಯ
8 - ಬಸವನ ಬಾಗೇವಾಡಿ - ಶಿವಾನಂದ ಪಾಟೀಲ್
9 - ಬಬಲೇಶ್ವರ - ಎಂ.ಬಿ. ಪಾಟೀಲ್
10 - ಇಂಡಿ - ಯಶವಂತರಾಯ ವಿಜುಗೌಡ ಪಾಟೀಲ್
11- ಅಫಜಲ್ಪುರ - ಎಂ.ವೈ. ಪಾಟೀಲ್
12 - ಜೇವರ್ಗಿ - ಅಜಯ್ ಸಿಂಗ್
13 - ಶಹಾಪುರ - ಶರಣಬಸಪ್ಪ ದರ್ಶನಾಪುರ್
14 - ಚಿತ್ತಾಪುರ - ಪ್ರಿಯಾಂಕ್ ಖರ್ಗೆ
15 - ಕಲಬುರಗಿ ಉತ್ತರ - ಕೆ. ಫಾತಿಮಾ
16 - ಹುಮ್ನಾಬಾದ್ - ರಾಜಶೇಖರ್ ಪಾಟೀಲ್
17 - ಬೀದರ್ - ರಹೀಮ್ ಖಾನ್
18 - ಭಾಲ್ಕಿ - ಈಶ್ವರ್ ಖಂಡ್ರೆ
19 - ರಾಯಚೂರು ಗ್ರಾಮೀಣ - ಬಸವರಾಜ್ ದಡ್ಡಾಳ್
20 - ಲಿಂಗಸ್ಗೂರು - ಡಿ.ಎಸ್ ಹುಲಿಗೇರಿ
21 - ಮಸ್ಕಿ - ಪ್ರತಾಪ್ ಗೌಡ ಪಾಟೀಲ್
22 - ಕುಷ್ಟಗಿ - ಅಮರೇಗೌಡ ಬಯ್ಯಾಪುರ
23 - ಕೊಪ್ಪಳ - ರಾಘವೇಂದ್ರ ಹಿಟ್ನಾಳ್
24 - ಗದಗ - ಎಚ್.ಕೆ. ಪಾಟೀಲ್
25 - ಹುಬ್ಬಳ್ಳಿ ಧಾರವಾಡ ಪೂರ್ವ - ಅಬ್ಬಯ್ಯ ಪ್ರಸಾದ್
26 - ಹಳಿಯಾಳ - ಆರ್.ವಿ. ದೇಶಪಾಂಡೆ
27 - ಹೂವಿನಹಡಗಲಿ - ಪಿ.ಟಿ. ಪರಮೇಶ್ವರ್ ನಾಯ್ಕ
28 - ಹಗರಿಬೊಮ್ಮನಹಳ್ಳಿ - ಭೀಮಾನಾಯಕ್
29 - ಕಂಪ್ಲಿ - ಜೆ.ಎನ್. ಗಣೇಶ್
30 - ಬಳ್ಳಾರಿ - ಬಿ. ನಾಗೇಂದ್ರ
31 - ಸಂಡೂರು - ಇ ತುಕರಾಮ್
32 - ಚಳ್ಳಕೆರೆ- ರಘು ಮೂರ್ತಿ
33 - ಹರಿಹರ - ಎಸ್. ರಾಮಪ್ಪ
34 - ದಾವಣಗೆರೆ ದಕ್ಷಿಣ - ಶಾಮನೂರು ಶಿವಶಂಕರಪ್ಪ
35 - ಭದ್ರಾವತಿ - ಬಿ.ಕೆ. ಸಂಗಮೇಶ್

ಇನ್ನುಳಿದ 35 ಅಭ್ಯರ್ಥಿಗಳ ಪಟ್ಟಿ ಇಂತಿದೆ

ಇನ್ನುಳಿದ 35 ಅಭ್ಯರ್ಥಿಗಳ ಪಟ್ಟಿ ಇಂತಿದೆ

36 - ಶೃಂಗೇರಿ - ಟಿ.ಡಿ. ರಾಜೇಗೌಡ
37 - ಕುಣಿಗಲ್ - ಡಾ. ಎಚ್. ಡಿ. ರಂಗನಾಥ್
38 - ಕೊರಟಗೆರೆ - ಜಿ. ಪರಮೇಶ್ವರ್
39 - ಪಾವಗಡ - ವೆಂಕಟರಮಣಪ್ಪ
40 - ಗೌರಿಬಿದನೂರು - ಎನ್.ಎಚ್. ಶಿವಶಂಕರ್ ರೆಡ್ಡಿ
41 - ಬಾಗೇಪಲ್ಲಿ - ಎಸ್.ಎನ್. ಸುಬ್ಬಾರೆಡ್ಡಿ
42 - ಶಿಡ್ಲಘಟ್ಟ - ವಿ. ಮುನಿಯಪ್ಪ
43 - ಶ್ರೀನಿವಾಸಪುರ - ಕೆ. ರಮೇಶ್ ಕುಮಾರ್
44 - ಕೆಜಿಎಫ್ - ಎಂ. ರೂಪಕಲಾ
45 - ಬಂಗಾರಪೇಟೆ - ಎಸ್.ಎನ್. ನಾರಾಯಣಸ್ವಾಮಿ
48 - ಕೋಲಾರ - ಸಿದ್ದರಾಮಯ್ಯ
49 -ಮಾಲೂರು - ಕೆ.ವೈ. ನಂಜೇಗೌಡ
50- ಬ್ಯಾಟರಾಯನಪುರ - ಕೃಷ್ಣ ಬೈರೇಗೌಡ
51 - ಹೆಬ್ಬಾಳ - ಭೈರತಿ ಸುರೇಶ್
52 - ಪುಲಕೇಶಿನಗರ - ಅಖಂಡ ಶ್ರೀನಿವಾಸಮೂರ್ತಿ
53 - ಸರ್ವಜ್ಞನಗರ - ಕೆ.ಜೆ. ಜಾರ್ಜ್
54 - ಶಿವಾಜಿನಗರ - ರಿಜ್ವಾನ್ ಅರ್ಷದ್
55 - ಶಾಂತಿನಗರ - ಎನ್.ಎ. ಹ್ಯಾರಿಸ್
56 - ಗಾಂಧಿನಗರ - ದಿನೇಶ್ ಗುಂಡೂರಾವ್
57 - ವಿಜಯನಗರ - ಎಂ. ಕೃಷ್ಣಪ್ಪ
58 - ಚಾಮರಾಜಪೇಟೆ - ಜಮೀರ್ ಅಹಮದ್ ಖಾನ್
59 - ಬಿಟಿಎಂ ಲೇಔಟ್ - ರಾಮಲಿಂಗಾ ರೆಡ್ಡಿ
60 - ಜಯನಗರ - ಸೌಮ್ಯಾ ರೆಡ್ಡಿ
61 - ಆನೇಕಲ್ - ಶಿವಣ್ಣ
62 - ಹೊಸಕೋಟೆ - ಶರತ್ ಬಚ್ಚೇಗೌಡ
63 - ದೊಡ್ಡಬಳ್ಳಾಪುರ - ವೆಂಕಟರಮಣಯ್ಯ
64 - ಕನಕಪುರ - ಡಿ.ಕೆ. ಶಿವಕುಮಾರ್
65 - ಮಂಗಳೂರು - ಯು.ಟಿ. ಖಾದರ್
66- ಹುಣಸೂರು - - ಎಚ್. ಪಿ. ಮಂಜುನಾಥ್
67 - ಹೆಗ್ಗಡದೇವನಕೋಟೆ - ಅನಿಲ್ ಚಿಕ್ಕಮಾಧು
68 - ನರಸಿಂಹರಾಜ - ತನ್ವೀರ್ ಸೇಠ್
69 - ವರುಣಾ - ಡಾ. ಯತೀಂದ್ರ
70- ಹನೂರು - ಆರ್. ನರೇಂದ್ರ

English summary
In the Congress meeting held on Thursday, consultations were held regarding the selection of candidates. After this consultation, KPCC President DK Shivakumar, who spoke to reporters, gave a hint about the selection of candidates,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X