5 ತಿಂಗಳಲ್ಲಿ 18.8 ಲಕ್ಷ ಹೊಸ ಮತದಾರರನ್ನು ಸೇರ್ಪಡೆಗೊಳಿಸಿದ ಚುನಾವಣಾ ಆಯೋಗ
ಬೆಂಗಳೂರು, ಮಾರ್ಚ್ 29: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಳ ಮಾಡುವ ಪ್ರಯತ್ನದ ಭಾಗವಾಗಿ ಭಾರತೀಯ ಚುನಾವಣಾ ಆಯೋಗವು ತನ್ನ ನೋಂದಣಿ ಅಭಿಯಾನದ ಭಾಗವಾಗಿ ಕಳೆದ ಐದು ತಿಂಗಳಲ್ಲಿ 18.8 ಲಕ್ಷ ಅರ್ಹ ಮತದಾರರನ್ನು ಸೇರ್ಪಡೆ ಮಾಡಿದೆ.
ಅಲ್ಲದೆ ಈ ವರ್ಷದ ಜನವರಿ 2ರಿಂದ ಏಪ್ರಿಲ್ 1ರ ನಡುವೆ 18 ವರ್ಷ ತುಂಬಿದ 1.3 ಲಕ್ಷ ಯುವಕರು ತಮ್ಮ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಪರಿಶೀಲನೆಯ ನಂತರ ಅವುಗಳನ್ನು ಏಪ್ರಿಲ್ 10 ರೊಳಗೆ ಅನುಮೋದಿಸಲಾಗುತ್ತದೆ. ಚುನಾವಣಾ ಆಯೋಗದ ಅಂಕಿಅಂಶದ ಪ್ರಕಾರ, ಚುನಾವಣಾ ಸಮಿತಿಯು ನವೆಂಬರ್ 9, 2022 ಮತ್ತು ಮಾರ್ಚ್ 23, 2023 ರ ನಡುವೆ ಹೊಸ ಮತದಾರರಿಂದ 23.3 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದೆ. ಅವುಗಳಲ್ಲಿ 18.8 ಲಕ್ಷ ಅರ್ಜಿಗಳು ಕ್ರಮಬದ್ಧವಾಗಿವೆ ಎಂದು ತಿಳಿಸಲಾಗಿದೆ.

ಹೊಸ ಮತದಾರರು ಮತದಾರರಾಗಿ ಸೇರ್ಪಡೆಗೊಳ್ಳಲು ನಮೂನೆ 6 ರೊಂದಿಗೆ ಅರ್ಜಿ ಸಲ್ಲಿಸಬೇಕು. ನಮ್ಮ ಅಧಿಕಾರಿಗಳು ರಾಜ್ಯದ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಯುವಕರನ್ನು ತಲುಪಿದ್ದರು. ಈ ಸಾಧನೆಯನ್ನು 4ರಿಂದ 5 ತಿಂಗಳುಗಳಲ್ಲಿ ಸಾಧಿಸಲಾಗಿದೆ ಎಂದು ಕರ್ನಾಟಕ ಚುನಾವಣಾ ಆಯೋಗದ ಘಟಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಎಲ್ಲಾ ಜಿಲ್ಲೆಗಳು ಮತದಾರರ ಪಟ್ಟಿಗೆ ಏಕರೂಪವಾಗಿ ಕೊಡುಗೆ ನೀಡಿವೆ ಮತ್ತು ಕೆಲವು ಹೆಚ್ಚು ಹೊಸ ಮತದಾರರನ್ನು ಹೊಂದಿವೆ. ಪ್ರತಿ ಜಿಲ್ಲೆಯಲ್ಲಿ ಸರಾಸರಿ 40,000 ರಿಂದ 60,000 ಮತದಾರರು ಸೇರ್ಪಡೆಯಾಗಿದ್ದಾರೆ. ಬೆಂಗಳೂರು ನಗರ (ಬಿಬಿಎಂಪಿ ಹೊರತುಪಡಿಸಿ), ಬೆಳಗಾವಿ, ಮೈಸೂರು ಮತ್ತು ವಿಜಯಪುರದಂತಹ ಕೆಲವು ಜಿಲ್ಲೆಗಳು ತಲಾ ಒಂದು ಲಕ್ಷಕ್ಕೂ ಹೆಚ್ಚು ಮತದಾರರನ್ನು ಸೇರಿಸಲಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಸುಮಾರು 2 ಲಕ್ಷ ಅರ್ಜಿಗಳು ಬಂದಿದ್ದರೂ, ವಿವಿಧ ಕಾರಣಗಳಿಗಾಗಿ ಸುಮಾರು 24,500 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಸುಮಾರು 1.8 ಲಕ್ಷ ಅರ್ಜಿಗಳ ಪೈಕಿ ಬೆಳಗಾವಿಯಲ್ಲಿ 1.5 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಹಲವು ಅರ್ಜಿಗಳು ತಿರಸ್ಕೃತವಾಗಲು ಪ್ರಮುಖ ಕಾರಣ ಅಭ್ಯರ್ಥಿಗಳು ಚುನಾವಣಾ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸದೆ ಈ ಹಿಂದೆ ನೋಂದಾಯಿಸಿಕೊಂಡಿದ್ದರು ಮತ್ತು ಹೊಸದಾಗಿ ಅರ್ಜಿ ಸಲ್ಲಿಸಿದ್ದರು. ಬೆಂಗಳೂರು ನಗರವು ಅತಿ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದರೆ ಬಿಬಿಎಂಪಿ (ಉತ್ತರ) 94,625 ಅರ್ಜಿಗಳನ್ನು ಸ್ವೀಕರಿಸಿದೆ. ನಂತರ ಬಿಬಿಎಂಪಿ (ದಕ್ಷಿಣ) 75,863 ಮತ್ತು ಬಿಬಿಎಂಪಿ (ಕೇಂದ್ರ) ) 72,687 ಜೊತೆ," ಪರಿಷ್ಕರಣೆ ಮೇಲ್ವಿಚಾರಣೆ ಅಧಿಕಾರಿ ಹೇಳಿದರು.
Code of Conduct: ಸರ್ಕಾರಿ ಕಾರ್ಯಕ್ರಮಗಳನ್ನು ರದ್ದು ಮಾಡಿದ ಬಸವರಾಜ ಬೊಮ್ಮಾಯಿ
ಕೇಂದ್ರ ಚುನಾವಣಾ ಆಯೋಗವು ಇಂದು ಮಾರ್ಚ್ 29, 2023 ಬುಧವಾರ ಬೆಳಿಗ್ಗೆ 11:30 ಗಂಟೆಗೆ ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಪ್ರಮುಖ ರಾಜಕೀಯ ಪಕ್ಷಗಳಾದ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ಜನತಾ ದಳ ಹಾಗೂ ಆಮ್ ಆದ್ಮಿ ಪಕ್ಷಗಳು ಕರ್ನಾಟಕ ಚುನಾವಣಾ ಸಮರಕ್ಕೆ ತಯಾರಿ ನಡೆಸುತ್ತಿವೆ.
ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಬಿಜೆಪಿಯು ಚುನಾವಣಾ ದಿನಾಂಕ ಘೋಷಣೆಯ ನಂತರ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದ್ದಾರೆ.












Click it and Unblock the Notifications